ಧ.ಗ್ರಾಮಾಭಿವೃದ್ಧಿ ಸಂಘದ ಕಾರ್ಯ ಮೆಚ್ಚುವಂತದ್ದು: ಭಾಗಶ್ರೀ ಹುಗ್ಗಿ
The work of the Rural Development Association is praiseworthy: Bhagashree Huggi
ಬೈಲಹೊಂಗಲ 28: ಮಕ್ಕಳ ವ್ಯಸನ ಮುಕ್ತಕ್ಕಾಗಿ ಅರಿವು ಮೂಡಿಸಲು ಇಂತಹ ಕಾರ್ಯಕ್ರಮ ಅವಶ್ಯಕ ಎಂದು ನಗರಸಭೆ ಆಯುಕ್ತೆ ಭಾಗಶ್ರೀ ಹುಗ್ಗಿ ಕರೆ ನೀಡಿದರು. ಅವರು ಬೈಲಹೊಂಗಲ ನಗರದ ಇತಿಹಾಸ ಪ್ರಸಿದ್ಧ ನಗರ ಸಭೆಯ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ದಿ ಸಂಸ್ಥೆಯ ಬಿ.ಸಿ ಟ್ರಸ್ಟ್ ಅಡಿಯಲ್ಲಿ ಹಮ್ಮಿಕೊಂಡ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ನಾವು ಭಾರತದ ಜನಸಂಖ್ಯೆ ಮತ್ತು ಸಾಕ್ಷರತೆಯನ್ನು ನೋಡಿದಾಗ ಮಕ್ಕಳ ವ್ಯಸನದಿಂದಾಗುವ ಪರಿಣಾಮಗಳು ಹಾಗೂ ಮಕ್ಕಳ ಮೇಲೆ ಆಗುವ ಅಪರಾಧಗಳನ್ನು ನೋಡಿದಾಗ ಈ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಾರ್ಯ ಮೆಚ್ಚುವಂತದ್ದು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತಾನಾಡಿದ ಶಿಕ್ಷಣ ಪ್ರೇಮಿ ನಾರಾಯಣ ನಲವಡೆ ಇವರು ಮಾತನಾಡುತ್ತಾ ಬೆಳೆವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ, ಮಕ್ಕಳು ಸದೃಢ ಮತ್ತು ಸ್ವಸ್ಥ ಶರೀರ ಹೊಂದಿದ್ದಲ್ಲಿ ಸ್ವಸ್ಥ ಮನಸ್ಸು ಇರುತ್ತದೆ. ಸ್ವಸ್ಥ ಮನಸ್ಸು ಇದ್ದಲ್ಲಿ ಏಕಾಗ್ರತೆಯಿಂದ ಅಧ್ಯಯನ ಮಾಡಲು ಸಾದ್ಯವಾಗಲಿದೆ ಕಾರಣ ಮಕ್ಕಳು ಹದಿ-ಹರೆಯದ ಇಂತಹ ಸಮಯದಲ್ಲಿ ತಮ್ಮ ಸುತ್ತಲಿನ ಜನರ ಚಟ ಹಾಗೂ ವ್ಯಸನಗಳಿಗೆ ಆಕರ್ಷಿತರಾಗಿ, ಚಟ ಹಾಗೂ ವ್ಯಸನಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚು ಇರುವುದರಿಂದ ಇಂತಹ ವಯಸ್ಸಿನಲ್ಲಿಯೇ ಅವರಿಗೆ ಪ್ರತಿರೋಧಕ ತಿಳುವಳಿಕೆ ನೀಡಿ ಚಟ ಹಾಗೂ ವ್ಯಸನದಿಂದ ಭವಿಷ್ಯ ಹಾಳಾಗುತ್ತದೆ ಕಾರಣ ತಮ್ಮ ಭವಿಷ್ಯ ಗಮನದಲ್ಲಿಟ್ಟುಕೊಂಡು ಚಟ,ವ್ಯಸನಮುಕ್ತ ಸದೃಢ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಪ್ರಮಾಣವಚನ ಬೋಧಿಸಲಾಯಿತು.
ಬೆಳಗಾವಿಯ ಉಪನ್ಯಾಸಕ ಗಜಾನನ ಶಿಂಗೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಬೈಲಹೊಂಗಲ ತಾಲೂಕು ಅಧಿಕಾರಿ ವಿಜಯಕುಮಾರ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಲ್ಲಪ್ಪ ಹಂಗರಕಿ ಮಾತನಾಡಿದರು. ಸೇವಾ ಪ್ರತಿನಿಧಿಗಳಾದ ಜಯಶ್ರೀ ಹೇಮಂತ, ನಿರ್ಮಲಾ, ಖುಷಿ, ಗುರುಗಳು, ಗುರುಮಾತೆಯರು ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ಈಶ್ವರ ಹೋಟಿ ಇವರು ಅತಿಥಿಗಳ ಪರಿಚಯ ಮಾಡಿಕೊಟ್ಟರು. ಶಿಕ್ಷಕರಾದ ರಾಮು ಸಾಲಿಮಠ ಸ್ವಾಗತಿಸಿದರು. ಗೀತಾ ಸೊಲಬನ್ನವರ ನಿರೂಪಿಸಿದರು. ಅದೃಶ್ಯ ಕುರಬೇಟ ವಂದಿಸಿದರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 