ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ‘ಏಥರ್’, ‘ಸಾಲ್ಸ್ಟಿಸ್’ ಮತ್ತು ‘ಕ್ಯಾಡೆನ್ಸ್’ ಪಠ್ಯಪುಸ್ತಕಗಳ ಲೋಕಾರೆ್ಣ
The textbooks ‘Aether’, ‘Solstice’ and ‘Cadence’ are available at the State Akkamahadevi Women’s Un
ವಿಜಯಪುರ 27: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ, ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಅವರು ಬಿಎ, ಬಿಕಾಂ ಮತ್ತು ಬಿಎಸ್‌ಸಿ ತೃತೀಯ ಹಾಗೂ ನಾಲ್ಕನೇ ಸೆಮಿಸ್ಟರ್ ