ಅಲ್ಲಮಪ್ರಭುಗಳ ವಚನಗಳಲ್ಲಿ ಈ ಬಯಲು ಪರಮ ಸತ್ಯದ ಸಂಕೇತ: ಬೆಣಚಮರ್ಡಿ
This plain is a symbol of the supreme truth in the words of Allama Prabhu: Benachamardi
ಬೆಳಗಾವಿ 21: ಶರಣ ಸಾಹಿತ್ಯದಲ್ಲಿ ’ಬಯಲು’ ಎಂಬುದು ಕೇವಲ ಶೂನ್ಯವಲ್ಲ; ಅದು ಅಧ್ಯಾತ್ಮ ಮತ್ತು ವಿಜ್ಞಾನ ಎರಡನ್ನೂ ಬೆಸೆಯುವ ಒಂದು ಅದ್ಭುತ ಪರಿಕಲ್ಪನೆ. ಶರಣರ ದೃಷ್ಟಿಯಲ್ಲಿ ಬಯಲು ಮತ್ತು ಅದರ ವೈಜ್ಞಾನಿಕ ಆಯಾಮಗಳ ಕುರಿತಾದ ವಿಶ್ಲೇಷಣೆ ಅಪರೂಪವಾದದ್ದು ಎಂದು ಬೆಳಗಾವಿಯ ರತ್ನಕ್ಕ (ಉಷಾ) ಚಂದ್ರಶೇಖರ ಬೆಣಚಮರ್ಡಿ ಅವರು ಹೇಳಿದರು.
ಮಹಾಂತೇಶ ನಗರದ ಮಹಾಂತ ಭವನದಲ್ಲಿ ಫೆ. 17ರಂದು ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕ ಆಯೋಜಿಸಿದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ಶರಣರ ವಚನಗಳಲ್ಲಿ ಬಯಲು ಪರಿಕಲ್ಪನೆ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.ಬಯಲು ಶೂನ್ಯವಲ್ಲ, ಅದು ಪರಿಪೂರ್ಣತೆ. ಶರಣರ ಪ್ರಕಾರ ’ಬಯಲು’ ಎಂದರೆ ಯಾವುದೂ ಇಲ್ಲದ ಸ್ಥಿತಿಯಲ್ಲ, ಬದಲಿಗೆ ಎಲ್ಲವನ್ನೂ ತನ್ನೊಳಗೆ ಅಡಗಿಸಿಕೊಂಡಿರುವ ಮೂಲ ಚೇತನ. ಅಲ್ಲಮಪ್ರಭುಗಳ ವಚನಗಳಲ್ಲಿ ಈ ’ಬಯಲು’ ಪರಮ ಸತ್ಯದ ಸಂಕೇತ.
ನಿರಾಕಾರ ಸ್ಥಿತಿ: ದೇವರು ಒಂದು ರೂಪಕ್ಕೆ ಸೀಮಿತನಲ್ಲ, ಅವನು "ಬಯಲಾದ ಬಯಲು". ಇದನ್ನು ಆಧುನಿಕ ವಿಜ್ಞಾನದ ’ಕಿಣಚಿಟಿಣಣಟ ಗಿಚಿಛಿಣಣಟ’ ಅಥವಾ ’ಖಟಿರಣಟಚಿಡಿಣಥಿ’ ಗೆ ಹೋಲಿಸಬಹುದು. ವಿಜ್ಞಾನದ ಪ್ರಕಾರ ಶೂನ್ಯದಿಂದಲೇ ಸೃಷ್ಟಿ ಆರಂಭವಾಯಿತು. ಶರಣರು ಅಂದೇ "ಬಯಲಿನಿಂದಲೇ ಸಕಲವೂ ಸೃಜಿಸಲ್ಪಟ್ಟಿತು" ಎಂದು ಪ್ರತಿಪಾದಿಸಿದರು. 12ನೇ ಶತಮಾನದ ಅನುಭವ ಮಂಟಪವು ಇಂದಿನ ’ಸಂಶೋಧನಾ ಕೇಂದ್ರ’ದಂತೆ ಕಾರ್ಯನಿರ್ವಹಿಸುತ್ತಿತ್ತು. ಅಲ್ಲಿ ಯಾವುದನ್ನೂ ಕುರುಡಾಗಿ ನಂಬುತ್ತಿರಲಿಲ್ಲ ಎಂದರು. "ಅನುಭವವಿಲ್ಲದ ಮಾತು ಅಧ್ವಾನ" ಎಂಬುದು ಶರಣರ ನಂಬಿಕೆ. ವಿಜ್ಞಾನವು ಹೇಗೆ ಪ್ರಯೋಗ ಮತ್ತು ದತ್ತಾಂಶಗಳನ್ನು (ಆಚಿಣಚಿ) ಕೇಳುತ್ತದೆಯೋ, ಹಾಗೆಯೇ ಶರಣರು ವೈಯಕ್ತಿಕ ಅನುಭವಕ್ಕೆ (ಕಜಢಿಠಚಿಟ ಇಥಜಡಿಜಟಿಛಿಜ) ಒತ್ತು ನೀಡಿದರು. ಸಮಾಜದ ಕಟ್ಟುಪಾಡುಗಳನ್ನು ಪ್ರಶ್ನಿಸುವ ಮೂಲಕ ಅವರು ವೈಜ್ಞಾನಿಕ ವಿಚಾರಧಾರೆಗೆ ನಾಂದಿ ಹಾಡಿದರು. ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣ ಬಸವರಾಜ ರೊಟ್ಟಿ ಅವರು ಇಂದಿನ ದಿನಮಾನಗಳಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಚನಗಳ ಕುರಿತು, ಶರಣ ಸಂಸ್ಕೃತಿಯ ಕುರಿತು ಇಲ್ಲ ಸಲ್ಲದ ಉಹಾಪೋಹಗಳನ್ನು ಸಮಾಜದಲ್ಲಿ ಹರಿಬಿಡುತ್ತಿದ್ದುದು ಸರಿಯಲ್ಲ. ಬಸವಾಭಿಮಾನಿಗಳ ಮನ ನೋಯಿಸುವ ಕಾರ್ಯವನ್ನು ತಕ್ಷಣದಿಂದ ನಿಲ್ಲಿಸದಿದ್ದರೆ ಲಿಂಗಾಯತ ಮಹಾಸಭಾ ಉಗ್ರ ಹೋರಾಟ ಮಾಡುವದಾಗಿ ಹೇಳಿದರು.
ಪಿಎಚ್‌ಡಿ ಪದವಿಯನ್ನು ಪಡೆದ ಎಸ್‌ಜಿಬಿಆಯ್‌ಟಿ ತಾಂತ್ರಿಕ ಮಹಾವಿದ್ಯಾಲಯದ ಪ್ರೋ.ಮಂಜುನಾಥ ಶರಣಪ್ಪನವರ ಅವರನ್ನು ಸತ್ಕರಿಸಲಾಯಿತು. ಸಾನಿದ್ಯವನ್ನು ಶಿವಬಸವ ದೇವರು ವಹಿಸಿದ್ದರು. ಮಹಾಂತೇಶ ನಗರ ರಹವಾಸಿಗಳ ಸಂಘದ ಕಾರ್ಯದರ್ಶಿ ಶರಣ ಸಂಜಯ ಪಟ್ಟಣಶೆಟ್ಟಿ, ನಿರ್ದೇಶಕರಾದ ಅರುಣ ನೇರಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಇಂದಿನ ಪ್ರಸಾದ ದಾಸೋಹಿಗಳಾದ ಶರಣ ಪ್ರವೀಣಕುಮಾರ ಚಿಕಲಿ ಷಟ್ ಸ್ಥಲ ಧ್ವಜಾರೋಹಣ ನೆರವೇರಿಸಿದರು. ಶ್ರೀದೇವಿ ನರಗುಂದ ನಿರೂಪಣೆ ಮಾಡಿದರು. ಡಾ.ಗೀತಾ ದೇಯನ್ನವರ ಅವರು ಪ್ರಸ್ತಾವಿಕ ಮಾತುಳೊಂದಿಗೆ ಸ್ವಾಗತಿಸಿದರು. ಸುನೀತಾ ಚಿನಿವಾರ ಅವರು ಶರಣು ಸಮರೆ್ಣ ಮಾಡಿದರು.
ಅರವಿಂದ ಪರುಶೆಟ್ಟಿ, ಎಸ್ ಜಿ ಸಿದ್ನಾಳ, ಚಂದ್ರ್ಪ ಬೂದಿಹಾಳ, ಮುರಿಗೆಪ್ಪ ಬಾಳಿ, ಅಶೋಕ ಮಳಗಲಿ, ಮೋಹನ ಗುಂಡ್ಲೂರ, ಸುಜಾತಾ ಮತ್ತಿಕಟ್ಟಿ, ಅನುಷಾ ಬಸೆಟ್ಟಿ, ಸುಲೋಚನಾ ವಸ್ತ್ರದ, ಕಾವೇರಿ ಕಿಲಾರಿ, ಶೋಭಾ ಶಿವಳ್ಳಿ, ಮಹಾನಂದಾ ಪರುಶೆಟ್ಟಿ, ಯರಗಟ್ಟಿಯ ಅಶೋಕ ಹಾದಿಮನಿ, ಈರಣ್ಣ ಚಿನಗುಡಿ, ಎಫ್ ಆರ್ ಪಾಟೀಲ, ವಿವಿಧ ಬಡಾವಣೆಯ ಬಸವ ಅನುಯಾಯಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 