ಜನ ಸ್ನೇಹಿ ಉತ್ತಮ ಜನಪರ ಆಡಳಿತ ನಡೆಸುತ್ತಿದೆ ಇದರಲ್ಲಿ ಯಾವೂದೇ ಸಂದೇಹವಿಲ್ಲ
There is no doubt that it is a people-friendly and good governance.
ಜನ ಸ್ನೇಹಿ ಉತ್ತಮ ಜನಪರ ಆಡಳಿತ ನಡೆಸುತ್ತಿದೆ ಇದರಲ್ಲಿ ಯಾವೂದೇ ಸಂದೇಹವಿಲ್ಲ
ಮುದ್ದೇಬಿಹಾಳ 29 : ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ನೇತೃತ್ವದ ಕಾಂಗ್ರೇಸ್ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಚುನಾವಣೆ ಪೂರ್ವ ಘೋಶಿಸಿದಂತೆ ನುಡಿದಂತೆ ನಡೆದಿದೆ ಮಾತ್ರವಲ್ಲದೇ ಜನ ಸ್ನೇಹಿ ಉತ್ತಮ ಜನಪರ ಆಡಳಿತ ನಡೆಸುತ್ತಿದೆ ಇದರಲ್ಲಿ ಯಾವೂದೇ ಸಂದೇಹವಿಲ್ಲ ಅದರಂತೆ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಸುಮಾರು 5ನೂರು ಕೋಟಿಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕೈಗೊಂಡು ಪ್ರಗತಿ ಹಂತದಲ್ಲಿವೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ)ವಾಗ್ದಾಳಿ ನಡೆಸಿದರು.
ಪಟ್ಟಣದ ಹುಡ್ಕೋ ಬಡಾವಣೆಯ ತಮ್ಮ ಗ್ರಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಧ್ಯ ವಿರೋಧ ಪಕ್ಷದವರಿಗೇ ಮಾಡಲು ಬೇರಿ ಕೆಲಸವಿಲ್ಲ ಹಾಗಾಗಿ ನಮ್ಮ ಸರಕಾರ ಅನುಷ್ಠಾನ ಗೊಳಿಸಿರುವ ಜನಪ್ರೀಯ ಗ್ಯಾರಂಟಿ ಯೋಜನೆಯಿಂದ ಸರಕಾರ ದಿವಾಳಿಯಾಗಿದೆ ಮತಕ್ಷೇತ್ರದಲ್ಲಿ ಯಾವೂದೇ ಅಭಿವೃದ್ಧಿಯಾಗಿಲ್ಲವೇಂದು ಹೇಳಿ ಜನರಿಗೆ ದಾರಿ ತಪ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ.
ಸಧ್ಯ ಗ್ಯಾರಂಟಿ ಯೋಜನೆಯಿಂದ ಬಡವರಿಗೆ ಮೂರು ಹೊತ್ತು ಅನ್ನ ಸಿಗುತ್ತಿದೆ, ಶಕ್ತಿ ಯೋಜನೆಯಿಂದ ಮಹಿಳೆಯರು ನೆಮದಿಯ ಜೀವನ ನಡೆಸುತ್ತಿದ್ದಾರೆ, ನಿರುದ್ಯೋಗ ಯುವಕರು ನೌಕರಿಗಾಗಿ ಅರ್ಜಿ ಸಲ್ಲಿಸಲು ತುಂಬಾ ಅನುಕೂಲವಾಗಿದೆ. ಅಭಿವೃದ್ಧಿಯಾಗಿಲ್ಲವೆಂದು ಸುಳ್ಳು ಆರೋಪಿಸುವುದು ಸರಿಯಲ್ಲ. ಬೂದಿಹಾಳ ಪೀರಾಪೂರ ಯೋಜನೆ ಬಗ್ಗೆ ಹಲವಾರು ಹೋರಾಟಗಾರರ ಪರಿಶ್ರಮವಿದೇ ಸಧ್ಯ ಈ ಯೋಜನೆ ಪ್ರಾರಂಭಗೊಂಡಿದೆ ಎಂದರೆ ಕಾಂಗ್ರೇಸ್ ಪಕ್ಷದ ಕೊಡುಗೆಯಾಗಿದೆ.
