ಇಂದು ಹಳ್ಳೂರ ಗ್ರಾಮದಲ್ಲಿ ಮಾಧವಾನಂದ ಪ್ರಭುಜಿ ಅವರ ಆಧ್ಯಾತ್ಮಿಕ ಸಪ್ತಾಹ

Today is Madhavananda Prabhuji's spiritual week in Hallur village

ಇಂದು ಹಳ್ಳೂರ ಗ್ರಾಮದಲ್ಲಿ ಮಾಧವಾನಂದ  ಪ್ರಭುಜಿ ಅವರ ಆಧ್ಯಾತ್ಮಿಕ ಸಪ್ತಾಹ                                  

ಹಳ್ಳೂರ 23 : ಸಮರ್ಥ ಸದ್ಗುರು ಗಿರಿಮಲ್ಲೇಶ್ವರ ಮಹಾರಾಜರ ಮತ್ತು ಮಾಧವಾನಂದ ಪ್ರಭೂಜಿಯವರ  ಸ್ಮರಣಾರ್ಥ ಆದ್ಯಾತ್ಮ ಸಪ್ತಾಹ ಕಾರ್ಯಕ್ರಮವು ಮಂಗಳವಾರದಂದು ಗ್ರಾಮದ ಮಾಧವಾನಂದ ಆಶ್ರಮದಲ್ಲಿ ಮುಂಜಾನೆ ದಾಸ ಬೋಧ ಹಾಗೂ ವೀಣಾ ಪೂಜೆಯೊಂದಿಗೆ ಪ್ರಾರಂಭವಾಗಿ ವಿಮಲಬ್ರಹ್ಮ ನಿರೂಪಣೆ ಹಾಗೂ   ಪುಸ್ಪವೃಷ್ಟಯೊಂದಿಗೆ ಆಧ್ಯಾತ್ಮಿಕ ಸಪ್ತಾಹ ಕಾರ್ಯಕ್ರಮವು ಮಂಗಲಗೊಳ್ಳುವದು. ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ.  ಬೆನ್ನಾಳೆ ಪ್ರಭೂಜಿ ಮಹಾರಾಜರ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗುವುದು. ಆರಬಾಂವಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಭಾಲಚಂದ್ರ ಜಾರಕಿಹೋಳಿ ಅವರು ಅಧ್ಯಕ್ಷತೆ ವಹಿಸುವುರು. ಮಹಾದೇವ ಮಹಾರಾಜರು. ವಿಜಯ ಮಹಾರಾಜರು. ಅಭಿನವ ಮಂಜುನಾಥ್ ಗುರೂಜಿ. ಶ್ರೀಮಂತ ಮಹಾರಾಜರು. ಬಾಳಯ್ಯ ಸ್ವಾಮೀಜಿ. ಭರತೇಶ ಉಪಾಧ್ಯೆ ಮುಖ್ಯ ಅಥಿತಿಗಳಾಗಿ ಭಾಗವಹಿಸುವರು ಆದ್ಯಾತ್ಮ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು  ಮಾಧವಾನಂದ ಕಮಿಟಿಯವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.