ಪರೋಪಕಾರ ಮೌಲ್ಯವೇ ತ್ಯಾಗಧರ್ಮ

ಪರೋಪಕಾರ ಮೌಲ್ಯವೇ ತ್ಯಾಗಧರ್ಮ The value of philanthropy is sacrifice.

ಪರೋಪಕಾರ ಮೌಲ್ಯವೇ ತ್ಯಾಗಧರ್ಮ 

ಗದಗ  05 ;ಸಾಮರ್ಥ್ಯಕ್ಕೆ ಅನುಸಾರವಾಗಿ ತನುಮನಧನದಿಂದ ಪರೋಪಕಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಅಂತರಂಗದಲ್ಲಿ ಹುದುಗಿರುವ ಕಲ್ಮಶಗಳನ್ನು ದೂರೀಕರಿಸುವುದೇ ಉತ್ತಮ ತ್ಯಾಗಧರ್ಮವಾಗಿದೆ ಎಂದು ರವಿ ಅಂಬೋಜಿ ಹೇಳಿದರು. ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ‘ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ’ ನಿಮಿತ್ತ ಬನ್ನಿಕೊಪ್ಪದ ಪಾರ್ಶ್ವನಾಥ ಬಸದಿಯಲ್ಲಿ ಹಮ್ಮಿಕೊಂಡಿದ್ದ ‘ಉತ್ತಮ ತ್ಯಾಗಧರ್ಮ’ ಕುರಿತು ಉಪನ್ಯಾಸ ಮಾಡುತ್ತ, ‘ಬಲಗೈಯಿಂದ ಕೊಡುವುದು ಎಡಗೈಗೂ ತಿಳಿಯಬಾರದು’ ಎಂಬಂತೆ ನಿಸ್ವಾರ್ಥ ಮನಸ್ಸಿನಿಂದ ದಾನಧರ್ಮದಲ್ಲಿ ನಿರತರಾದವರು ಸದಾಕಾಲ ಸಮಾಜದ ಗೌರವಕ್ಕೆ ಪಾತ್ರರಾಗಿರುತ್ತಾರೆಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಪದ್ಮರಾಜ ಹೋಳಗಿ ಅವರು ತ್ಯಾಗಧರ್ಮಕ್ಕೆ ವಿಶ್ವದ ​‍್ರ​‍್ರಥಮ ಶಾಂತಿ ಹರಿಕಾರನಾದ ಭಗವಾನ ಬಾಹುಬಲಿ ಅತ್ಯುತ್ತಮ ನಿದರ್ಶನನಾಗಿದ್ದು, ಆತನ ‘ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ, ಧ್ಯಾನದಿಂದ ಸಿದ್ಧಿ’ ಸಂದೇಶವು ಸರ್ವಪ್ರದೇಶಕ್ಕೂ, ಸರ್ವರಿಗೂ, ಸರ್ವಕಾಲಕ್ಕೂ ಪ್ರಸ್ತುತವಾಗಿದೆ ಎಂದು ಹೇಳಿದರು. ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ ಅವರು ಸ್ವಾರ್ಥ, ಅಶಾಂತಿ, ಕಲಹ, ವಂಚನೆಗಳ ಸಂಕುಚಿತ ಮನಸ್ಸುಗಳು ತ್ಯಾಗಧರ್ಮ ಮೌಲ್ಯದ ಹಿರಿಮೆ ಅರಿತರೆ ಸಮಾಜವು ಶಾಂತಿಮಯ ಸುಂದರ ತೋಟವಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಕ್ರ​‍್ಪ ಹೊಸೂರ, ಕಿರಣ ಪಿಡ್ಡಿ, ರಾಮಣ್ಣ ಜೈನರ, ವೀರಭದ್ರ​‍್ಪ ಹಂಸಿ, ವಿಜಯಕುಮಾರ ಅಣ್ಣಿಗೇರಿ, ಶಿವರುದ್ರ​‍್ಪ ಹಂಸಿ, ಗುಡಧೀರ​‍್ಪ ಹಂಸಿ, ಮಹಾವೀರ ಮಂಟಗಣಿ, ರಾಜೇಂದ್ರ ಕಬ್ಬಿಣ, ಶಾಂತಿನಾಥ ಆಲದಿ, ಯಲ್ಲಪ್ಪ ಗುಗವಾಡ, ಭರತೇಶ ಅಂಬೋಜಿ, ಸಂತೋಷ ಮಂಟಗಣಿ, ಪ್ರಶಾಂತ ಪಾಟೀಲ, ವಿಜಯಕುಮಾರ ಹಂಸಿ ಸೇರಿದಂತೆ ಸ್ಥಳೀಯ ಶ್ರಾವಕರು, ಶ್ರಾವಿಕೆಯರು ಪಾಲ್ಗೊಂಡಿದ್ದರು.