ಮತಕ್ಷೇತ್ರವೂ ಸೇರಿದಂತೆ ಸಮಗ್ರ ಜಿಲ್ಲೆಯಲ್ಲಿ ನೀರಾವರಿಗೊಳಿಸುವು ಮೂಲಕ ಕೆರೆ ತುಂಬುಬೇಕು ಎನ್ನುವುದು ಅಂದು ನಿರಾವರಿ ಸಚಿವರಾಗಿ ಮಲ್ಲಿಕಾರ್ಜುನ ಖರ್ಗೆಯವರ ಕನಸಾಗಿತ್ತು ಅದರಂತೆ ಮುಂದೆ 2013ರಿಂದ 2018ರವರೆಗೆ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರಕಾರದ ಅವಧಿಯಲ್ಲಿ ವಿಜಯಪುರದ ಎಂ ಬಿ ಪಾಟೀಲವರು ನಿರಾವರಿ ಸಚಿವರಾಗಿ ಕೆರೆ ತುಂಬುವ ಯೋಜನೆಯನ್ನು ಅತ್ಯಂತ ಯಶಸ್ವಿಗೊಳಿಸಿದರು ಗ್ಯಾರಂಟಿಯಿಂದ ರಾಜ್ಯ ಸರಕಾರ ಬಡವರಾಗಿಲ್ಲ 56 ಸಾವಿರ ಕೋಟಿ ಖರ್ಚು ಮಾಡುತ್ತಿದೆ ಮುಂಬರುವ ದಿನಗಳಲ್ಲಿ 4 ಲಕ್ಷಕ್ಕಿಂತ ಅದಿಕ ಹಣದ ಬಜೆಟ್ ಮಂಡಿಸಲಾಗುತ್ತದೆ. ಗ್ಯಾರಂಟಿಯಿಂದ ಬಡವರಿಗೆ ಅನುಕೂಲವಾಗಿದೆ ರಾಜ್ಯದ ಜನ ಸರಕಾರವನ್ನು ಕೊಂಡಾಡಿ ಹೊಗಳುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳದೆ ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಮುದ್ದೇಬಿಹಾಳ ದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ಆರೋಪ ಮಾಡುತ್ತಿರುವವರು. ಹಿಂದಿನ ಸರಕಾರ ನಾಲ್ಕು ವರ್ಷಗಳ ಅಧಿಕಾರಿದಲ್ಲಿ ಯಾವೊಂದು ಅಭಿವೃದ್ಧಿ ಮಾಡದೇ ಸುಮಾರು 1 ಲಕ್ಷ 20 ಸಾವಿರ ಕೋಟಿ ರೂಗಳು ಬಾಕಿ ಉಳಿಸಿ ಕೊನೆ ಒಂದು ವರ್ಷದ ಚುನಾವಣಾ ಅವಧಿಯಲ್ಲಿ ಜನರಿಗೆ ಎದ್ದು ಕಾಣುವ ಕೆಲವೇ ಕೆಲ ಕಾಮಗಾರಿಗಳನ್ನು ಮಾಡಿ ನಾನು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುವ ಕೆಲಸದಲ್ಲಿ ತೊಡಗಿದ್ದಾರೆ. ನಿರಾವರಿ ಯಲ್ಲಿ 109 ಕೋಟಿ ರೂಗಳ ಕಾಮಗಾರಿಗೆ ಕೈಗೆತ್ತಿಕೊಳ್ಳಲಾಗಿದೆ.
