ಸಾಹಿತಿ ವೈ. ಬಿ. ಕಡಕೋಳ ಕೃತಿ ಲೋಕಾರೆ್ಣ
The work of the writer Y. B. Kadakola is a work of Lokarena.
ಸಾಹಿತಿ ವೈ. ಬಿ. ಕಡಕೋಳ ಕೃತಿ ಲೋಕಾರೆ್ಣ
ಯರಗಟ್ಟಿ 11: ತಾಲೂಕಿನ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಅವರ 38ನೆಯ ಸಂಪಾದಿತ ಕೃತಿ ಒಗಟುಗಳು ಹಾಗೂ ನುಡಿಮುತ್ತುಗಳು ಕೃತಿ ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕಾವ್ಯಶ್ರೀ ಚಾರಿಟೆಬಲ್ ಟ್ರಸ್ಟ ಸಹಯೋಗದಲ್ಲಿ ಜರುಗಿದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಲೋಕಾರೆ್ಣ ಗೊಳಿಸಲಾಯಿತು.
ವೇದಿಕೆಯಲ್ಲಿ ನಟ ಚಿಕ್ಕ ಹೆಜ್ಜಾಜೆ ಮಹದೇವ ಹಾಗೂ ಆರೂಢ ಭಾರತಿ ಸ್ವಾಮೀಜಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಉಪಾಧ್ಯಕ್ಷ ಟಿ. ತ್ಯಾಗರಾಜು, ಕಾವ್ಯಶ್ರೀ ಚಾರಿಟೆಬಲ್ ಅಧ್ಯಕ್ಷ ಜಿ. ಶಿವಣ್ಣ, ಚೇತನ ಪೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ, ಭಾಷಾ ಅಲ್ಪಸಂಖ್ಯಾತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಎಲ್. ಐ. ಲಕ್ಕಮ್ಮನವರ, ಸಾಹಿತಿ ಪಂಡಿತ ಅವುಜಿ.ಅಪ್ನಾದೇಶ ಸಂಘಟನೆಯ ರಾಜ್ಯಾಧ್ಯಕ್ಷ ವೈ.ಬಿ.ಕಡಕೋಳ, ಸಂಘಟನಾ ಕಾರ್ಯದರ್ಶಿ ಡಾ. ವೀಣಾ ಲೂಸಿ ಸಾಲ್ಡಾನಾ. ಮೊದಲಾದವರ ಸಮ್ಮುಖದಲ್ಲಿ ಲೋಕಾರೆ್ಣಗೊಳಿಸಲಾತು.
ಕೃತಿ ಲೋಕಾರೆ್ಣಗೊಳಿಸಿ ಮಾತನಾಡಿದ ನಟ ಚಿಕ್ಕ ಹೆಜ್ಜಾಜೆ ಮಹದೇವ್ ಈ ಕೃತಿ ಬಹಳ ಮೌಲ್ಯವಾದದ್ದು. ಒಗಟುಗಳನ್ನು ಓದುವುದರಿಂದ ಮನಸ್ಸು ಹಾಗೂ ಬುದ್ದಿ ಚುರಕಾಗುತ್ತದೆ.ನುಡಿಮುತ್ತುಗಳನ್ನು ವಿದ್ಯಾರ್ಥಿಗಳು ನಿತ್ಯವೂ ಓದಬೇಕು ಶಾಲೆಯ ನೋಟಿಸ್ ಬೋರ್ಡನಲ್ಲಿ ಶಿಕ್ಷಕರು ಪ್ರತಿನಿತ್ಯ ಒಂದೊಂದು ನುಡಿಮುತ್ತುಗಳನ್ನು ಹಾಕಬೇಕು.ವಿದ್ಯಾರ್ಥಿಗಳೂ ಆ ನುಡಿಮುತ್ತುಗಳನ್ನು ಓದಬೇಕು.ಹಾಗೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಇಂಥ ಕೃತಿಗಳನ್ನು ಪ್ರತಿಯೊಬ್ಬ ಪಾಲಕರು ಕೊಂಡುಕೊಂಡು ಮಕ್ಕಳಿಗೆ ಓದಲು ಕೊಡಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಾಹಿತಿ ವೈ ಬಿ ಕಡಕೋಳ ಹಾಗೂ ಇವುಗಳನ್ನು ಸಂಗ್ರಹಿಸಿದ ಗುರುಮಾತೆ ದತ್ತಿದಾನಿ ಲೂಸಿ ಸಾಲ್ಡಾನಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಚಂದ್ರಶೇಖರ ಮಾಡಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು ಜಿ. ಶಿವಣ್ಣ ಸ್ವಾಗತಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 