ಭವಿಷ್ಯದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಇಂದಿನ ಯುವ ಸಂಶೋಧಕರು ಸಂಶೋಧನೆ ನಡೆಸುವ ಅಗತ್ಯವಿದೆ

ಭವಿಷ್ಯದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಇಂದಿನ ಯುವ ಸಂಶೋಧಕರು ಸಂಶೋಧನೆ ನಡೆಸುವ ಅಗತ್ಯವಿದೆ Today's young researchers need to conduct research keeping in mind the challenges of the future

                   ಧಾರವಾಡ 16:   ಭವಿಷ್ಯದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಇಂದಿನ ಯುವ ಸಂಶೋಧಕರು ಸಂಶೋಧನೆ ನಡೆಸುವ ಅಗತ್ಯವಿದೆ. ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪ ಅಭಿಪ್ರಾಯಪಟ್ಟರು.ಅವರು ಕರ್ನಾಟಕ ವಿಶ್ವವಿದ್ಯಾಲಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಿಎಮ್‌-ಉಷಾ ಯೋಜನೆ, ಭೌತಶಾಸ್ತ್ರ ವಿಭಾಗದ ಡಾ. ಎಮ್‌. ಆರ್‌. ಗೋರಬಾಳ್ ಫೌಂಡೇಶನ್, ಭೌತಶಾಸ್ತ್ರ ಅಲ್ಯುಮ್ನಿ ಅಸೋಸಿಯೇಷನ್ ಹಾಗೂ ಸ್ಪೈ ಸ್ಟೂಡೆಂಟ್ ಚಾಪ್ಟರಗಳ ಹಣಕಾಸಿನ ನೆರವಿನೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ  "ಕ್ವಾಂಟಮ್ ಭೌತಶಾಸ್ತ್ರದ 100 ವರ್ಷಗಳು: ಬೆಳವಣಿಗೆಗಳು ಮತ್ತು  ನಾವಿನ್ಯ ಭೌತಿಕತೆಯಲ್ಲಿ  ಬಹುಶಿಸ್ತೀಯ ಅನ್ವಯಿಕೆಗಳು" ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

                   ಯುವ ಸಂಶೋಧಕರು ಕ್ವಾಂಟಮ್ ಭೌತಶಾಸ್ತ್ರ ವಿಷಯದ ಕುರಿತ ಹೊಸ ರೀತಿಯ ಸಂಶೋಧನೆಗಳನ್ನು ನಡೆದುವ ಅಗತ್ಯವಿದೆ. ಪ್ರಮುಖವಾಗಿ ಲೇಸರ್ ಲೇಪ್ರೊಸ್ಕೊಪಿ, ಕ್ವಾಂಟಮ್ ಕಂಪ್ಯೂಟಿಂಗ್ ತಂತ್ರಜ್ಞಾನಗಳು ಹೆಚ್ಚು ಮುನ್ನಲೆಗೆ ಬರುತ್ತಿದ್ದು, ಈ ತಂತ್ರಜ್ಞಾನಗಳನ್ನು ವೈದ್ಯಕೀಯ ಚಿಕಿತ್ಸೆ ಮತ್ತು ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತಿದೆ ಆದ್ದರಿಂದ ಇಂದು ಭೌತಶಾಸ್ತ್ರದ ವ್ಯಾಪ್ತಿಯು ಹೊಸ ವಿಷಯಗಳನ್ನು ಒಳಗೊಂಡು ತನ್ನ ವಿಶಾಲವಾಗಿ ಬೆಳೆದಿದೆ ಎಂದ ಅವರುಪ್ರಸ್ತುತ ಕ್ವಾಂಟಮ್ ಭೌತಶಾಸ್ತ್ರ ವಿಜ್ಞಾನವು ವೈದ್ಯಕೀಯ ಮತ್ತು ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವದ ಪಾತ್ರವನ್ನು ವಹಿಸಿದೆ ಎಂದರು.ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಬಿ.ಜಿ. ಮೂಲಿಮನಿ ಮಾತನಾಡಿ ಭವನದಲ್ಲಿ ವಿಜ್ಞಾನವೇ ಏಕಸ್ವಾಮ್ಯದ ಕ್ಷೇತ್ರವಾಗಲಿದ್ದು ಕ್ವಾಂಟಮ್ ಮೆಕ್ಯಾನಿಕ್ಸ್‌, ಕ್ವಾಂಟಮ್ ತಂತ್ರಜ್ಞಾನ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ತಂತ್ರಜ್ಞಾನಗಳು ಪ್ರಸ್ತುತ ಹೊಸ ವಿಸ್ಮಯವನ್ನು ಸೃಷ್ಟಿಸುವ ತಂತ್ರಜ್ಞಾನಗಳಾಗಿವೆ.  

