ಮಾನವನ ಅರಿವಿಗೆ ಬಾರದ ಕ್ಷೇತ್ರ ಉಳಿದಿಲ್ಲ: ಡಾ.ಎಸ್.ಟಿ ನಂದಿಬೇವೂರ

ಧಾರವಾಡ 09: ದೇಶದ ಅಭಿವೃದ್ಧಿಯು ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ನೇರ ಸಂಬಂಧ ಹೊಂದಿದೆ. ಈ ಸಂಬಂಧವನ್ನು ಯಾವುದೇ ರಾಜಕೀಯ ಪ್ರೇರಿತ ನಿರ್ಧಾ ರವಾಗಲಿ, ಸಮಾಜದ ಒಲವಾಗಲಿ, ಇಕ್ವಿಟಿ, ನೈತಿಕತೆ ಇನ್ನಿತರ ಕಾರಣಗಳಿಂದ ಬೇರ್ಪಡಿಸುವುದು ಸಾಧ್ಯವೇ ಇಲ್ಲ. ಇದು ನೇರವಾಗಿ ನಿಸರ್ಗವನ್ನು ಅವಲಂಬಿಸಿದೆ. ಹಾಗಾಗಿ ಪ್ರಕೃತಿಯ ಕೊಡುಗೆಗಳಿಂದ ಹೊಸ ಹೊಸ ಸಂಶೋಧನೆಗಳಲ್ಲಿ ತೊಡಗಿಕೊಂಡು ಮೌಲ್ಯಯುತ ಜೀವನ ಸಾಗಿಸುವ ಸೌಕರ್ಯಗಳತ್ತ ಸಾಗುತ್ತಿದ್ದೇವೆ ಎಂದು ಡೈಮಂಡ ಜುಬಿಲಿ ಪ್ರೊಫೆಸರ್ ಪಾರ್ ಲೈಫ್ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಟಿ ನಂದಿಬೇವೂರ ಹೇಳಿದರು. 

ಕರ್ನಾ ಟಕ ವಿದ್ಯಾವರ್ಧಕ ಸಂಘದ ಪ್ರೊ.ಎಸ್.ಪಿ.ಹಿರೇಮಠ ದತ್ತಿ ಕಾರ್ಯಕ್ರಮದ ಅಂಗವಾಗಿ ಪ್ರೊ.ಎಸ್.ಪಿ.ಹಿರೇಮಠ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು. 

ಕ್ರಿಯಾಶೀಲತೆ, ಶ್ರದ್ಧೆ, ಶ್ರಮದ ಬದ್ಧತೆ, ಪರಸ್ಪರ ವಿಚಾರವಿನಿಮಯದ ಕಾರ್ಯದಿಂದ ಸಂಶೋಧನೆ ಮಾಡಿದಾಗ ಮಹಾನ್ ಸಾಧಕನಾಗಲು ಸಾಧ್ಯವೆಂದು ಅಬ್ದುಲ್ ಕಲಾಂ ಒಂದು ಕಡೆ ಹೇಳಿದ್ದಾರೆ. ಅದನ್ನು ಪ್ರತಿಯೊಬ್ಬ ಸಂಶೋಧಕರು ಅಳವಡಿಸಿಕೊಂಡರೆ ಉತ್ತಮ ಸಾಧಕರಾಗಲು ಸಾಧ್ಯ. ಸಾಮಾನ್ಯ ಜನರ ಜೀವನ ಸುಖಮಯವಾಗಿ ಅವರ ಬದುಕು ಹಸನು ಮಾಡುವುದೇ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಮೂಲ ಉದ್ದೇಶವಾಗಿದೆ ಎಂದರು.

ವೈಜ್ಞಾನಿಕ, ತಂತ್ರಜ್ಞಾನವೂ ಅದ್ಭುತ ಪ್ರಗತಿ ಸಾಧಿಸಿ ಮನುಷ್ಯನನ್ನು ಭಗವಂತನೇ  ಅಚ್ಚರಿಪಡುವಷ್ಟು ಶಕ್ತಿಶಾಲಿಯಾಗುವಂತೆ ಮಾಡಿದೆ ಇಂದು ಮಾನವ ಕಾಲದೊಡನೆ ಸ್ಪಧರ್ಿಸುತ್ತಾ ಅಂತರಿಕ್ಷವನ್ನೇ ಜಯಿಸಿದ್ದಾನೆ. ಇದುವರೆಗೆ ಅಜ್ಞಾತವಾಗಿದ್ದ ಎಷ್ಟೋ ವಿಷಯಗಳನ್ನು ಮತ್ತು ಪ್ರಕೃತಿಯಲ್ಲಿ ಅಡಗಿರಬಹುದಾದ ಸಮಸ್ತ ರಹಸ್ಯಗಳನ್ನು ಅನಾವರಣಗೊಳಿಸಲು ಶಕ್ತನಾಗಿದ್ದಾನೆ. ಒಂದೇ ಮಾತಿನಲ್ಲಿ ಹೇಳಬಹುದಾದರೆ ಮಾನವನಿಗೆ ಅಗೋಚರವಾದ ಅಥವಾ ಅವನ ಅರಿವಿಗೆ ಬಾರದಿರುವ ಯಾವ ಕ್ಷೇತ್ರವೂ ಉಳಿದಿಲ್ಲ.

ಭಾರತದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಂಬಂದಿಸಿದ ಸಂಶೋಧನೆ ಪ್ರಾಚೀನ ಕಾಲದಿಂದಲೂ ಪರಿಚಿತವಾದ ಕ್ಷೇತ್ರಗಳೇ ಆಗಿದೆ. ಪಾಶ್ಚಾತ್ಯರ  ಸಂಪರ್ಕದಿಂದ ಅವುಗಳ ಹೆಸರು, ವಿಮಶರ್ೆ ಇತ್ಯಾದಿಗಳು ಬೇರೆ ಬೇರೆ ದೃಷ್ಟಿಕೋನಗಳಲ್ಲಿ ಬೆಳಕಿಗೆ ಬಂದಿರಬಹುದು. ಆದರೆ ಆ ದಿಸೆಯಲ್ಲಿ ಪ್ರಾಚೀನ ಭಾರತದ ಋಷಿ ಮುನಿಗಳ ಕಾಲದಿಂದಲೂ, ಅಗ್ರಸ್ಥಾನದಲ್ಲಿದೆ ಎಂದು ಹೇಳಬಹುದು ಎಂದು ಹೇಳಿದರು.

ದತ್ತಿದಾನಿಗಳಾದ ಡಾ. ಉಜ್ವಲಾ ಹಿರೇಮಠ ಮಾತನಾಡಿ, ಅವರ ಪತಿಯವರು ಮಾಡಿದ ಕಾರ್ಯಗಳನ್ನು ನೆನಪಿಸುತ್ತಾ ಯುವ ಸಮುದಾಯಕ್ಕೆ ಪ್ರೇರಣೆ ನೀಡುವ ಉದ್ದೇಶದಿಂದ ಈ ದತ್ತಿ ಇಡಲಾಗಿದೆ. ಯುವ ಸಮುದಾಯ ಹಿರಿಯರನ್ನು ಮಾದರಿಯಾಗಿ ಇಟ್ಟುಕೊಂಡು ಹೆಚ್ಚಿನ ಸಾಧನೆಯನ್ನು ಸಮರ್ಥವಾಗಿ ಸತ್ಯದ ಮಾರ್ಗದಲ್ಲಿ ನಡೆಯುವಂತಾಗಬೇಕು ಎಂದು ಹೇಳಿದರು.

ಪ್ರೊ.ಎಸ್.ಪಿ.ಹಿರೇಮಠ ಯುವ ವಿಜ್ಞಾನಿ ಪ್ರಶಸ್ತಿ ಸ್ವೀಕರಿಸಿದ ಅಪರ್ಿತಾ ಶಾನಬಾಗ ಮಾತನಾಡಿ ಈ ಪ್ರಶಸ್ತಿಯು ತಂದೆ ತಾಯಿ ಮತ್ತು ಕಲಿಸಿದ ಗುರುಗಳಿಗೆ ಸಲ್ಲುತ್ತದೆ. ನನಗೆ ಇನ್ನೂ ಹೆಚ್ಚು ಓದಿ ಹಿರಿಯರು ಹಾಕಿಕೊಟ್ಟ ಮಾರ್ಗದಿಂದ ಸಾಧಿಸಬೇಕೆಂಬ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷೀಯ ಮಾತುಗಳನ್ನಾಡಿದರು.

ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯಕ ಪ್ರೇಮಾನಂದ ಶಿಂಧೆ ಪ್ರಾಥರ್ಿಸಿದರು. ಸಾಹಿತಿ, ಸಂಘಟಕ ಮಾತಾರ್ಂಡಪ್ಪ ಎಮ್ ಕತ್ತಿ ನಿರೂಪಿಸಿ, ವಂದಿಸಿದರು.

ಡಾ. ಗಂಗಾಧರ ಮಠ, ಡಾ.ಪಾರ್ವತಿ ಹಾಲಭಾವಿ, ಸುರೇಶ ಹಾಲಭಾವಿ, ಪ್ರೊ ಲೀಲಾ ಕಲಕೋಟಿ, ಡಾ. ಎಸ್.ಎ.ನಾಯಕ, ಪ್ರಭಾ ನೀರಲಗಿ, ಡಾ ಶಿವಕುಮಾರ ತೋರಗಲ್ಲಮಠ,  ಪ್ರೊ. ನಾಗಭೂಷಣ, ಡಾ. ಬಿಳಗಿ, ಬಿ.ಎಸ್.ಶಿರೋಳ, ಡಾ. ಜಿ ಎ ಕಲ್ಲೂರ, ಪ್ರೊ. ಯರವಿನತೆಲಿಮಠ, ಡಾ. ಮಲ್ಲಿಕಾಜರ್ುನ ಪಾಟೀಲ, ಶಾರದಾ ಕೌದಿ, ವೀಣಾ ಸಂಕನಗೌಡರ, ಅಶೋಕ ಶಾನಬಾಗ, ಅರ್ಚನಾ ಶಾನಬಾಗ ಸೇರಿದಂತೆ ಅನೇಕರು ಭಾಗವಹಿಸಿದ್ದರು.