ಒಂದೂ ಮುರಾರ್ಜಿ ಶಾಲೆ ತರಲು ಹಿಂದಿನ ಸರಕಾರದಲ್ಲಿ ಸಾಧ್ಯವಾಗಲಿಲ್ಲ ಆದರೇ ನಮ್ಮ ಸರಕಾರದಲ್ಲಿ ಮತಕ್ಷೇತ್ರದ ವಿವಿಧ ಸರಕಾರಿ ಶಾಲಾ ಕಾಲೇಜುಗಳ ಜೀರ್ಣೋದ್ದಾರಕ್ಕಾಗಿ ಸುಮಾರು 1 ಕೋಟಿ 70 ಲಕ್ಷಗಳಲ್ಲಿ ಖರ್ಚು ಮಾಡಲಾಗಿದೆ, ಕೆ ಆರ್ ಐ ಡಿ ಎಲ್ ಇಲಾಖೆಯಿಂದ ಸುಮಾರು 54 ಕೋಟಿ 50 ಸಾವಿರ ಕೋಟಿಯಲ್ಲ ಕಾಮಗಾರಿ ಕೈಗೆತ್ತಿ ಕೊಳ್ಳಲಾಗಿದೆ. ಆರ್ ಡಬ್ಲೂ ಎಸ್ ಇಲಾಖೆಯಿಂದ 90 ಕೋಟಿ 76 ಲಕ್ಷ, ಎಂ ಐ ಇಲಾಖೆಯಿಂದ 38 ಕೋಟಿ 55 ಲಕ್ಷ ರೂಗಳು, ಯುಎಫ್‌ಐಡಿಎಫಸಿ ಇಲಾಖೆ ವತಿಯಿಂದ 34.77 ಕೋಟಿಯಲ್ಲಿ ಯುಜಿಡಿ ಕಾಮಗಾರಿ, ಅಮೃತ ಯೋಜನೆಯಲ್ಲಿಯಲ್ಲಿ ಪಟ್ಟಣದಲ್ಲಿ ದಿನದ 24 ಗಂಟೆ ನೀರು ಸರಬರಾಜ ಕಾಮಗಾರಿಗಾಗಿ 14 ಕೋಟಿ ವೆಚ್ಚದಲ್ಲಿ ಕಾಮಗಾರಿ, ಮುದ್ದೇಬಿಹಾಳ ಪಟ್ಟಣದಲ್ಲಿನ ನೂತನ ಮೆಗಾ ಮಾರ್ಕೇಟ ನಿರ್ಮಾಣಕ್ಕಾಗಿ 5 ಕೋಟಿ, ಮುಖ್ಯಮಂತ್ರಿಗಳ ವಿಶೇಷ ಅನುದಾದಡಿಯಲ್ಲಿವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮೊದಲ ಹಂತದಲ್ಲಿ 8 ಕೋಟಿ, ಮುದ್ದೇಬಿಹಾಳ ತಾಲೂಕಾ ಸರಕಾರಿ ಆರೋಗ್ಯ ಕೇಂದ್ರ ದುರಸ್ಥಿ ಹಾಗೂ ಪುನರ್ ನಿರ್ಮಾಣ ಕಾಮಗಾರಿಗಾಗಿ 1.70 ಕೋಟಿ, ಶಿರಾಢೋಣ ಲಿಂಗಸೂರ ರಸ್ತೆ ದುರಸ್ಥಿ, ಇಣಚಗಲ್ಲ ಮುರಾರ್ಜಿ ದೇಸಾಯಿ ಶಾಲೆ ನಿರ್ಮಾಣಕ್ಕಾಗಿ ಮತ್ತು ಕಂಪೌಂಡ ನಿರ್ಮಾಣಕ್ಕಾಗಿ 10.69 ಕೋಟಿ, ಬಿದರಕುಂದಿ ಮುರಾರ್ಜಿ ದೇಸಾಯಿ ವಸತಿ ನಿಲಯ ನಿರ್ಮಾಣಕ್ಕಾಗಿ 8.65 ಕೋಟಿ, ಮತ್ತು ಕಂಪೌಂಡಗಾಗಿ ಪ್ರತ್ಯೇಕ 2 ಕೋಟಿ, ಸರೂರು ಗ್ರಾಮದಲ್ಲಿರುವ ಹಾಲುಮತ ಗುರುಪೀಠದದಲ್ಲಿ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಹಾಗೂ ಸಮೂದಾಯ ನಿರ್ಮಾಣಕ್ಕಾಗಿ 4 ಕೋಟಿ, ಯಲಗೂರ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ ಸಮೂದಾಯಭವನ ನಿರ್ಮಾಣಕ್ಕಾಗಿ 2 ಕೋಟಿ, ಕುಂಟೋಜಿ ಗ್ರಾಮದಲ್ಲಿ ದೇವಿ ದೇವಸ್ಥಾನದ ಸಮೂದಾಯ ಭವನ ಕಾಮಗಾರಿಗಾಗಿ 50 ಲಕ್ಷ, ಬಳವಾಟಗ್ರಾಮದಲ್ಲಿ ಶ್ರೀ ಕಂಠಿ ಬಸವೇಶ್ವರ ದೇವಸ್ಥಾನದ ಹತ್ತಿರ ಸಮೂದಾಯಭವನಕ್ಕಾಗಿ 50 ಲಕ್ಷ, ಪಟ್ಟಣದ ಧರ್ವೇಶಿ ಸಮಾಜದ ಸಮೂದಾಯ ಭವನ ನಿರ್ಮಣಕ್ಕಾಗಿ 25 ಲಕ್ಷ, ಪಟ್ಟಣದ ಅಂಜುಮನ್ ಇಸ್ಲಾಂ ಸಮಾಜದ ಸಮೂದಾಯ ಭವನ ನಿರ್ಮಾಣಕ್ಕಾಗಿ 1.25 ಕೋಟಿ, ಕಾಳಗಿಯಿಂದ ಬಳಬಟ್ಟಿಯವರೆಗೆ ಕೂಡುವ ರಸ್ತೇ ಸುದಾರಣೆಗೆ 1 ಕೋಟಿ, ಮುದ್ದೇಬಿಹಾಳ ಆಲಮಟ್ಟಿ ರಸ್ತೆಯಿಂದ ಜಟ್ಟಗಿ ಗ್ರಾಮಕ್ಕೆ ಕೂಡುವ ರಸ್ಥೆ ಸುಧಾರಣೆಗಾಗಿ 75 ಲಕ್ಷ, ಚಲಮಿ ಕ್ರಾಸ್ ನಿಂದ ಕೋಳೂರು ತಾಂಡಾದವರಗೆ ರಸ್ತೆ ಸುಧಾರಣೆಗೆ 60 ಲಕ್ಷ, ತಾಲೂಕಿನ ತಾರನಾಳದಿಂದ ಮುದ್ದೇಬಿಹಾಳದವರಗೆ ಹಾಗೂ ಮುದ್ದೇಬಿಹಾಳ ನಿಡಗುಂದಿಯವರಗೆ ಸರಕಾರಿ ಪದವಿ ಪೂರ್ವ ಕಾಲೆಗೆ ಕೂಡುವ ರಸ್ತೆಗಾಗಿ 3.14 ಕೋಟಿ, ಹಡಲಗೇರಿ ರಸ್ತೆ ಸುಧಾರಣೆಗಾಗಿ 1.5 ಕೋಟಿ, ಕಂದಗನೂರದಿಂದ ಮೂದೂದರು ಹೋಗುವ ರಸ್ತೆ ಅಭಿವೃದ್ಧಿಗೆ 50 ಲಕ್ಷ, ತಾಂಡಾ ಅಭಿವೃದ್ಧಿ ನಿಗಮದಿಂದ ರಸ್ತೆ, ಚರಂಡಿ, ಹೈಮಾಸ್ಕ ದೀಪಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 1 ಕೋಟ, ನಾಲತವಾಡದಲ್ಲಿ ಕಂದಾಯ ಇಲಾಖೆ ಕಚೇರಿಯ ಧುರಸ್ಥಿಗಾಗಿ 2ಕೋಟಿ, ನಾಲತವಾಡ ಐಟಿಐ ಕಾಲೇಜ ಕಟ್ಟಡಕ್ಕಾಗಿ 65 ಲಕ್ಷ, ನಾಲತವಾಡದಿಂದ ಲೋಟಗೇರಿ ರಸ್ತೆ ಅಭಿವೃದ್ಧಿಗಾಗಿ 1 ಕೋಟಿ, ಅಡವಿ ಸೋಮನಾಳಕ್ಕೆ ಕೂಡುವ ರಸ್ತೆ ನಿರ್ಮಾಣಕ್ಕೆ 5 ಕೋಟಿ, ಬಲದಿನ್ನಿ ರಸ್ತೆನಿರ್ಮಾಣಕ್ಕೆ 1.70 ಕೋಟಿ, ಹಾಗೂ ಸೇತುವೆ ನಿರ್ಮಾಣಕ್ಕೆ 7 ಕೋಟಿ, ಕಪನೂರದಿಂದ ಹುನಕುಂಟಿಯವರಿಗೆ ರಸ್ತೆ ಹಾಗೂ ಬಾಂದಾರ ಹಾಗೂ ತಡೆಗೋಡೆ ನಿರ್ಮಾಣಕ್ಕಾಗಿ 6 ಕೋಟಿ, ಹಡಗಲಿಗೆ ಹೋಗುವ ರಸ್ತೆ ನಿರ್ಮಾಣಕ್ಕೆ 1.50 ಕೋಟಿ, ಮದರಿ ಕ್ರಾಸ್ ನಿಂದ ಯರಗಲ್ಲ ಗ್ರಾಮದವರೆಗೆ ಮರು ಡಾಂಭರಿಕರಣ ನಿರ್ಮಾಣಕ್ಕಾಗಿ 