ರಂಗಸಂಪದದವರಿಂದ ರಂಗಭೂಮಿ ದಿನಾಚರಣೆ: ನಾಳೆಯಿಂದ ನಾಟಕೋತ್ಸವ

ರಂಗಸಂಪದದವರಿಂದ ರಂಗಭೂಮಿ ದಿನಾಚರಣೆ: ನಾಳೆಯಿಂದ ನಾಟಕೋತ್ಸವ Theatre fraternity celebrates Theatre Day: Drama festival from tomorrow

ಬೆಳಗಾವಿ 3: ನಗರದ ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಇದೇ ದಿ. 5 ಶುಕ್ರವಾರ, ದಿ. 6 ಶನಿವಾರ ಮತ್ತು  ತಾ. 7 ರವಿವಾರದವರೆಗೆ ಮೂರು ದಿನಗಳ ಕಾಲ ರಂಗಸಂಪದದವರು ಶಾಂತಕವಿ ಸಕ್ಕರಿ ಬಾಳಾಚಾರ್ಯ ಸ್ವರಣೆಯಲ್ಲಿ ಕನ್ನಡ ರಂಗಭೂಮಿ ದಿನಾಚರಣೆ-2025 ಮತ್ತು ಅಭಿಷೇಕ ಅಲಾನ್ಸ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. 

ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ದಿ. 5 ಶುಕ್ರವಾರದಂದು ಸಾಯಂಕಾಲ 6 ಗಂಟೆಗೆ ಅಭಿಷೇಕ ಅಲಾನ್ಸ ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮವಿದ್ದು ನ್ಯಾಯವಾದಿ ಎಸ್‌. ಎಂ. ಕುಲಕರ್ಣಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉದ್ಯಮಿ ಮದ್ವಾಚಾರ್ಯ ಆಯಿ ಉದ್ಘಾಟಿಸಲಿದ್ದಾರೆ. ಧಾರವಾಡದ ಖ್ಯಾತ ನಟ, ನಿರ್ದೇಶಕ, ಆಕಾಶವಾಣಿ ಉದ್ಘೋಶಕ ಡಾ. ಶಶಿಧರ ನರೇಂದ್ರ ಅತಿಥಿಗಳಾಗಿ ಆಗಮಿಸಲಿದ್ದು ಧಾರವಾಡದ ಮನೋಹರ ಗ್ರಂಥಮಾಲೆಯ ಸಮೀರ ಜೋಶಿ, ಧಾರವಾಡದ ಸಕ್ಕರಿ ಬಾಳಾಚಾರ್ಯ ಟ್ರಸ್ಟ್‌ ಕಾರ್ಯದರ್ಶಿ ಹನಮೇಶ ಸಕ್ಕರಿ ಉಪಸ್ಥಿತರಿರುತ್ತಾರೆ. ನಿನಾಸಂ ತಿರುಗಾಟ-2025 ತಂಡದವರಿಂದ ಭಾನು ಮಷ್ತಾಕ ಕಥೆ ಆಧಾರಿತ ‘ಹೃದಯ ತೀರ​‍್ು’ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕದ ರಂಗರೂಪ ಮತ್ತು ನಿರ್ದೇಶನ ಡಾ. ಎಂ. ಗಣೇಶ ಅವರದ್ದಾಗಿದೆ ಎಂದು ಹೇಳಿದರು. 

ದಿ. 6 ಶನಿವಾರದಂದು ಸಾಯಂಕಾಲ 6-30ಕ್ಕೆ ‘ಅವತರಣಮ್ ಭ್ರಾಂತಾಲಯಂ’ ನಾಟಕ ಪ್ರದರ್ಶನಗೊಳ್ಳಿದೆ. ಮೂಲ ಮಳೆಯಾಳಂ ಭಾಷೆಯ ನಾಟಕದ ರಚರನೆ ಬಿ. ಶಂಕರ ಪಿಳ್ಳೈ ಅವರದ್ದಾಗಿದ್ದು  ಕನ್ನಡಕ್ಕೆ ನಾ. ದಾಮೋದ ಶೆಟ್ಟಿ ಅನುವಾದಿಸಿದ್ದಾರೆ. ಶಂಕರ ವೆಂಕಟೇಶ್ವರನ್ ನಿರ್ದೇಶನವಿದೆ. 

ದಿ. 7 ರವಿವಾರ 6-30ಕ್ಕೆ ಬೆಳಗಾವಿ ರಂಗಸಂಪದ ತಂಡದವರಿಂದ ವಿಜಯದಾಸರ ಚಮತ್ಕಾರಗಳನ್ನೊಳಗೊಂಡಿರುವ ಭಕ್ತಿ ಪ್ರಧಾನವಾದ ನಾಟಕ ‘ಸ್ಮರಿಸಿ ಬದುಕಿರೋ...’ ನಾಟಕ ಪ್ರದರ್ಶನಗೊಳ್ಳಲಿದೆ. ಗಂಗಾವತಿಯ ದಂಡಿನ ಅವರ ರಚನೆಯಾಗಿದ್ದು ಸೀಮಾ ಅವರ ಸಂಗೀತವಿದೆ. ಡಾ. ಅರವಿಂದ ಕುಲಕರ್ಣಿಯವರ ನಿರ್ದೇಶನವಿದೆ ಎಂದು ಮೂರೂ ದಿನದ ಕಾರ‌್ಯಕ್ರಮದ ವಿವರಣೆಯನ್ನು ಡಾ. ಕುಲಕರ್ಣಿಯವರು ನೀಡಿದರು. 

ರಂಗಸಂಪದ ಪ್ರೇಕ್ಷಕ ಸದಸ್ಯತ್ವವನ್ನು ಹೊಂದಿದವರಿಗೆ ಪ್ರವೇಶ ಉಚಿತವಿದೆ. ಉಳಿದ ಪ್ರೇಕ್ಷಕರಿಗೆ ಒಬ್ಬರಿಗೆ ಸಹಾಯಧನವಾಗಿ 100 ರೂಪಾಯಿ ನೀಡಬೇಕಾಗುವುದು. ಪ್ರತಿ ಸರಿಯಾದ ಸಮಯಕ್ಕೆ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದು 10 ನಿಮಿಷ ಮೊದಲೇ ಆಸೀರನಾಗಿರಬೇಕೆಂದು ಹೇಳಿದರು. ಕಾರ್ಯದರ್ಶಿ ಪ್ರಸಾದ ಕಾರಜೋಳ, ಉಪಾಧ್ಯಕ್ಷ ಗುರುನಾಥ ಕುಲಕರ್ಣಿ, ರಾಮಚಂದ್ರ ಕಟ್ಟಿ ಹಾಗೂ ಸದಸ್ಯ ಅಶೋಕ ಕುಲಕರ್ಣಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.