ಸಮಾಜಕ್ಕಾಗಿ ಬದುಕಿದವರು ಅಜರಾಮರಾಗುತ್ತಾರೆ : ಕರ್ಣವಾಡಿ
Those who live for society will be punished: Karnawadi
ಹಾರೂಗೇರಿ 21 : ತಮಗಾಗಿ ಬದುಕಿದವರು ಕೇವಲ ಜೀವಂತವಾಗಿರುತ್ತಾರೆ. ಆದರೆ ಸಮಾಜಕ್ಕಾಗಿ, ಸಮಾಜ ಸೇವೆಗಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟವರು ನಿತ್ಯ ಜ್ಯೋತಿಯಾಗಿ ಅಜರಾಮರಾಗಿರುತ್ತಾರೆ ಎಂದು ಸಂಸ್ಥೆ ಅಧ್ಯಕ್ಷ ಬಿ.ಬಿ.ಕರ್ಣವಾಡಿ ಹೇಳಿದರು.
ಇಲ್ಲಿನ ಜನತಾ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಶುಕ್ರವಾರ ನಡೆದ ದಿ.ಭಗವಂತಪ್ಪ ಕರ್ಣವಾಡಿ ಅವರ 24ನೇ ಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಿಸ್ತು ಜೀವನ, ಸುಸ್ತು ಮರಣ ಎಂಬುದು ಕರ್ಣವಾಡಿ ಸರ್ ಅವರ ಧ್ಯೇಯವಾಕ್ಯವಾಗಿತ್ತು. ತಂದೆಯ ಕೋಪ ಸನ್ಮಾರ್ಗ ತೋರಿದರೆ, ತಾಯಿಯ ಕೋಪ ಹೊಟ್ಟೆಗೆ ಹಿಟ್ಟು ನೀಡುತ್ತದೆ. ಗುರುವಿನ ಕೋಪ ಭವಿಷ್ಯ ರೂಪಿಸಿ, ಗೌರವಕ್ಕೆ ಪಾತ್ರರನ್ನಾಗಿ ಮಾಡುತ್ತದೆ. ಆದ್ದರಿಂದ ಮಕ್ಕಳು ಗುರು ತೋರಿದ ದಾರಿಯಲ್ಲಿ ನಡೆಯಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಶ್ರಾಂತ ಪ್ರಾಚಾರ್ಯ ಎಸ್.ಎಲ್.ಜಾಧವ ಮಾತನಾಡುತ್ತ ಸಂಸ್ಕಾರವಿಲ್ಲದ ಶಿಕ್ಷಣ ಸಮಾಜಕ್ಕೆ ಮಾರಕ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಲವಾರು ಬಾರಿ ರಾಜ್ಯಮಟ್ಟಕ್ಕೆ ಪ್ರಥಮಸ್ಥಾನ ಪಡೆದ ಜನತಾ ಶಿಕ್ಷಣ ಸಂಸ್ಥೆಯು ಶಿಕ್ಷಣದ ಜೊತೆಗೆ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬಿತ್ತುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಂಕರಹಟ್ಟಿಯ ಶರಣ ಶಂಕರಾನಂದ ಬಿರಾದಾರ ಮಾತನಾಡಿದರು. ಈವೇಳೆ ಶಿಕ್ಷಣ ನೀಡಿ, ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ವಿಶ್ರಾಂತ ಗುರುಗಳಾದ ಎಸ್.ಎಲ್.ಜಾಧವ, ಭೀಮಪ್ಪ ಹುಲ್ಲೋಳಿ, ಜಿ.ಆರ್.ಸುಳ್ಳದ, ವಸಂತ ಹಿಪ್ಪರಗಿ, ವಿಶ್ರಾಂತ ಬ್ಯಾಂಕ ವ್ಯವಸ್ಥಾಪಕ ಬಿ.ಎನ್.ಆಲಗೂರ ಅವರನ್ನು ಸತ್ಕರಿಸಲಾಯಿತು. ಸಂಸ್ಥೆ ನಿರ್ದೇಶಕ ಅನಂತ ಕರ್ಣವಾಡಿ, ಪಾರೀಸ್ ಶೇಡಬಾಳ, ವಸಂತ ಹುಕ್ಕೇರಿ, ಎ.ಜೆ.ಚೌಗಲಾ, ಸುಭಾಸ ಬರಮರಾವತ್, ಟಿ.ಬಿ.ಸಾಜನೆ ಮೊದಲಾದ ಗಣ್ಯರು ವೇದಿಕೆಯಲ್ಲಿದ್ದರು. ಡಿ.ಎಂ.ನಾಯಿಕ ಸ್ವಾಗತಿಸಿದರು. ನೇಹಾ ಅಥಣಿ, ಭಾಗ್ಯಶ್ರೀ ಗೌಡನ್ನವರ ನಿರೂಪಿಸಿದರು. ಗಂಗಾಧರ ಕುಲಕರ್ಣಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 