51 ಲಕ್ಷ, ಜತೆಗೆ ತಡೆಗೋಡೆ ನಿರ್ಮಾಣಕ್ಕಾಗಿ 40 ಲಕ್ಷ, ಘಾಳ ಪೂಜೆಯಿಂದ ಟಕ್ಕಳಕಿಗೆ ಕೂಡುವ ರಸ್ತೆ ಸುಧಾರಣೆಗೆ 10 ಲಕ್ಷ, ಸೇರಿದಂತೆ ಇನ್ನು ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಅದರಂತೆ ನಾಗರಬೆಟ್ಟ ಏತ ನಿರಾವರಿ ಯೋಜನೆ ಕಾಮಗಾರಿ ಸಧ್ಯ ಸಂಪೂರ್ಣ ಮುಗಿದ್ದು ಇನ್ನು ಕೆಲ ಖಾಸಗಿ ಹೊಲಗಳ ಮಾಲಿಕರಿಗೆ ಪರಿಹಾರ ಬಂದಿಲ್ಲವೆಂದು ಅರ್ಧಕ್ಕೆ ನಿಲ್ಲಿಸಲಾಗಿತ್ತು ಕಾರಣ ಕೆಬಿಜೆಎನ್ ಎಲ್ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಬೇಗ ಇತ್ಯರ್ಥಗೊಳಿಸಿ ಸಂಪೂರ್ಣ ಕಾಮಗಾರಿ ಮುಗಿಸಿ ಮುಂಬರುವ ಎರಡು ತಿಂಗಳೊಳಗಾಗಿ ಮುಖ್ಯಮಂತ್ರಿಗಳನ್ನು ಕರೆಯಿಸಿ ಉದ್ಘಾಟನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ರಾಜಕಾರಣ ಮಾಡಲು ಬರಿ ಸುಳ್ಳು ಹೇಳಿ ಮಾಡುವುದಲ್ಲ ಸತ್ಯವನ್ನು ಹೇಳಿದರೆ ಜನರು ನಂಬುತ್ತಾರೆ ಬರಿ ಸುಳ್ಳು ಹೇಳಿದರೆ ಜನರ ಅಪನಂಬಿಕೆಗೆ ಗುರಿಯಾಗಬೇಕಾಗುತ್ತದೆ ಬರಿ ವಿರೋಧಿಸುವುದಲ್ಲ. ಶಿಕ್ಷಣಕ್ಷೇತ್ರ, ನಿರಾವರಿ, ಕಂದಾಯ ಇಲಾಖೆ, ಆಸ್ಪತ್ರೆಗಳ ಸುಧಾರಣೆ, ಹೀಗೆ ಅನೇಕ ರೀತಿಯಿಂದ ಅಭಿವೃದ್ಧಿಪಡಿಸಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಮಾಡಿದಂತೆ ಕೇವಲ ಒಂದು ಸಿ ಸಿ ರಸ್ತೆ ಮಾಡಿ ಅಭಿವೃದ್ಧಿ ಮಾಡಿದ್ದೇನೆ ಎಂದರೆ ಹೇಗೆ ಸಾಧ್ಯ ಮುಂಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಈ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಮುಖಂಡರಾದ ವಾಯ್ ಎಚ್ ವಿಜಯಕರ, ಪುರಸಭೆ ಸ್ಥಾಯಿ ಸಮೀತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ಅಶೋಕ ಇರಕಲ್ಲ, ಬಹಾದ್ದೂರ ರಾಠೋಡ, ಮಲ್ಲು ಅಪರಾಧಿ ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 