ಇಂದು ಅತೀರುದ್ರ ಹೋಮ ಹಾಗೂ ಕುಂಭಮೇಳದ ಯಾಗ ಪೂರ್ವಭಾವಿ ಸಭೆ
Today is the Athirudra Homa and the pre-Yaga meeting for the Kumbh Mela
ಇಂದು ಅತೀರುದ್ರ ಹೋಮ ಹಾಗೂ ಕುಂಭಮೇಳದ ಯಾಗ ಪೂರ್ವಭಾವಿ ಸಭೆ
ಗದಗ 16: ನವೆಂಬರ್-11 ರಿಂದ 18 ರ ವರೆಗೆ ಅತೀರುದ್ರ ಹೋಮ ಹಾಗೂ ಕುಂಭಮೇಳದ ಯಾಗ ನಡೆಯಲಿದ್ದು, ಜಿಲ್ಲೆಯ ಎಲ್ಲ ಸಮಾಜದ ಮುಖಂಡರು ಶುಕ್ರವಾರ ದಿ. 17ರಂದು ಸಾಯಂಕಾಲ 5 ಗಂಟೆಗೆ ನಗರದ ಮುಳಗುಂದ ನಾಕಾ ಬಳಿ ಇರುವ ಶ್ರೀ ವಿಠ್ಠಲಾರೂಢ ಸಮುದಾಯ ಭವನದಲ್ಲಿ ಸಭೆ ಕರೆಯಲಾಗಿದ್ದು, ಈ ಸಭೆಗೆ ಜಿಲ್ಲೆಯ ಪ್ರಮುಖ ನಾಯಕರು ಭಾಗಿಯಾಗಲಿದ್ದು, ಎಲ್ಲ ಸಮುದಾಯವನ್ನೊಳಗೊಂಡು ಎಲ್ಲರ ಸಹಭಾಗಿತ್ವ ಬಹು ಮುಖ್ಯ ಎಂದು ವೆಂಕಟೇಶ ಕುಲಕರ್ಣಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಹದೇವಾನಂದ ಗಿರಿ ಜೀ ಮಹಾರಾಜ ಸೇರಿ ಜನಪ್ರತಿನಿಧಿಗಳು, ಗಣ್ಯ ವ್ಯಾಪಾರಸ್ಥರು, ಎಲ್ಲ ಸಮಾಜದ ಮುಖಂಡರು, ಸಂಘ ಸಂಸ್ಥೆಯ ಮುಖಂಡರು ಮಹಿಳಾ ಮುಖಂಡರು ಭಾಗಿಯಾಗುವುದಾಗಿ ಹೇಳಿದರು.
ಇದೇ ವೇಳೆ ಕಿರಣ ಭೂಮಾ ಮಾತನಾಡಿ ಅತಿರುದ್ರ ಮಹಾಯಾಗವು 9 ಅಗ್ನಿ ಕುಂಡದೊಂದಿಗೆ ನವಂಬರ್ 11ರಿಂದ18ರ ವರೆಗೆ ಗದಗ ನಗರದ ವಿ.ಡಿ.ಎಸ್.ಟಿ.ಸಿ. ಮೈದಾನ ಜಿಲ್ಲಾ ಕ್ರೀಡಾಂಗಣದ ಹತ್ತಿರ ಏರಿ್ಡಸಲಾಗಿದ್ದು, ಇದರ ಪೂರ್ವಭಾವಿ ಸಭೆಯೂ ಕರೆದಿದ್ದು,ಎಲ್ಲರೂ ತಮ್ಮ ಸಲಹೆ ಸೂಚಿಸುವಂತೆ ವಿನಂತಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ರವಿ ದಂಡಿನ, ಎಸ್ ಎಚ್ ಶಿವನಗೌಡರ, ರವಿ ಎಲ್ ಗುಂಜೀಕರ, ಬಸವರಾಜ ದೇಸಾಯಿ, ರುದ್ರಣ್ಣ ಗುಳಗುಳಿ, ಬಸವರಾಜ ಬಿಂಗಿ, ಪಕೀರಸಾ ಬಾಂಡಗೆ, ಎನ್ ರಾಮರಾವ್, ಸಂತೋಷ ಚನ್ನಪ್ಪನವರ, ಸಿದ್ದು ಕವಲೂರ, ರಾಘವೇಂದ್ರ ಬಾರದ, ಅನಿಲ ಖಟವಟೆ, ಕುಮಾರ ಮಾರನಬಸರಿ, ಅವಿನಾಶ ಜೈನ್, ಬಲರಾಮ ಬಸವಾ, ಶ್ರೀಮತಿ ವಿಜಯಲಕ್ಷ್ಮೀ ಮಾನ್ವಿ ಸೇರಿದಂತೆ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 