ಲೋಕದರ್ಶನ ವರದಿ
ಇಂಡಿ 02: ಬಂಜಾರ ಸಮಾಜ ಶೈಕ್ಷಣಿಕ ಮತ್ತು ರಾಜಕೀಯವಾಗಿ ಮುಂದೆ ಬರಬೇಕಾದರೆ ಒಗ್ಗಟಿನ ಬಲದಿಂದ ಮಾತ್ರ ಎನ್ನನ್ನು ಸಾಧಿಸಲು ಸಾಧ್ಯ ಎಂಬ ಮನೋಭಿಮಾಲಾಶೆಯಿಂದ ಮಾರ್ಚ 03 ರಂದು ಮುಂಜಾನೆ 9-30 ಗಂಟೆಗೆ ದರಬಾರ ಹೈಸ್ಕೂಲ ಮೈಧಾನದಲ್ಲಿ ಬಂಜಾರ ಸಮುದಾಯದ ಜಿಲ್ಲಾ ಮಟ್ಟದ ಜನ ಜಾಗೃತಿ ಬೃಹತ್ ಸಮಾವೇಶ ಹಾಗೂ ನಮ್ಮ ಧರ್ಮಗುರು ಸಂತ್ ಸೇವಾಲಾಲ 280 ರ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಂತಾ ನಾಯಕ ಹೇಳಿದರು.
ಪಟ್ಟಣದ ಪತ್ರಕರ್ತರ ಸಭಾ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ತಾಲೂಕು ಮಟ್ಟದಲ್ಲಿ ಸಂತ್ ಸೇವಾಲಾಲ ಜಯಂತಿ ಆಚರಣೆ ಮಾಡಲಾಗಿದೆ ಈ ಕಾರ್ಯಕ್ರಮ ಪಕ್ಷಾತೀತವಾಗಿದೆ. ಇದು ಜಿಲ್ಲಾ ಮಟ್ಟದ ಸಮಾವೇಶ ಮಾಡಿ ಸಮಾಜದ ಜನರನ್ನು ಒಟ್ಟುಗೂಡಿಸಿ ಶೈಕ್ಷಣಿಕ ,ಆಥರ್ಿಕ, ರಾಜಕೀಯ ಮುಂದೆ ಹೇಗೆ ಬರಬೇಕು ಎನ್ನುವದನ್ನು ನಮ್ಮ ರಾಜ್ಯಮಟ್ಟದ ನಾಯಕರು ತಿಳುವಳಿಕೆ ನೀಡುತ್ತಾರೆ. ಸಂತ್ ಸೇವಾಲಾಲರ ಜಯಂತಿ ದಿನದಂದು ಅವರ ಭಾವ ಚಿತ್ರದಮೇರವಣಿಗೆ ವಿಜಯಪೂರ ಶ್ರೀಸಿದ್ದೇಶ್ವರ ದೇವಸ್ಥಾನದಿಂದ ಹೋರಟು ಪ್ರಮುಖ ರಸ್ತೆಗಳ ಮುಖಾಂತರ ಸಂಚರಿಸಿ ದರಬಾರ ಮೈದಾನಕ್ಕೆ ಬಂದು ಅಲ್ಲಿಯೇ ಬೃಹತ್ ಸಮಾವೇಶ ನಡೆಯಲಿದೆ.
ಲೋಕಸಭಾ ಚುನಾವಣೆ ಬಂದಿರುವ ಹಿನ್ನಲೆಯಲ್ಲಿ ಬಜಾರ ಸಮುದಾಯದ ಯಾವುದೇ ವ್ಯಕ್ತಿಗೆ ನೀಟಿಕೆಟ ನೀಡಬೇಕು ಎಂದು ಸಮಾವೇಶದಲ್ಲಿ ವರೀಷ್ಠರಿಗೆ ಒತ್ತಾಯಿಸುವದಾಗಿ ಹೇಳಿದ ಅವರು ಬಂಜಾರ ಸಮಾಜದ ವ್ಯಕ್ತಿಗೆ ಪಕ್ಷ ಭೇದ ಮರೇತು ಒಗ್ಗಟ್ಟಾಗಿ ಗೆಲುವಿಗೆ ಶ್ರಮಿಸುವದಾಗಿ ಹೇಳಿದರು.
ಡಾ.ರವಿಧಾಸ ಜಾಧವ ಮಾತನಾಡಿ ಲೋಕಭಾ ಚುನಾವಣೆ ಬಂದಿರುವದರಿಂದ ಬಂಜಾರ ಜನರು ಜಾಗೃತರಾಗಬೇಕು ಎಲ್ಲಾ ಪಕ್ಷಗಳಲ್ಲಿ ಪ್ರಬಲ ಆಕಾಂಕ್ಷಿಗಳಿದ್ದಾರೆ ನಿರ್ಣಯ ಮಾತ್ರ ಒಂದೇ ಆಗಿರಲಿ. ಕಾಂಗ್ರೆಸನಿಂದ ಕೊಟ್ಟರೂ ಸಹಿತ ಗೆಲುವು ಖಚಿತ. ಡಾ. ರಾಮರಾವ ಮಹಾರಾಜ್ಯ ದಿವ್ಯ ಸಾನಿಧ್ಯವಹಿಸಲ್ಲಿದ್ದಾರೆ.
ಕಾಂಗ್ರೆಸ್ ವರಿಷ್ಠರಾದ ದಿನೇಶ ಗುಂಡೂರಾವ, ಡಿ.ಕೆ ಶಿವಕುಮಾರ, ಗೃಹಸಚಿವ ಡಾ.ಎಂ.ಬಿ ಪಾಟೀಲ, ಆರೋಗ್ಯ ಸಚಿವ ಶಿವಾನಂದ ಪಾಟೀಲ, ನಗರ ನೀರು ಒಳಚರಂಡಿ ನಿಗಮ ಮಂಡಳಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ, ನಮ್ಮ ಸಮಾಜದ ನಾಯಕ ಪಿ.ಟಿ. ಪರಮೇಶ್ವರ ನಾಯಕ, ಪ್ರಕಾಶ ರಾಠೋಡ, ನಾಗಠಾಣ ಶಾಸಕ ದೇವಾನಂದ ಚ್ವಹಾಣ ಸೇರಿದಂತೆ ಅನೇಕ ಗಟಾನುಗಟ್ಟಿನಾಯಕರು ಆಗಮಿಸಲ್ಲಿದ್ದು ಆದ್ದರಿಂದ ಸಮುದಾಯದ ಕುಲ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವೀಗೋಳಿಸಲಿದ್ದಾರೆ
ತಾ.ಪಂ ಸದಸ್ಯ ಡಾ.ರವಿಧಾಸ ಜಾಧವ, ಲಿಂಬಾಜಿ ರಾಠೋಡ, ಸಂಜು ಚವ್ಹಾಣ, ವಿಜಯಕುಮಾರ ನಾಯಕ, ಅಶೋಕ ನಾಯಕ ,ಧಮರ್ು ರಾಠೋಡ, ರಾಜು ಚವ್ಹಾಣ, ಚಂದ್ರಕಾಂತ ನಾಯಕ, ಸಂಜು ಜಾಧ, ರಾಜೇಶ ಪವಾರ ,ಅವಿನಾಶ ರಾಠೋಡ, ಮೋತಿರಾಮ ರಾಠೋಡ ,ಜಗು ಪವಾರ, ಪಡೀತ ರಾಠೋಡ, ಲಕ್ಮಣ ಚವ್ಹಾಣ ಸೇರಿದಂತೆ ಅನೇಕ ಮುಖಂಡರು ಇದ್ದರು.