ಥ್ರೋಬಾಲ್ ತಂಡ : ತಾಲೂಕ ಮಟ್ಟಕ್ಕೆ ಆಯ್ಕೆ
Throwball Team: Selection for Taluk level
ಥ್ರೋಬಾಲ್ ತಂಡ : ತಾಲೂಕ ಮಟ್ಟಕ್ಕೆ ಆಯ್ಕೆ
ಯರಗಟ್ಟಿ 06: ತಲ್ಲೂರ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟದಲ್ಲಿ ಯರಗಟ್ಟಿ ತಾಲೂಕಿನ ಶ್ರೀರಂಗಪೂರ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ಮಕ್ಕಳು ಗಂಡು ಮಕ್ಕಳ ಥ್ರೋಬಾಲ್ ಹಾಗೂ ಹೆಣ್ಣು ಮಕ್ಕಳ ಥ್ರೋಬಾಲ್ ಸ್ಪರ್ಧೆಯ ಗುಂಪು ಆಟಗಳಲ್ಲಿ ತಲಾ ಪ್ರಥಮ ಸ್ಥಾನ ಮತ್ತು ಸರಸ್ವತಿ ಕುರಿ, ಗುಂಡು ಎಸೆತ ಹಾಗೂ ಚಕ್ರ ಎಸೆತ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ವಿಜೇತರಾಗಿ ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಪ್ರಧಾನ ಗುರುಗಳಾದ ವಿ.ಪಿ.ಸೊನೋನೆ, ಸಹಶಿಕ್ಷಕರಾದ ಬಿ.ಜಿ.ದೇವಡಿ, ದೈಹಿಕ ಶಿಕ್ಷಕರಾದ ಎಮ್.ಎಫ್.ಅಗಸಿಮನಿ, ಗುರುಮಾತೆಯರಾದ ಜಿ.ಎಮ್.ಹಣಜಿ, ಜಿ.ಪಿ.ಬೆಳಗಾವಿ, ಎಸ್.ಪಿ.ರಂಗಿ, ಜಿ.ಬಿ.ಹಲ್ಯಾಳ ಅತಿಥಿ ಶಿಕ್ಷಕರಾದ ಎಸ್.ಜಿ.ಸುಣಗಾರ, ಎಮ್ .ಕೆ.ಮಾದರ ಹಾಗೂ ಶಾಲಾ ಎಸ್ ಡಿ ಎಮ್ ಸಿ ಪದಾಧಿಕಾರಿಗಳು, ಗ್ರಾಮದ ಗುರುಹಿರಿಯರು, ಪಾಲಕರು, ಶಿಕ್ಷಣ ಹಾಗೂ ಕ್ರೀಡಾ ಪ್ರೇಮಿಗಳು ಮತ್ತಿತರರು ಮಕ್ಕಳ ಸಾಧನೆಯನ್ನು ಮೆಚ್ಚಿ ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ 