ಲೋಕದರ್ಶನ ವರದಿ
ಬೆಳಗಾವಿ 22: ಮಕ್ಕಳಲ್ಲಿರುವ ಒಲವನ್ನು ಗುರುತಿಸದ ಪಾಲಕರು ತಮ್ಮ ಬಯಕೆಗಳ ಒತ್ತಡವನ್ನು ಮಕ್ಕಳ ಮೇಲೆ ಹೇರುತ್ತಿರುವುದು ನಿಜಕ್ಕೂ ವಿಷಾದನೀಯ. ಮಕ್ಕಳಲ್ಲಿರುವ ಪ್ರತಿಭೆ, ಒಲವನ್ನು ಗುರುತಿಸಿ ಪೋಷಿಸುವುದು ಪಾಲಕರ ಕರ್ತವ್ಯವಾಗಿದೆ. ಪರೀಕ್ಷೆಗೆ ಸೀಮಿತವಾದ ಶಿಕ್ಷಣದ ಬದಲಾಗಿ ಬದುಕನ್ನು ಕಟ್ಟಿಕೊಳ್ಳುವ ಶಿಕ್ಷಣದ ಅವಶ್ಯಕತೆಯಿದೆ ಎಂದು ಹೆಳಿದರು ಎಂದು ಡಾ. ಕವಿತಾ ಕುಸಗಲ್ಲ ಇಂದಿಲ್ಲಿ ಹೇಳಿದರು.
ರೋಟರಿ ಕ್ಲಬ್ ಬೆಳಗಾವಿ ಮಿಡ್ ಟೌನ್ದವರು ಕೊಡಮಾಡುವ "ವರ್ಷದ ಅತ್ಯುತ್ತಮ ವಿದ್ಯಾಥರ್ಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಂಗ್ಲ ಬಾಷಾ ಸಹಾಯಕ ಪ್ರಾಧ್ಯಾಪಕಿ ಡಾ. ಕವಿತಾ ಕುಸುಗಲ್ಲರವರು ಮೇಲಿನಂತೆ ಪಾಲಕರಿಗೆ ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ರೊ. ಅಶೋಕ ಮಳಗಲಿಯವರು ರೋಟರಿ ಕ್ಲಬ್ ಬೆಳಗಾವಿ ಮಿಡ್ ಟೌನ ಸಂಸ್ಥೆಯು ಬೆಳಗಾವಿಯ ಪ್ರೌಢಶಾಲೆಗಳಲ್ಲಿ ಎಸ್.ಎಸ್. ಎಲ್.ಸಿ. ಓದುತ್ತಿರುವ ಕನ್ನಡ, ಇಂಗ್ಲಿಷ್, ಮತ್ತು ಮರಾಠಿ ಭಾಷಾ ಮಾದ್ಯಮದ ವಿದ್ಯಾಥರ್ಿಗಳಿಗೆ ಪ್ರತಿವರ್ಷ ಸ್ಪಧರ್ಾತ್ಮಕ ಪರೀಕ್ಷೆ ಆಯೋಜಿಸುವ ಮೂಲಕ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ರೂ 5000, 3000, 2000 ಗಳ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪತ್ರ ನೀಡುವುದಲ್ಲದೇ ಭಾಗವಹಿಸಿದ ಎಲ್ಲಾ ವಿದ್ಯಾಥರ್ಿಗಳಿಗೆ ಪ್ರಮಾಣ ಪತ್ರಗಳನ್ನು ನೀಡುವ ಮೂಲಕ ಸೇವೆ ಸಲ್ಲಿಸುತ್ತಿದೆ. ಜಗತ್ತಿನಾದ್ಯಂತ ಪೋಲಿಯೋ ಲಸಿಕೆ ಪೂರೈಸಿ, ಪೋಲಿಯೋದಿಂದ ಮುಕ್ತ ಗೋಳಿಸುವ ನಿಟ್ಟಿನಲ್ಲಿ ಮಹತ್ತರ ಕಾರ್ಯವನ್ನು ನಮ್ಮ ಸಂಸ್ಥೆ ಮಾಡುತ್ತಿದೆ ಎಂದು ಸಂಸ್ಥೆಯ ಸಮಾಜಮುಖಿ ಕಾರ್ಯಗಳ ಕುರಿತು ತಿಳಿಸಿದರು.
ಪ್ರಥಮ ಬಹುಮಾನವನ್ನು ಮಹಿಳಾ ಮಂಡಳ ಮಹಾವಿದ್ಯಾಲಯ ಪ್ರೌಢಶಾಲಾ ವಿದ್ಯಾಥರ್ಿ ಕುಮಾರ ಮನೀಷ ಸಬ್ನಿಸ ಪಡೆದಿದ್ದು ದ್ವಿತೀಯ ಮತ್ತು ತೃತೀಯ ಸ್ಥಾನ ಗಳನ್ನು ಅನುಕ್ರಮವಾಗಿ ಪೋತದಾರ ಇಂಟರ್ನ್ಯಾಷನಲ್ ಶಾಲೆಯ ಗೌರಿ ಚಿಕ್ಕಮಠ, ಹಾಗೂ ಡಿವೈನ್ ಪ್ರೊಡೆನ್ಸಿಯಲ್ ಶಾಲೆಯ ಕುಮಾರಿ ಸಾನಿಕಾ ಗುರವ ಪಡೆದರು. ಇದೇ ಸಂದರ್ಭದಲ್ಲಿ ರೊ. ನೀತಾ ಕುಡತರಕರ(ಬೀಡಿಕರ) ರವರನ್ನು ಪಿಎಚ್ಎಫ್ಪಿನ್ ನೀಡಿ ಗೌರವಿಸಲಾಯಿತು.
ರೊ. ರಾಜೀವ ಪಂಡಿತ ರವರು ಸ್ವಾಗತಿಸಿದರು. ರೊ. ಮನೋಹರ ಜರತಾರಕರ ರವರು ವಂದಿಸಿದರು. ಪರೀಕ್ಷೆ ನಡೆಸಲು ಸಹಾಯ ಸಹಕಾರ ಮಾಡಿದ ಶಿಕ್ಷಕರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲಕರು ಶಿಕ್ಷಕರು ರೋಟರಿ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಶಿವಾನಂದ ಪಡೆನ್ನವರ, ಸತೀಶ ನಾಯಕ, ಕಿರಣ ಲುಗಡೆ, ಅನ್ನಪೂರ್ಣ ಮಳಗಲಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.