ಅವಳಿ ನಗರದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನದ ಯಶಸ್ವಿಗಾಗಿ ಥರ್ಡ್‌ ಐ ಸಹಾಯಕ : ರಾಘವೇಂದ್ರ ಪಾಲನಕರ

ಅವಳಿ ನಗರದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನದ ಯಶಸ್ವಿಗಾಗಿ ಥರ್ಡ್‌ ಐ ಸಹಾಯಕ : ರಾಘವೇಂದ್ರ ಪಾಲನಕರ Third Eye Assistant for the Success of Swachhta He Seva Abhiyan in Twin Cities: Raghavendra Palanak


ಗದಗ 06:-  ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ವಾರ್ಡಗಳಲ್ಲಿಯ ನಾಗರಿಕರ ಮನೆ ಮನೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ವಸ್ತುಗಳು, ಹಸಿ ಕಸ, ಒಣ ಕಸವನ್ನು ಈ ಹಿಂದೆ ಪ್ರಮುಖ ಬಡಾವಣೆಯ ರಸ್ತೆ ಪಕ್ಕದಲ್ಲಿ, ಮೋರಿಗಳಲ್ಲಿ ನಾಗರಿಕರು ವಿಸರ್ಜನೆ ಮಾಡುತ್ತಿದ್ದರು. ಇದರಿಂದಾಗಿ ಪರಿಸರ ಮಾಲಿನ್ಯ, ಗಬ್ಬು ದುರ್ವಾಸನೆ, ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ದನಕರು ಸೇವಿಸಿ ಅನಾರೋಗ್ಯ ಪೀಡಿತವುಂತಾಗುತ್ತಿತ್ತು. 

ಇದೆಲ್ಲವನ್ನು ಅರಿತ ಗೌರವಾನ್ವಿತ ಗದಗ ಬೆಟಗೇರಿ ನಗರಸಭೆಯ ವತಿಯಿಂದ ವಿನೂತನವಾಗಿ ಪ್ರತಿಯೊಂದು ಮನೆ ಮನೆಗೂ ಎರಡು ಟಬ್ ಗಳನ್ನು ಉಚಿತವಾಗಿ ನೀಡಿ, ತಮ್ಮ ತಮ್ಮ ಮನೆಗಳಲ್ಲಿ ಸಂಗ್ರಹವಾಗುವ ಹಸಿ ಕಸ ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಣೆ ಮಾಡಿ ಸಂಗ್ರಹಿಸಿದ ಕಸವನ್ನು ನಗರಸಭೆಯ ಕಸ ವಿಲೇವಾರಿ ಮಾಡುವ ವಾಹನಗಳ ಮೂಲಕ ಪ್ರತಿದಿನವೂ ಬೆಳಿಗ್ಗೆ 7 ಘಂಟೆಯಿಂದ ಸಾಯಂಕಾಲದವರೆಗೂ ನಿರಂತರವಾಗಿ ಪ್ರತಿಯೊಂದು ಮನೆ ಮನೆಗಳಿಂದಲೂ ಕಸ ಸಂಗ್ರಹಿಸಿಕೊಂಡು ವಿಲೇವಾರಿ ಮಾಡುವ ಮೂಲಕ ಸ್ವಚ್ಛ ಪರಿಸರ ಸುಂದರ ನಗರವನ್ನಾಗಿಸುವ ಮೂಲೋದ್ದೇಶದೊಂದಿಗೆ ಕಾರ್ಯೋಮುಖವಾಗಿರುತ್ತದೆ. 

