ದಿ ವಿಲನ್ ಕನ್ನಡ ಚಲನಚಿತ್ರದಲ್ಲಿ ದೃಷ್ಠಿ ಅಂಗವಿಕಲರ ಅವಮಾನಿಸು ಹಾಡು ರದ್ದತಿಗೆ ಆಗ್ರಹ

ಸಿಂದಗಿ27 : ದಿ ವಿಲನ್ ಕನ್ನಡ ಚಲನಚಿತ್ರದಲ್ಲಿ ದೃಷ್ಠಿ ಅಂಗವಿಕಲರನ್ನು ಅವಮಾನ ಮಾಡುವಂತ ಹಾಡು ಇದ್ದು ಈ ಹಾಡನ್ನು ರದ್ದು ಪಡೆಸಬೇಕು ಎಂದು ಕನರ್ಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ತಾಲೂಕಾ ಘಟಕದ ಕಾರ್ಯಕರ್ತರು ಶನಿವಾರ ಪಟ್ಟಣದ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಂತರ ಪ್ರತಿಭಟನಾಕಾರರು ತಹಶೀಲ್ದಾರ ಬಸವರಾಜ ಕಡಕಬಾವಿ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ ಕನರ್ಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ತಾಲೂಕಾ ಘಟಕದ ಅಧ್ಯಕ್ಷ ವಿಠ್ಠಲ ಕರ್ಜಗಿ ಮಾತನಾಡಿ, ಕನ್ನಡ ಚಲನಚಿತ್ರಗಳು, ಚಲನಚಿತ್ರಗಳಲ್ಲಿನ ಹಾಡುಗಳು ಅಂಗವಿಕಲರನ್ನು ಪ್ರೋತ್ಸಾಹಿಸುವಂತಿರಬೇಕು ಆದರೆ ದಿ ವಿಲನ್ ಕನ್ನಡ ಚಲನಚಿತ್ರದ ಹಾಡು ಒಂದರಲ್ಲಿ ಅಂಧತ್ವವನ್ನು ಹಿನಾಯಿಸುವ ಸಾಲುಗಳಿದ್ದು ಕೂಡಲೇ ಆ ಸಾಲುಗಳನ್ನು ಕಟ್ ಮಾಡಬೇಕು. ಇಲ್ಲದ ಪಕ್ಷದಲ್ಲಿ ಉಗ್ರವಾದ ಹೋರಾಟ ಕೈಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕನರ್ಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ರಾಜ್ಯ ಸಮಿತಿ ಸದಸ್ಯ ಅಶೋಕ ಕವಾಲಿಕರ, ತಾಲೂಕಾ ಘಟಕದ ಉಪಾಧ್ಯಕ್ಷ ಬಂದೇನಮಾಜ ಕಲ್ಲೂರ, ಸಂ.ಕಾರ್ಯದಶರ್ಿ ಸುನಿತಾ ಕ್ಷತ್ರಿ, ಪ್ರಧಾನಕಾರ್ಯದಶರ್ಿ ವಸಂತರಾವ ಕುಲಕಣರ್ಿ, ಕಾಶಿನಾಥ ಹೂಗಾರ, ಮಲ್ಲಿಕಾಜರ್ುನ ಕನರ್ಾಳ, ವಿಶ್ವನಾಥ ಹಿರೇಮಠ, ಹುಸೇನಸಾಬ ಮೊರಟಗಿ, ನೀಲಪ್ಪ ಹರಿಜನ, ಯಮನಾಬಾಯಿ ಅಗಸರ, ರಾಜೇಸಾಬ ಯಡ್ರಾಮಿ, ಬಸಮ್ಮ ಈಳಗೇರ, ಶ್ರೀದೇವಿ ಸಂಗಯ್ಯನಗುಡಿ, ಉಮಾಬಾಯಿ ಹತ್ತರಕಿ, ನಿಂಗಯ್ಯ ಗದ್ದಗಿಮಠ, ಗುರುರಾಜ ನೇಗಿನಾಳ, ನೂರಜಾನ ಚೌದ್ರಿ, ಗೌಡಪ್ಪಗೌಡ ಪಾಟೀಲ, ಯಲ್ಲಪ್ಪ ಬಿರಾದಾರ, ಕೆಂಚಪ್ಪ ಹಂಡ್ರಗಲ್, ಶಂಕರ ರಾಠೋಡ, ಹಸನಸಾಬ ಆಂದೇಲಿ, ಶಿವಾನಂದ ಶೆಂಬೇವಾಡ, ವಾಲು ಚವ್ಹಾಣ, ಅಶೋಕ ನಾಟಿಕಾರ, ಬಸವರಾಜ ಬಡಿಗೇರ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗಿಯಾದ್ದರು.