ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಎಲ್ಲರ ಜೊತೆಗೂಡಿ ಮಹಾಪ್ರಸಾದೆ ಸೇವಿಸುವದರಲ್ಲಿ ಬಹಳ ಮಹತ್ವವಿದೆ : ಶ್ರೀಶೈಲಗೌಡ ಬಿರಾದಾರ
There is great significance in consuming Mahaprasadam together with everyone in the presence of Lor
ಸಿಂದಗಿ 03: ಪ್ರತಿ ಮನೆಯಲ್ಲಿ ಮಾಡಿದ ಅಡುಗೆ ಊಟವಾದರೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಎಲ್ಲರ ಜೊತೆಗೂಡಿ ದೇವರ ಹೆಸರಿನಲ್ಲಿ ಮಾಡುವ ಅಡುಗೆ ಮಹಾಪ್ರಸಾದವಾಗುತ್ತದೆ ಇಂತಹ ಪ್ರಸಾದ ಸೇವಿಸುವದರಲ್ಲಿ ಬಹಳ ಮಹತ್ವವಿದೆ ಎಂದು ಹೇಳಿದರು.
ನಗರದ ಕೃಷಿ ಮಾರುಕಟ್ಟೆ ಆವರಣದಲ್ಲಿರುವ ಅಯ್ಯಪ್ಪ ಸ್ವಾಮಿ ಸನ್ನಿದಿಯಲ್ಲಿ ಪ್ರಸಾದ ಕಾಮತ್ ಅವರ ವತಿಯಿಂದ ನಡೆದ ಮಹಾಪೂಜೆಯಲ್ಲಿ ಭಾಗವಹಿಸಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಸಂತರ ಶರಣರ ದೇವತೇಗಳ ಪೂಜೆಗಳು ಮಾಡುತ್ತಿರುವದು ನಮ್ಮ ಭಾರತಿಯ ಪರಂಪರೆಯ ಹೆಗ್ಗುರುತು ಆಗಿದೆ ಎಂದ ಅವರು, ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಸತತ ಒಂದು ತಿಂಗಳಿನಿಂದ ಚಳಿಯನ್ನದೆ ಅವರು ಮಾಡುವ ಭಕ್ತಿ ಸೇವೆ ನಂತರ ಮಕರ ಸಂಕ್ರಾಂತಿ ದಿನದಂದು ಮಕರ ಜ್ಯೋತಿಯ ದರ್ಶನ ಪಡೆದು ತಮ್ಮ ಜೀವನ ಪಾವನ ಪಡೆಸಿಕೊಳ್ಳುತ್ತಾರೆ ಅಂತಹ ಸೇವಾಧಾರಿಗಳ ಸೇವೆಯಲ್ಲಿ ಪಾಲ್ಗೊಂಡು ನಾವೆಲ್ಲರು ಪ್ರಸಾದ ಸೇವನೆ ಮಾಡುವುದು ಪೂಣ್ಯದ ಕಾರ್ಯವಾಗಿದೆ ಎಂದರು
ಬಳಿಕ ವರ್ತಕರಾದ ಗುರುಪ್ರಸಾದ್ ಕಾಮತ್, ಕಿರಣ ಸ್ವಾಮಿ ಪ್ರಶಾಂತ ಕೆಂಬಾವಿ ಆನಂದ ಮಲ್ಲೆದ ಮಾಲಾದಾರಿಗಳು ಮಾತನಾಡಿ, ಅಯ್ಯಪ್ಪ ಸ್ವಾಮಿಯ ರಥವು ಬಹಳ ಕಠಿಣ ಆದರೆ ವರವು ಅಷ್ಟೇ ಸುಲಭ ಎಷ್ಟೇ ಆಚಾರ ವಿಚಾರದಿಂದ ಮಾಲಾದಾರಿಗಳು ಅಯ್ಯಪ್ಪ ಸ್ವಾಮಿಯ ಸೇವೆಯನ್ನು ಮಾಡುತ್ತಾರೆ ಕಟ್ಟುನಿಟ್ಟಾದ ವೃತವನ್ನು ಆಚರಿಸುತ್ತಾರೋ ಅಷ್ಟು ಪುಣ್ಯ ಪ್ರಾಪ್ತಿ ದೊರೆಯುವುದರಲ್ಲಿ ಸಂದೇಹವಿಲ್ಲ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಗುರುಸ್ವಾಮಿ ಕಿರಣ್ ಶಿವಶಿಂಪಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಜನ ಮಾಲಾಧಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಂತರ ಎಲ್ಲ ಮಾಲಾದಾರಿಗಳಿಗೂ ಸೇರಿದಂತೆ ಭಕ್ತಾದಿಗಳಿಗೆ ಗುರುಪ್ರಸಾದ್ ಕಾಮತ್ ಇವರಿಂದ ಅನ್ನಪ್ರಸಾದ ಸೇವೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಾವ್ಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಚಂದ್ರಶೇಖರ ನಾಗರಬೆಟ್ಟ, ಪತ್ರಕರ್ತ ವಿಯಕುಮಾರ ಪತ್ತಾರ. ಡಾ. ಚಿದಾನಂದ ಅರಳಗುಂಡಗಿ. ಡಾ.ಪ್ರಶಾಂತ ಬಮ್ಮಣ್ಣಿ .ಸಿದ್ದಣ್ಣ ಪೂಜಾರಿ. ಶ್ರೀಪಾದ ಮಲ್ಲೆದ, ಬಿಮಾಶಂಕರ ಬಡಿಗೇರ.ಮೊನಪ್ಪ ಪತ್ತಾರ, ಗಂಗಾದರ ಕಿಣಗಿ. ಬಿ.ಎಸ.ಮಠ ನ್ಯಾಯವಾದಿ ಮಾರಸಳ್ಳಿ, ಅಣ್ಣಾರಾಯ ಜಂಬಗಿ.ರುದ್ರಸ್ವಾಮಿ ಹಿರೇಮಠ, ಸಂಗಣ್ಣ ಕುಂಬಾರ, ಜಯಪ್ರಕಾಶ ಈಳಗೇರ, ಪ್ರಕಾಶ್ ಲೋಣಿ, ಬಸವರಾಜ ಶಿವಶಿಂಪಗೇರ, ಶಂಕರಗೌಡ ಬನ್ನೆಟ್ಟಿ, ಶಿವು ರೆಬಿನಾಳ, ಶಾಂತೂ ಬಿರಾದಾರ, ಶರಣು ಅರಳಗುಂಡಗಿ ಸೇರಿದಂತೆ ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 