                   ಪ್ರತಿಯೊಬ್ಬ ಸಂಶೋಧಕನು ಭೌತಶಾಸ್ತ್ರ ಸಂಶೋಧನೆಯಲ್ಲಿ ಹೊಸ ಅನ್ವೇಷಣೆ ಕಂಡುಕೊಳ್ಳುತ್ತಾನೆ. ಎಂದ ಅವರು ಭೌತಶಾಸ್ತ್ರದಲ್ಲಿ ಹೊಸತನ, ಅನ್ವೇಷಣೆ ಮಾಡುಲ್ಲಿ ಆಸಕ್ತಿ ತೋರಬೇಕು ಎಂದರು.ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಗೌರವಾನ್ವಿತ ಪ್ರಾಧ್ಯಾಪಕರಾದ ಪ್ರೊ. ಎಸ್‌. ಉಮಾಪತಿ ಲ್ಯಾಪ್ರೊಸ್ಕೊಪಿ ಚಿಕಿತ್ಸೆಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಎಂಬ ವಿಷಯದ ಕುರಿತುದಿಕ್ಸೂಚಿ ಭಾಷಣ ಮಾಡಿ ಮಾತನಾಡಿ ಅವರು ಇಂದು ಕೃತಕ ಬುದ್ಧಿಮತ್ತೆ ವೈದ್ಯಕೀಯ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಬಳಕೆ ಮಾಡಲಾಗುತ್ತಿದೆ. ಇಂದು ಜಗತ್ತಿನ ಶೇಕಡಾ 20ಅ ರಷ್ಟು ಸಾವುಗಳು ನಿರ್ದಿಷ್ಟ ರೋಗ ಪತ್ತೆಮಾಡುವಲ್ಲಿ ವಿಫಲಾರಾಗುತ್ತಿರುವದು ಮುಖ್ಯ ಕಾರಣ ಪ್ರಸ್ತುತ ಎಐ ತಂತ್ರಜ್ಞಾನವನ್ನು ಮಾರಕ ರೋಗಗಳಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಲಾಗುತ್ತಿದೆ ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಎಐ ಬಳಕೆ ಮಾಡುವಾಗ ಕಾನೂನಾತ್ಮಕ ಮತ್ತು ನೈತಿಕ ಮೌಲ್ಯಗಳ ಪಾಲನೆ ಅಗತ್ಯವಿದೆ ಎಂದು ಅವರು ಕ್ವಾಂಟಮ್ ಮೆಕ್ಯಾನಿಕ್ಸ್‌ ಮತ್ತು ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ ಮುನ್ನಲೆಗೆ ಬರುತ್ತಿದೆ ಎಂದರು.

                   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ.ಖಾನ ವಹಿಸಿದ್ದರು.ಎರಡು ದಿನಗಳ ವಿಚಾರ ಸಂಕಿರಣದಲ್ಲಿಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ ಯ ಪ್ರೊ. ಎಸ್‌. ಎಮ್‌. ಶಿವಪ್ರಸಾದ್ ಹಾಗೂ ಪ್ರೊ. ಆರ್‌. ಪ್ರಭು, ಜವಾಹರಲಾಲ್ ನೆಹರು ವೈಜ್ಞಾನಿಕ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾದ ಪ್ರೊ. ಗಿರಿಧರ್ ಕುಲಕರ್ಣಿ ಹಾಗೂ ಪ್ರೊ. ಎನ್‌. ಎಸ್‌. ವಿಧ್ಯಾಧಿರಾಜಾ, ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ. ಉಷಾದೇವಿ ಹಾಗೂ ಪ್ರೊ. ಬಿ.ಎ. ಕಾಗಲಿ, ಕರ್ನಾಟಕ ವಿವಿಯ ಪ್ರೊ. ಎಮ್‌. ಕೆ. ರಬಿನಾಳ್, ಗುಲಬರ್ಗಾ ವಿವಿಯ ಪ್ರೊ. ವಿ. ಎಮ್‌. ಜಾಲಿ ಹಾಗೂ ಕರ್ನಾಟಕ ಭೌತಶಾಸ್ತ್ರ ಸಂಘದ ಅಧ್ಯಕ್ಷರಾದ ಪ್ರೊ. ಎಮ್‌. ಎಸ್‌. ಜೋಗದ್ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಲಿದ್ದಾರೆ.ಕಾರ್ಯಕ್ರಮದಲ್ಲಿ ಜಯಶ್ರೀ ಟೋನಣ್ಣವರ, ಪ್ರೊ. ಆರ್‌.ಎಫ್‌. ಭಜಂತ್ರಿ, ಡಾ.ಎ.ಎಸ್ ಬೇನಾಳ,ಡಾ.ಸುಕನ್ಯಾ ಪಾಟೀಲ ಸೇರಿದಂತೆ ಸಂಶೋಧಕರು, ವಿದ್ಯಾರ್ಥಿಗಳು ಹಾಜರಿದ್ದರು.