ಪಕ್ಷ ಸಂಘಟನೆಗೆ ಕೊನೆ ಎಂಬುದು ಇರುವುದಿಲ್ಲ ಪಕ್ಷ ಮನೆ ಇದ್ದಂತೆ - ಜನರ ಮನದ ಇಂಗಿತ ಅರಿಯುವುದು ಕಾರ್ಯಕರ್ತರ ಕೆಲಸ

ಪಕ್ಷ ಸಂಘಟನೆಗೆ ಕೊನೆ ಎಂಬುದು ಇರುವುದಿಲ್ಲ  

ಪಕ್ಷ ಮನೆ ಇದ್ದಂತೆ - ಜನರ ಮನದ ಇಂಗಿತ ಅರಿಯುವುದು ಕಾರ್ಯಕರ್ತರ ಕೆಲಸ

ಕಾರವಾರ : ನಗರದ ಭಾರತೀಯ ಜನತಾ ಪಕ್ಷದ ಕಾಯರ್ಾಲಯಕ್ಕೆ  ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ  ಹಾಗೂ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ  ಶಾಸಕರಾದ  ರೂಪಾಲಿ ಎಸ್. ನಾಯ್ಕ ಜಂಟಿಯಾಗಿ   ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. 

ಇದೇ ವೇಳೆ ಕಾರವಾರ ಘಟಕದ ವತಿಯಿಂದ ಸಚಿವ ನಿವಾಸ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು ಪಕ್ಷದ ಸಂಘಟನೆ ಮುಖ್ಯ. ಈಗ ನಾವು ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸೋಣ ಎಂದರು. ಜನರ ಬೇಕು ಬೇಡಗಳನ್ನು ಅರಿತು ಪಕ್ಷಕ್ಕೆ ಮತ್ತು ಶಾಸಕರಿಗೆ ಮಾಹಿತಿ ಕೊಡಿ ಎಂದರು. ನಾವು ಎಷ್ಟೇ ದೊಡ್ಡ ಮಟ್ಟಕ್ಕೆ ಹೋದರೂ, ಪಕ್ಷದ   ಕಾರ್ಯಕರ್ತರನ್ನು ಎಂದಿಗೂ ಮರೆಯುವುದಿಲ್ಲ. ನಾವೂ ಸಹ ಭಾರತೀಯ ಜನತಾ  ಪಕ್ಷದ ಕಾರ್ಯಕರ್ತರೇ. ಸಂಘಟನೆ ಎನ್ನುವುದು ಎಲ್ಲಿಂದ ಆರಂಭಗೊಂಡು ಎಲ್ಲಿಗೆ ಮುಕ್ತಾಯವಾಗುತ್ತದೆ  ಎಂಬುದಿಲ್ಲ. ಪಕ್ಷ ಸಂಘಟನೆಗೆ ಕೊನೆ ಎಂಬುದು ಇರುವುದಿಲ್ಲ.  

ಸಂಘಟನೆ ಎಂಬುದು ಎಲ್ಲಿಂದ ಆರಂಭಗೊಂಡು ಎಷ್ಟು ಎತ್ತರಕ್ಕೆ ಬೆಳೆಯುತ್ತದೆ ಎಂಬುದು ಮುಖ್ಯ ಎಂದು ಸಚಿವ ಪೂಜಾರಿ ಅಭಿಪ್ರಾಯಪಟ್ಟರು.  ನಾವು ಹೋದ ಕಡೆ ಶಾಸಕರೋ ಅಥವಾ ಸಚಿವರಾಗಿಯೋ ಹೋಗುವುದಿಲ್ಲ. ನಾವು ಸಹ ಒಬ್ಬ ಸಾಮಾನ್ಯ ಕಾರ್ಯಕರ್ತರಾಗಿಯೇ ಹೋಗುತ್ತೇವೆ ಎಂದರು.  ಹೊಸದಾಗಿ ಆಯ್ಕೆಯಾಗಿರುವ ಬೂತ್ ಕಮಿಟಿ ಅಧ್ಯಕ್ಷರುಗಳ ಜವಾಬ್ದಾರಿ ಹೆಚ್ಚಿದೆ. ಪ್ರತಿಯೊಂದು ಮಾಹಿತಿಯೂ ಸಹ ತಮಗೆ ತಿಳಿದಿರಬೇಕು. ಪಕ್ಷ ಎಂಬುದು ನಿಮ್ಮ ಮನೆಯಿದ್ದಂತೆ. ಇಲ್ಲಿ ಯಾರೂ ಸಹ, ಯಾರನ್ನೂ ಕರೆಯುವ ಅವಶ್ಯಕತೆ ಇರುವುದಿಲ್ಲ. ತಾವೇ ಸ್ವತಃ ಬಂದು ಸಭೆ ಸಮಾರಂಭಗಳನ್ನು ಯಶಸ್ವಿಗೊಳಿಸಬೇಕು. ಸಂಘಟನೆ ಗಟ್ಟಿಯಾಗಿರಬೇಕು  ಸಾಮಾನ್ಯ ಜನತೆಯ ಸಮಸ್ಯೆಗಳನ್ನು ಪಕ್ಷದ ಕಾರ್ಯಕರ್ತರು ನಮ್ಮೆದುರಿಗೆ ತಂದು ಪರಿಹಾರ ಕಂಡುಕೊಳ್ಳಬೇಕು. ನಮ್ಮ ಸಚಿವರು ಅತ್ಯಂತ ಸರಳ ವ್ಯಕ್ತಿತ್ವದ ಸಚಿವರಾಗಿದ್ದಾರೆ. ಈ ಹಿಂದಿನ ಸರಕಾರದ ಸಚಿವರ ಹಾಗೆ ದರ್ಪತೋರುವ ಸಚಿವರು ನಮ್ಮ ಪಕ್ಷದಲ್ಲಿಲ್ಲ. ಇದು ನಾವು ನಮ್ಮ ಸಂಘಟನೆಯಿಂದ ಕಲಿತ ವಿಷಯಗಳಾಗಿವೆ. ಮುಂದಿನ ದಿನಗಳಲ್ಲಿ ಸಂಘಟನೆ ಇನ್ನೂ ಹೆಚ್ಚಿನ ಎತ್ತರದ ಮಟ್ಟಕ್ಕೆ ಬೆಳೆಯಲು ತಮ್ಮ ಸಹಕಾರ ಮುಖ್ಯ ಎಂದು ಶ್ರಿನಿವಾಸ ಪೂಜಾರಿ ಹೇಳಿದರು.  

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದಶರ್ಿಗಳಾದ  ವೆಂಕಟೇಶ ನಾಯಕ,  ಎನ್. ಎಸ್. ಹೆಗಡೆ, ಜಿಲ್ಲಾ ಉಪಾಧ್ಯಕ್ಷರಾದ  ಗಣಪತಿ ಉಳ್ವೇಕರ, ಕಾರವಾರ ನಗರಾಧ್ಯಕ್ಷ ನಾಗೇಶ ಕುರಡೇರ, ಗ್ರಾಮೀಣಾಧ್ಯಕ್ಷ ಸುಭಾಷ ಗುನಗಿ ಹಾಗೂ ನಗರಸಭಾ ಸದಸ್ಯರು, ಪ್ರಮುಖರಾದ ಮನೋಜ ಭಟ್, ಸುಜಾತಾ ಬಾಂದೇಕರ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.