ನಾಳೆ ಪ್ರೊ. ಕೃಷ್ಣೇಗೌಡರ ಹಾಸ್ಯ ಮತ್ತು ಬೇಂದ್ರೆ ದರ್ಶನ ಕಾರ್ಯಕ್ರಮ
ಬೆಳಗಾವಿ 12 : ಇದೇ ದಿನಾಂಕ 14 ಶನಿವಾರದಂದು ಸಾಯಂಕಾಲ 5-30 ಕ್ಕೆ ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರ (ಹಳೆ ರಿಜ್ ಟಾಕೀಜ್) ದಲ್ಲಿ ತೇಜೋಮಯ ಸಂಘಟನೆ ಮತ್ತು ಹಾಸ್ಯಕೂಟದವರು ನಗೆಸಂಜೆ ಮತ್ತು ಬೇಂದ್ರೆ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀ ಖ್ಯಾತಿಯ ಪ್ರೊ. ಕೃಷ್ಣೇಗೌಡರು ತಮ್ಮ ಮಾತುಗಳಿಂದ ಜನರನ್ನು ನಗೆಗಡಲಲ್ಲಿ ತೇಲಿಸಲಿದ್ದು ಧಾರವಾಡದ ಅನಂತ ದೇಶಪಾಂಡೆಯವರು ಬೇಂದ್ರೆ ದರ್ಶನ ಮಾಡಿಸಲಿದ್ದಾರೆ.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂಘಟಕರನ್ನು ಪ್ರೋತ್ಸಾಹಿಸಬೇಕೆಂದು ತೇಜೋಮಯ ಅಧ್ಯಕ್ಷರಾದ ಅರವಿಂದ ಪಾಟೀಲ ಮತ್ತು ಹಾಸ್ಯಕೂಟ ಸಂಚಾಲಕರಾದ ಗುಂಡೇನಟ್ಟಿ ಮಧುಕರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.