ಇಂದಿನ ಮಕ್ಕಳೆ ಮುಂದಿನ ಭವ್ಯ ಭಾರತದ ಪ್ರಜೆಗಳು: ಗೋರನಾಳ
ಇಂಡಿ 16: ತಾಲೂಕಿನ ಹಡಪದ ಅಪ್ಪಣ್ಣ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನಡೆದ 2024-25 ನೇ ಸಾಲಿನ ಎಸ್,ಎಸ್,ಎಲ್,ಸಿ ವಿದ್ಯಾರ್ಥಿಗಳ ಬೀಳ್ಕೊಡು ಸಮಾರಂಭ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಇಂಡಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬಿ,ಆರಿ್ಪ,ಗಳಾದ ಬಿ ಆಯ್ ಗೋರನಾಳ ಅವರು ಮಾತನಾಡಿ ವಿದ್ಯಾರ್ಥಿಗಳು ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ, ಜೀವನಕ್ಕೆ ಸಂಸ್ಕಾರ ಬಹಳ ಮುಖ್ಯ, ನಿಮ್ಮ ಭವಿಷ್ಯ ಉಜ್ವಲವಾಗಲಿ ತಂದೆ- ತಾಯಿಯರನ್ನು, ಗುರು- ಹಿರಿಯರನ್ನು ಗೌರವಿಸಬೇಕು ಮತ್ತು ಉತ್ತಮ ಅಂಕಗಳು ದೊರಕುವಂತಾಗಲಿ ಎಂದು ಹೇಳಿದರು. ಶಿಕ್ಷಕರಾದ ಎಂ ಎ ಚೌಗಲೆ ಸರ್ , ಎ ಎಸ್ ಹುಣಸಗಿ ಮಾತನಾಡಿದರು.ಆಂಗ್ಲ ಮಾಧ್ಯಮದ ಮುಖ್ಯ ಗುರುಮಾತೆಯರಾದ ಭವಾನಿ ಗೌಡ ಅವರು ಹಾಡಿನೊಂದಿಗೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಎಸ್,ಎಸ್,ಎಲ್,ಸಿ ವಿದ್ಯಾರ್ಥಿಗಳು ಕಲಿಸಿದ ಎಲ್ಲ ಗುರುಗಳಿಗೆ ನೆನಪಿನ ಕಾಣಿಕೆಯಾಗಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರವನ್ನು ಸಮರ್ಿಸಿದರು. ಈ ಸಭೆಯಲ್ಲಿ ಶಾಲೆಯ ಅಧ್ಯಕ್ಷರಾದ ಸಂತೋಷ್ ಟಿ ಗವಳಿ, ಉಪಾಧ್ಯಕ್ಷರಾದ ಶಿವಾನಂದ ಎಸ್ ನಾವಿ ,ನಿರ್ದೇಶಕರಾದ ಸಿದ್ದು ನಾವಿ, ನಟರಾಜ ಗವಳಿ, ಶಕುಂತಲಾ ಎಸ್ ನಾವಿ, ಧೂಳಪ್ಪ ಎಚ್ ನಾವಿ ,ಅಶೋಕ ಜಿ ಹಡಪದ, ಬಸವರಾಜ ಹಡಪದ, ನಾನು ಆರ್ ರಾಠೋಡ,ಕಾರ್ಯನಿರ್ವಹಣಾ ಅಧಿಕಾರಿಗಳಾದ ಸಿದ್ರಾಯ ಅಪ್ತಾಗಿರಿ,ಆಡಳಿತ ಅಧಿಕಾರಿಗಳಾದ ಪಂಡಿತ ಎಸ್ ಬಿರಾದಾರ, ಕನ್ನಡ ಮಾಧ್ಯಮದ ಮುಖ್ಯ ಗುರುಮಾತೆಯರಾದ ಜಯಶ್ರೀ ಟಿ ಗೌಡ ಉಪಸ್ಥಿತರಿದ್ದರು. ಎಸ್ ಬಿ ಮುಜಗೊಂಡ. ಸಹ ಶಿಕ್ಷಕಿಯರಾದ ರಶ್ಮಿ ಕರಗೊಣ್ಣವರ ನಿರೂಪಿಸಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಆಯ್ ಎಸ್ ರೂಗಿ ಸ್ವಾಗತಿಸಿಕೊಂಡರು. ಎಸ್ ಎನ್ ಮೊಮಿನ್ ವಂದಿಸಿದರು. ಪ್ರಾಥಮಿಕ ಶಾಲೆಯ ಸರ್ವ ಶಿಕ್ಷಕ/ಕಿಯರು ಉಪಸ್ಥಿತರಿದ್ದರು. ಕುಮಾರಿ ನಿತಾ ಕಾಳೆ ಮತ್ತು ಭಾಗ್ಯಶ್ರೀ ನರಳೆ ಸಹ ಶಿಕ್ಷಕಿಯರು ಎಲ್ಲಾ ವಿದ್ಯಾರ್ಥಿಗಳಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಿದರು. ಒಟ್ಟಾರೆಯಾಗಿ ವಿದ್ಯಾರ್ಥಿಗಳ ಬೀಳ್ಕೊಡು ಸಮಾರಂಭವು ಸುಂದರವಾಗಿ ಚೆನ್ನಾಗಿ ಮೂಡಿಬಂದಿತು.ಎಲ್ಲ ವಿದ್ಯಾರ್ಥಿಗಳು ಹರ್ಷ ವ್ಯಕ್ತ ಪಡಿಸಿದರು.