ಇಂದಿನ ಮಕ್ಕಳು ಅದೃಷ್ಟವಂತರು: ಡಾ. ಎ.ಆರ್‌.ಬೆಳಗಲಿ

ಇಂದಿನ ಮಕ್ಕಳು ಅದೃಷ್ಟವಂತರು: ಡಾ. ಎ.ಆರ್‌.ಬೆಳಗಲಿ Today's children are lucky: Dr. A.R. Belagali

ಮಹಾಲಿಂಗಪುರ 11: ಇಂದಿನ ಮಕ್ಕಳು ಅದೃಷ್ಟವಂತರು. ನಾವು ಓದುವ ಸಮಯದಲ್ಲಿ ಶಾಲೆಗಳಿಗೆ ಸ್ವಂತ ಕಟ್ಟಡವೆ ಇರುತ್ತಿರಲಿಲ್ಲ ಅಂದಿನ ಕಾಲದಲ್ಲಿ ದೇವಸ್ಥಾನಗಳಲ್ಲಿ ಓದಿ ಶಿಕ್ಷಣ ಪಡೆಯಬೇಕಾಗಿತ್ತು.  ಆದರೆ ಇಂದು ಯಾವುದೇ ಸರ್ಕಾರ ಬಂದರೂ ಶಿಕ್ಷಣಕ್ಕೆ ಒತ್ತು ನೀಡಿ ಸಕಲ ಸೌಲಭ್ಯಗಳನ್ನು ನೀಡುತ್ತಿದೆ ಮತ್ತು ಅವರ ಪ್ರತಿಭೆಯನ್ನು ಹೊರಗೆಳೆಯಲು ಪ್ರತಿಭಾ ಕಾರಂಜಿಯಂತಹ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಶಿಕ್ಷಣ ಇಲಾಖೆಯ ಇಂದಿನ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ವೈದ್ಯ ಡಾ. ಎ.ಆರ್‌.ಬೆಳಗಲಿ ಹೇಳಿದರು. 

ಸ್ಥಳೀಯ ಜ್ಞಾನಜ್ಯೋತಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಮಹಾಲಿಂಗಪುರ ಕೆ.ಜಿ.ಎಸ್ ಕ್ಲಸ್ಟರ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೆ.ಜಿ.ಎಸ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿಯೂ ಒಂದು ವಿಶೇಷ ಪ್ರತಿಭೆ ಇರುತ್ತದೆ ಶಿಕ್ಷಕರು ಆ ಪ್ರತಿಭೆಯನ್ನ ಹೊರಗಡೆದು ನಾಡಿನ ಶಕ್ತಿಯಾಗಿ ಬೆಳೆಸಬೇಕು ಅವನಲ್ಲಿರುವ ಪ್ರತಿಭೆಯನ್ನ ಕಾರಂಜಿಯಂತೆ ಚಿಮ್ಮಿಸಿ ದೇಶದ ಆಸ್ತಿಯನ್ನಾಗಿ ಮಾಡುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು. 

ಸಿಆರ್‌ಪಿ ಎ.ಎಂ.ಮಂಚದ ಮಾತನಾಡಿ, ನಮ್ಮ ಕೆಜಿಎಸ್ ಕ್ಲಸ್ಟರ್ ತಾಲೂಕಿನ ಅತಿ ದೊಡ್ಡ ಕ್ಲಸ್ಟರ್, ಇಂದು ಭಾಗವಹಿಸುತ್ತಿರುವ 26ಶಾಲೆಯ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಉನ್ನತ ಮಟ್ಟಕ್ಕೆ ಕಳಿಸುವಲ್ಲಿ ಎಲ್ಲಾ ನಿರ್ಣಾಯಕರು ಶ್ರಮಿಸಬೇಕೆಂದರು. 

ಜ್ಞಾನಜ್ಯೋತಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಲಕ್ಷ್ಮಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಮಲ್ಲು ಕುಳಲಿ ಅಧ್ಯಕ್ಷತೆ ವಹಿಸಿ, ಮುಖಂಡರಾದ ಈರ​‍್ಪ ದಿನ್ನಿಮನಿ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಹನಮಂತ ಕೊಣ್ಣೂರ, ಶಿವನಗೌಡ ಪಾಟೀಲ, ಸುನಿಲಗೌಡ ಪಾಟೀಲ, ಕಾನಿಪ ಕಾರ್ಯದರ್ಶಿ ಹಣಮಂತ ನಾವಿ, ಪ್ರತಾಪ ಗೌಡಪ್ಪಗೋಳ, ಸಿಆರ್ ಪಿಗಳಾದ ಎಂ.ಕೆ.ಸಬರದ, ವಿಜಯಕುಮಾರ ಉಪ್ಪಿನ, ವಿಜಯಕುಮಾರ ಕುಳಲಿ, ಮುಖ್ಯೋಪಾಧ್ಯಾಯ ವಿ . ಆರ್‌.ಬೀರನಗಡ್ಡಿ, ಪ್ರಫುಲ್ ಕುಳಲಿ, ಡಿ.ಎಸ್‌.ಮಳಲಿ, ಮೋಹನಕುಮಾರ, ಎಸ್‌.ಎಸ್‌. ಮಾಳಿ, ಸಿದ್ದು ಉಳ್ಳಾಗಡ್ಡಿ ಕ್ಲಸ್ಟರಿನ 26 ಶಾಲೆಗಳ ಮಕ್ಕಳು, ಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಕರಾದ ಸಂಪದ ರಾಮಗೊಂಡ, ಎಂ.ಕೆ.ಕುಲಗೋಡ ನಿರೂಪಿಸಿ,  ಎಂ.ಎಸ್‌.ಗೌಡಪ್ಪಗೋಳ ವಂದಿಸಿದರು.