ಕೊಪ್ಪಳ: ಬ್ರೀಟಿಷರ ಕನಸಿನಲ್ಲೂ ಕಾಡಿದ ಕದನ ಕವಿ ಹಜರತ್ ಟಿಪ್ಪು ಸುಲ್ತಾನ್ ಎಂದು ಬೆಂಗಳೂರಿನ ಅಪರ ಪೊಲೀಸ್ ಆಯುಕ್ತರಾದ ಎಂ. ನಂಜುಂಡಸ್ವಾಮಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ನಗರದ ಸಾಹಿತ್ಯ ಭವನದಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಅವರು ಮಾತನಾಡಿದರು.
ಟಿಪ್ಪು ಸುಲ್ತಾನ್ ಒಬ್ಬ ಕನ್ನಡ ನಾಡಿನ ದೊರೆ ಯಾಗಿದ್ದರು. 40 ಸಾವಿರ ಚದರು ಅಡಿ ಇದ್ದ ಮೈಸೂರು ಸಾಮ್ರಾಜ್ಯವನ್ನು 80 ಸಾವಿರ ಚ.ಅ.ಕ್ಕೆ ವಿಸ್ತರಿಸಿದರು. ಹೈದರ ಅಲಿಯ ಗಂಡುಗಲಿ ಮಗ, ದ್ರಾವಿಡ ದೇಶದ ಇತಿಹಾಸದಲ್ಲಿ ಹೊಳೆಯುವ ರತ್ನ ಹಜರತ್ ಟಿಪ್ಪು ಸುಲ್ತಾನ್. ಮೈಸೂರಿನ ಇತಿಹಾಸದಲ್ಲಿ ಮರೆಯಲಾಗದ ಚಿನ್ನ, ನಮ್ಮ ಕರುನಾಡಿನ ಯುವಕರ ನರ-ನಾಡಿಯಲ್ಲಿ ವೀರತ್ವ ತುಂಬುವವರೇ ಟಿಪ್ಪು ಸುಲ್ತಾನ. ಇಂತಹ ಮಹಾನ ವ್ಯಕ್ತಿಯನ್ನು ನೆನಪಿಸಿಕೊಳ್ಳದಿದ್ದರೆ ನಾವು ನಮ್ಮ ತಾಯಿ ನಾಡಿನ ಪ್ರೀತಿಯನ್ನು ಮರೆತಂತೆ. ನಮಗಾಗಿ ತನ್ನ ಪ್ರಾಣವನ್ನು ಕೊಟ್ಟಿದವರನ್ನು ದೂರು ಮಾಡಿದಂತೆ. ಹೈದರ ಅಲಿ ಮತ್ತು ಫತಿಮಾ ಫಕ್ರುನ್ನಿಸಾ ದಂಪತಿಗಳಿಗೆ ಟಿಪ್ಪು ಸುಲ್ತಾನ ಕ್ರಿ.ಶ. 1750 ರಲ್ಲಿ ಜನಿಸಿದರು. ಜನ್ಮ ದಿನಾಂಕ ಕೆಲವೆಡೆ ನವೆಂಬರ್. 10 ಮತ್ತು 20 ಎಂದು ಇತಿಹಾಸದಲ್ಲಿದೆ. ತಂದೆ ಹೈದರ ಅಲಿ ಅವಿದ್ಯಾವಂತರಾಗಿದ್ದರೂ ಸಹ ಗಾಜಿಗಾನ ಮತ್ತು ಗೋವರ್ದನ ಪಂಡಿತ್ ಹೀಗೆ ಅನೇಕ ವಿದ್ವಾಂಸರಿಂದ ಟಿಪ್ಪುವಿಗೆ ಉತ್ತಮವಾದ ಶಿಕ್ಷಣವನ್ನು ನೀಡಿದರು. ಟಿಪ್ಪುವಿಗೆ ಕನ್ನಡ ಬರುತ್ತಿರಲಿಲ್ಲ ಎಂದು ಕೆಲವರು ಹೇಳುತ್ತಾರೆ.
