ಪಾಲಕರು ಮತ್ತು ಶಿಕ್ಷಕರ ನಡುವೆ ಸೇತುವೆಯ ಅಗತ್ಯವಿದೆ : ಪ್ರದೀಪ ಗುಡ್ಡದ

ಪಾಲಕರು ಮತ್ತು ಶಿಕ್ಷಕರ ನಡುವೆ ಸೇತುವೆಯ ಅಗತ್ಯವಿದೆ : ಪ್ರದೀಪ ಗುಡ್ಡದ There is a need for a bridge between parents and teachers: Pradeepa Guddada

ಪಾಲಕರು ಮತ್ತು ಶಿಕ್ಷಕರ ನಡುವೆ ಸೇತುವೆಯ ಅಗತ್ಯವಿದೆ : ಪ್ರದೀಪ ಗುಡ್ಡದ 

ಗದಗ 13: ಮಾನವನ ವ್ಯಕ್ತಿತ್ವದ ರೂಪುರೇಖೆಯು ಅವನ ಬಾಲ್ಯದಿಂದ ಅವನ ಸುತ್ತಮುತ್ತಲಿರುವ ಶಿಕ್ಷಕರ, ಪಾಲಕರ ಹಾಗು ಸಮಾಜದ ಜನರ ಪ್ರಭಾವದಿಂದ ಆಗಿರುತ್ತದೆ. ಬರೀ ಶಿಕ್ಷಣವೊಂದೇ ಸಿಕ್ಕರೆ ಸಾಲದು. ಅದರ ಜೊತೆ ಇನ್ನು ಅನೇಕ ಅಂಶಗಳನ್ನು ಬಾಲ್ಯದಿಂದ ರೂಢಿಸಿಕೊಂಡರೆ ಆತ ಯಶಸ್ವಿಯೆನಿಸಿಕೊಳ್ಳುತ್ತಾನೆ. ಹೀಗಾಗಿ ಪಾಲಕರು ಮತ್ತು ಶಿಕ್ಷಕರ ನಡುವೆ ಸೇತುವೆಯ ಅಗತ್ಯವಿದೆ ಎಂದು ಚಾಣಕ್ಯ ಶಿಕ್ಷಣ ಸಂಸ್ಥೆಯ ಶ್ರೀ ಪ್ರದೀಪ ಗುಡ್ಡದ ತಿಳಿಸಿದರು.  

ನಗರದ ಕೆ.ಎಲ್‌.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯ ವಿಭಾಗವು ದಿನಾಂಕ 13,09.2025ರ ಶನಿವಾರ  ಹಮ್ಮಿಕೊಂಡಿದ್ದ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪಾಲಕರ ಸಭೆಗಳು ಮಕ್ಕಳ ಶಿಕ್ಷಣಕ್ಕೆ ನಿರ್ಣಾಯಕವಾಗಿವೆ. ಏಕೆಂದರೆ, ಅವು ಪಾಲಕರು ಮತ್ತು ಶಿಕ್ಷಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. ಮಗುವಿನ ಶೈಕ್ಷಣಿಕ, ಸಾಮಾಜಿಕ ಮತ್ತು ಭಾವನಾತ್ಮಕ ಪ್ರಗತಿಯನ್ನು ಚರ್ಚಿಸಲು ಅವಕಾಶವನ್ನು ಒದಗಿಸುತ್ತವೆ. ಈ ಸಭೆಗಳು ಪೋಷಕರ ತಮ್ಮ ಮಗುವಿನ ಸಾಮರ್ಥ್ಯ ಮತ್ತು ಸವಾಲುಗಳನ್ನು ಅರ್ಥಮಾಡಿಕೊಳ್ಳಲು, ಶಾಲೆಯಲ್ಲಿ ತೊಡಗಿಸಿಕೊಳ್ಳಲು ಹಾಗೂ ಮನೆ ಮತ್ತು ಶಾಲೆಯ ನಡುವಿನ ಬಲವಾದ ಪಾಲುದಾರಿಕೆಯನ್ನು ಬೆಳೆಸಲು ಸಹಾಯ ಮಾಡುತ್ತವೆ. ಇದರಿಂದ ಮಗು ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಪಾಲಕರ ಸಭೆಗಳು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ ಎಂದರು.  