ಆದರೂ ಕೂಡಾ ಕೆಲವೇ ಕೆಲವು ಪ್ರಜ್ಞಾಹೀನ, ಅವಿದ್ಯಾವಂತ ತಿಳುವಳಿಕೆಯಿಲ್ಲದ ನಾಗರಿಕರು ಮಾತ್ರ ತಮ್ಮ ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ನಗರಸಭೆಯ ಕಸ ವಿಲೇವಾರಿ ವಾಹನಕ್ಕೆ ನೀಡದೇ, ತಮ್ಮದೇ ಮನೆಯಂತಿರುವ ಪ್ರಮುಖ ಬಡಾವಣೆಯ ರಸ್ತೆಯ ಅಕ್ಕಪಕ್ಕದಲ್ಲಿ ಮೋರಿಯಲ್ಲಿ ಸುರಿಯುತ್ತಿರುವರು. ಇದಕ್ಕೊಂದು ವಿಶಿಷ್ಟವಾದ ಯೋಜನೆಯಾದ ಸ್ವಚ್ಛ ಭಾರತ ಮಿಷನ್ 2.0 ಅಡಿಯಲ್ಲಿ ಸ್ವಚ್ಛತಾ ಹೀ ಸೇವಾ ತಿಳುವಳಿಕೆ ಅಭಿಯಾನವನ್ನು ಹಮ್ಮಿಕೊಂಡು ಪ್ರತಿಯೊಂದು ವಾರ್ಡಗಳಲ್ಲಿನ ಅವೈಜ್ಞಾನಿಕವಾಗಿ ಕಸ ಸಂಗ್ರಹವಾಗುವ ಸ್ಥಳಗಳನ್ನು ಗುರುತಿಸಿ ಬ್ಲಾಕ್ ಪಾಯಿಂಟ್ ಎಂದು ಗುರುತಿಸಿ, ಅಂತಹ ಸ್ಥಳವನ್ನು ಸ್ವಚ್ಛಗೊಳಿಸಿ ರಂಗೋಲಿ, ಹಾಗೂ ಹೂವಿನ ಸಸಿಗಳನ್ನು ಇಟ್ಟು ಸುಂದರಗೊಳಿಸಿ ಸ್ಮಾರ್ಟ್‌ ಪಾಯಿಂಟ್ ಆಗಿ ಪರಿವರ್ತನೆ ಮಾಡಿ ಬಡಾವಣೆಯ ನಾಗರಿಕರಿಗೆ ಸೂಕ್ತ ತಿಳುವಳಿಕೆಯನ್ನು ಕೂಡಾ ನೀಡಲಾಗುತ್ತಿದೆ. 

ಆದರೂ ಸ್ಮಾರ್ಟ್‌ ಪಾಯಿಂಟ್ ಗಳಾಗಿ ಪರಿವರ್ತನೆ ಮಾಡಲಾದ ನಿಗದಿತ ಸ್ಥಳದಲ್ಲಿ ಮತ್ತೇ ಕಸ ವಿಲೇವಾರಿ ಮಾಡುತ್ತಿರುವುದನ್ನು ತಡೆಯಲು ಗೌರವಾನ್ವಿತ ನಗರಸಭೆಯಿಂದ ಥರ್ಡ್‌ ಐ ಎಂದೇ ಖ್ಯಾತಿಯನ್ನು ಪಡೆದ ಸಿ ಸಿ ಕ್ಯಾಮರಾಗಳನ್ನು ಬ್ಲಾಕ್ ಪಾಯಿಂಟ್ ಎಂದು ಗುರುತಿಸಿ ಸ್ಮಾರ್ಟ್‌ ಪಾಯಿಂಟ್ ಆಗಿ ಪರಿವರ್ತನೆ ಮಾಡಲಾದ ನಿಗದಿತ ಸ್ಥಳಗಳಲ್ಲಿ ಅಳವಡಿಸಿ ಕ್ಯಾಮರಾ ಮೂಲಕ ಗುರುತಿಸಲಾದ ಬೀದಿಯಲ್ಲಿ ಕಸ ಹಾಕುವವರರಿಗೆ ಅದೇ ಕಸವನ್ನು ಅವರ ಕಸ ಅವರ ಮನೆ ಬಾಗಿಲಿಗೆ  ಹಾಗೂ ಸೂಕ್ತ ದಂಡವನ್ನು ವಿಧಿಸುವ ಮೂಲಕ  ಅವಳಿ ನಗರವನ್ನು ಸ್ವಚ್ಛ ಪರಿಸರ ಸುಂದರ ನಗರವನ್ನಾಗಿಸುವ ಕನಸಿನ ನಾಗರೀಕ ಜವಾಬ್ದಾರಿಯನ್ನು ಗುರುತಿಸುವಂತಾಗಲು ಸಹಕರಿಸುವಂತಾಗಲಿ ಥರ್ಡ್‌ ಐ ನೆರವುದಾಯಕ ಎಂದು ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಜನಸ್ಪಂಧನೆಯನ್ನು ವ್ಯಕ್ತಪಡಿಸಿರುತ್ತಾರೆ.