ಇಂದು ಛಲವಾದಿ ಸಮುದಾಯದ ಚಿಂತನ ಮಂಥನ ಸಭೆ
Today is the brainstorming meeting of the Chalavadi community.
ಹುಕ್ಕೇರಿ 13: ಚಿಕ್ಕೋಡಿಯಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಛಲವಾದಿ ಮಹಾಸಭೆ ಛಲವಾದಿ ಸಮುದಾಯ ಸಮಸ್ಯೆ ಮತ್ತು ಸವಾಲುಗಳ ಕುರಿತು ಚರ್ಚಿಸುವ ಉದ್ದೇಶದಿಂದ 14ರಂದು ಚಿಕ್ಕೋಡಿಯ ಡಾ. ಅರವಿಂದ್ ಘಟ್ಟಿ ತೋಟದ ಸಭಾಂಗಣದಲ್ಲಿ ಚಿಂತನ ಮಂಥನ ಸಭೆ ಆಯೋಜಿಸಲಾಗಿದೆ. ಮಹಾವೀರ್ ಮೋಹತೆ, ಶ್ಯಾಮ ರವಡೆ, ಡಾಕ್ಟರ್ ಅರವಿಂದ್ ಘಟ್ಟಿ, ಸೋಮಶೇಖರ್ ಬಣ್ಣದಮನೆ ಹಾಗೂ ಮಲ್ಲಿಕಾರ್ಜುನ ರಾಸಿಂಗೆ, ಮಲ್ಲೇಶ್ ಚೌಗಲೆ ಇವರ ನೇತೃತ್ವದಲ್ಲಿ ಜರುಗಲಿದೆ ಎಂದು ಸುರೇಶ್ ತಳವಾರ್ ಅವರು ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹುಕ್ಕೇರಿ ತಾಲೂಕಿನ ಸಮಸ್ತ ಛಲವಾದಿ ಸಮಾಜದ ಎಲ್ಲ ಮುಖಂಡರು ಯುವಕರು ಕಾರ್ಯಕ್ರಮಕ್ಕೆ ಭಾಗವಹಿಸಿ ಯಶಸ್ವಿಗೊಳಿಸಬೇಕು. ಕಾರ್ಯಕ್ರಮವು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಉದ್ಘಾಟಿಸುವರು. ಸಭೆಯಲ್ಲಿ ಶಾಸಕ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ, ಶಾಸಕರಾದ ಕೆ. ಆರ್. ಕೃಷ್ಣಮೂರ್ತಿ ಹಾಗೂ ಮಹೇಂದ್ರ ತಮ್ಮನವರ್, ವಿಧಾನ ಪರಿಷತ್ ಸದಸ್ಯ ನೆಹರು ಓಲೆಕಾರ್, ಕೆ ಶಿವಕುಮಾರ್, ಎಫ್.ಎಚ್ ಜಕ್ಕಪ್ಪನವರ್, ಮಾಜಿ ಶಾಸಕ ಶ್ಯಾಮ್ ಘಾಟಿಗೆ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಶ್ರೀಕಾಂತ ತಳವಾರ, ಶಂಕರ ತಿಪ್ಪನಾಯಿಕ, ಮಾರುತಿ ತಳವಾರ, ಶಿವು ಕಣಗಲಿ, ಮುತ್ತು ಕಾಂಬಳೆ, ಅಪ್ಪಣ್ಣ ಖಾತೇದಾರ, ವಿನೋದ ಮಾಳಗೆ, ಮಂಜು ಕಾಮತ್, ಬಾಳು ಘಸ್ತಿ, ಕೆಂಪಣ್ಣ ಕೆಂಪರಾಯಗೋಳ, ಪುನೀತ್ ಮಾಳಗೆ, ರವಿ ಖಾತೇದಾರ, ಕಿರಣ ಕೋಳಿ, ವಿಶಾಲ ಜಯಕರ, ಶಿವಾನಂದ ಕಾಂಬಳೆ, ಅಮರ ಶಿಂಗೆ, ಛಲವಾದಿ ಸಮುದಾಯದ ಮುಖಂಡರು ಗಣ್ಯಮಾನ್ಯರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 