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಿವೃತ್ತ ಮೇಜರ್ ಆನಂದರವರು ಮಾತನಾಡಿ ಪಾಲಕರ ಸಭೆಯು, ಮಗುವಿನ ಪ್ರಗತಿಯ ಕುರಿತು ಮಾಹಿತಿ ಪಡೆಯಲು, ಪೋಷಕರು ತಮ್ಮ ಮಗುವಿನ ಶೈಕ್ಷಣಿಕ ಪ್ರಗತಿ, ಕಲಿಯುವ ವಿಧಾನ ಮತ್ತು ಶಾಲೆಯಲ್ಲಿನ ಸಾಮಾಜಿಕ ಸಂವಹನದ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಬಹುದು, ಶಾಲಾ ಪರಿಸರದ ಬಗ್ಗೆ ತಿಳಿಯಬಹುದು, ಮಗು ಶಾಲೆಯಲ್ಲಿ ಹೇಗೆ ವರ್ತಿಸುತ್ತದೆ, ಇತರರೊಂದಿಗೆ ಹೇಗೆ ಬೆರೆಯುತ್ತದೆ ಮತ್ತು ತರಗತಿಯ ವಾತಾವರಣ ಹೇಗಿದೆ ಎಂದು ಪೋಷಕರು ತಿಳಿಯಲು ಇದು ಅವಕಾಶ ನೀಡುತ್ತದೆ ಎಂದರು.  

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ. ಡಾ. ಎ. ಕೆ. ಮಠ ಅವರು ಪಾಲಕರ ಸಭೆಯು, ಮಕ್ಕಳ ಸವಾಲುಗಳನ್ನು ಗುರ್ತಿಸಿ, ಪರಿಹರಿಸಲು, ಪೋಷಕ-ಶಿಕ್ಷಕರ ಪಾಲುದಾರಿಕೆ ಬಲಪಡಿಸಲು, ಪಾರದರ್ಶಕತೆ ಮತ್ತು ನಂಬಿಕೆಯನ್ನು ಬೆಳೆಸಲು, ಪೋಷಕರ-ಶಿಕ್ಷಕರ ಸಭೆಯು ಸಹಯೋಗಕ್ಕೆ ಒಂದು ಅವಕಾಶ. ಹೀಗಾಗಿ, ನಿಮ್ಮ ಮಗುವಿನ ಕಲಿಕೆಯನ್ನು ಬೆಂಬಲಿಸಲು ತಂತ್ರಗಳನ್ನು ಅಭಿವೃದ್ಧಿಪಡಿಸಲು ಶಿಕ್ಷಕರೊಂದಿಗೆ ಕೆಲಸ ಮಾಡಲು ಮುಕ್ತವಾಗಿರಿ. ಆದ್ದರಿಂದ ಎಲ್ಲಾ ಪಾಲಕ-ಪೋಷಕರು ಶಾಲಾ-ಕಾಲೇಜುಗಳಲ್ಲಿ ಕರೆಯುವ ಪಾಲಕರ ಸಭೆಯಲ್ಲಿ ಭಾಗವಹಿಸಬೇಕು ಎಂದರು.  

ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಹರ್ಷ ನಿಲೂಗಲ್ ಪಾಲಕರನ್ನು ಉದ್ದೇಶಿಸಿ ಮಾತನಾಡಿದರು. ದೇಶಪಾಂಡೆ ಸ್ಕಿಲ್ ಅಕಾಡೆಮಿಯ ಶ್ರೀ ನಾಗಾರ್ಜುನ ಹುಳಕಟ್ಟಿ ವಿದ್ಯಾರ್ಥಿಗಳಿಗೆ ಭವಿಷ್ಯದ ಅವಕಾಶಗಳ ಕುರಿತು ತಿಳಿಸಿದರು.  ಡಾ. ವಿಠ್ಠಲ ಕೋಳಿ ಮತ್ತು ಪ್ರೊ, ವೀಣಾ ಈ ಮಹಾವಿದ್ಯಾಲಯದ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಪ್ರೊ. ಶ್ವೇತಾ ರಾಚಯ್ಯನವರ ಎಲ್ಲರನ್ನು ಸ್ವಾಗತಿಸಿದರು. ಪ್ರೊ. ಐ. ಬಿ. ಪಾಟೀಲ ವಂದಿಸಿದರು. ಕು, ಸಿಂದೂ ಕಿರೇಸೂರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು.