ಯುವಕ ಕಾಣೆ; ಪತ್ತೆಗೆ ಮನವಿ

ಕನ್ನಡ ಮತ್ತು ತೆಲುಗು ಭಾಷೆಯನ್ನು ಮಾತನಾಡುತ್ತಾನೆ

ಯುವಕ ಕಾಣೆ; ಪತ್ತೆಗೆ ಮನವಿ 

ಬಳ್ಳಾರಿ 25:ತೆಕ್ಕಲಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಾರ ಹೊಸಳ್ಳಿ 2 ನೇ ವಾರ್ಡ್‌ನ ನಿವಾಸಿ ಮಹೇಂದ್ರ ಎನ್ನುವ 17 ವರ್ಷದ ಯುವಕ ನ.06 ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಸಬ್ ಇನ್ಸ್‌ಪೆಕ್ಟರ್ ಅವರು ಮನವಿ ಮಾಡಿದ್ದಾರೆ. 

ಯುವಕನ ಚಹರೆ ಗುರುತು: ಎತ್ತರ 5.1 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲ ಕಿವಿಯಲ್ಲಿ ಓಲೆ ಹಾಕಿರುತ್ತಾನೆ. ಕನ್ನಡ ಮತ್ತು ತೆಲುಗು ಭಾಷೆಯನ್ನು ಮಾತನಾಡುತ್ತಾನೆ.ಯುವಕನ ಮೈಮೇಲೆ ತಿಳಿ ನೀಲಿ ಬಣ್ಣದ ಪ್ಯಾಂಟ್, ನೀಲಿ ಮತ್ತು ಪಿಂಕ್ ಕಲರ್ ಗೆರೆಗಳಿರುವ ಬಿಳಿ ಬಣ್ಣದ ಆಫ್ ಷರ್ಟ್‌ ಧರಿಸಿರುತ್ತಾನೆ.ಮೇಲ್ಕಂಡ ಚಹರೆ ಗುರುತುಗಳುಳ್ಳ ಯುವಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ತೆಕ್ಕಲಕೋಟೆ ಪೊಲೀಸ್ ಠಾಣೆ ಪಿ.ಎಸ್‌.ಐ ದೂ.08396-248013, ಮೊ.9480803055, ಸಿ.ಪಿ.ಐ ಮೊ.08396-248044, ಬಳ್ಳಾರಿ ಗ್ರಾಮೀಣ ಉಪ ವಿಭಾಗ ಡಿ.ಎಸ್‌.ಪಿ ದೂ.08392-276000, ಎಸ್‌.ಪಿ ದೂ.08392-258400 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.