ಈ ಕಾರಣದಿಂದ ಇಂದು ಟಿಪ್ಪು ಸುಲ್ತಾನರಿಗೆ ವೀರೊಧಿಸಲಾಗುತ್ತಿದೆ. ಟಿಪ್ಪು ಸುಲ್ತಾನ ದೊಡ್ಡ-ದೊಡ್ಡ ಅರಮನೆಯಲ್ಲಿ ಇರದೇ ಒಂದು ಚಿಕ್ಕ ಅರಮನೆಯಲ್ಲಿ ವಾಸವಾಗಿದ್ದರು. ಔರತ್ ನಿಂದ ಮೌಜನ್ ಎಂಬುವವರು ಮೈಸೂರು ಸಾಮ್ರಾಜ್ಯಕ್ಕೆ ಬಂದಾಗ ಬಾಲಕ ಟಿಪ್ಪು ಹುಲಿ ಮರಿಯೊಂದಿಗೆ ಆಟವಾಡುತ್ತಿರುವುದು ಕಂಡು ಟಿಪ್ಪು ಸುಲ್ತಾನರಿಗೆ "ಮೈಸೂರು ಹುಲಿ" ಎಂದು ಕರೆದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಹಜರತ್ ಟಿಪ್ಪು ಸುಲ್ತಾನರವರ ಕುರಿತು ನಾವೆಲ್ಲರು ಪ್ರಾಥಮಿಕ ಶಿಕ್ಷಣದ ಪಠ್ಯದಲ್ಲೆ ಕಲಿತಿದ್ದೇವೆ. ಹೋರಾಟದ ಮೂಲಕ ದೇಶಕ್ಕೆ, ನಾಡಿಗೆ ಹೊಸ-ಹೊಸ ತಂತ್ರಜ್ಞಾನಗಳನ್ನು ನೀಡಿದ್ದಾರೆ. ಸಾಮಾಜ್ಯದ ರಕ್ಷಣೆಗಾಗಿ ವಿರೋಧಿಗಳಾದ ಬ್ರೀಟಿಷ ಕಡೆ ತನ್ನ ಸ್ವಂತ ಮಕ್ಕಳನ್ನೇ ಒತ್ತೆ ಇಟ್ಟ ಇತಿಹಾಸ ಟಿಪ್ಪು ಅವರದ್ದು. ಬ್ರೀಟಿಷರ ನಿದ್ದೆಗೆಡಿಸಿದಲ್ಲದೇ ಅವರ ಕನಸಿನಲ್ಲೂ ಪದೇ-ಪದೇ ಬಂದು ಬಯ ಹುಟ್ಟಿಸುವರೇ ಟಿಪ್ಪು ಸುಲ್ತಾನರು. ಉಳುವವನೇ ಹೊಲದ ಒಡೆಯ ಎಂಬ ವ್ಯವಸ್ಥೆಯನ್ನು ಪ್ರಪ್ರಥಮ ಬಾರಿಗೆ ಜಾರಿಗೆ ತಂದಿರುವುದು ಹಾಗೂ ರೇಷ್ಮೆಯನ್ನು ನಮ್ಮ ನಾಡಿಗೆ ಪರಿಚಯಿಸಿದ್ದೇ ಟಿಪ್ಪು. ಇಂತಹ ಮಹಾನ ನಾಯಕರ ಜಯಂತಿಯನ್ನು ಸಕರ್ಾರದ ವತಿಯಿಂದ ಆಚರಿಸುತ್ತಿರುವುದು ತುಂಬಾ ಸಂತೋಷವಾಗಿದೆ. ಕೊಪ್ಪಳ ನಗರದಲ್ಲಿರುವ ಟಿಪ್ಪು ಸುಲ್ತಾನ ಸರ್ಕಲ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಅಲ್ಲದೇ ಭೂ ಒಡೆತನ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರಿಗೆ 2 ಎಕರೆ ಕೃಷಿ ಭೂಮಿಯನ್ನು ನೀಡಲಾಗಿದೆ. ಸಕರ್ಾರವು ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದರು.
ಸಮಾರಂಭದಲ್ಲಿ ಖಾದ್ರಿ-ವ-ತಸ್ಕೀನಿ ಖತಿಬ್ ವ ಇಮಾಮ್ ಯೂಸೂಫಿಯಾ ಮಸ್ಜಿದ್ನ ಮೌಲಾನಾ ಮುಫ್ತಿ ಮಹಮ್ಮದ್ ನಜೀರ್ ಅಹ್ಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ, ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ, ತಹಶೀಲ್ದಾರ ಜೆ.ಬಿ. ಮಜ್ಗಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಸದಸ್ಯರಾದ ಅಮಜದ್ ಪಟೇಲ್, ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ, ಅಜೀಮ್ ಅತ್ತಾರ, ವೀರುಪಾಕ್ಷರೆಡ್ಡಿ ಮೊರನಾಳ, ಅಕ್ಬರ ಪಾಶಾ, ಮಹೆಬೂಬಸಾಬ ಅರಗಂಜಿ, ಗಣ್ಯರಾದ ಡಾ. ಲಕ್ಷ್ಮಣ ಹೂಗಾರ, ಅಜರ್ುನಸಾ ಕಾಟವಾ, ಮುಖಂಡರಾದ ಬಾಶುಸಾಬ ಖತೀಬ, ಇಬ್ರಾಹಿಂಸಾಬ ಅಡ್ಡೆವಾಲೆ, ಕಾಟನ್ ಪಾಶಾ, ಲಾಯಖ್ ಅಲಿ, ಮಹಮ್ಮದ ಹುಸೇನ ಮಂಡಲಗಿರಿ, ಗೌಸಸಾಬ ಸರದಾರ, ಮಹೆಬೂಬ್ ಮಚ್ಚಿ, ಯೂಸುಫ್ ಖಾನ್ ಸೇರೆದಂತೆ ಅನೇಕರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕರಾದ ಕೃಷ್ಣಮೂತರ್ಿ ದೇಸಾಯಿ ಅವರು ಸರ್ವರನ್ನು ಸ್ವಾಗತಿಸಿದರು. ಸಿ.ಬಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.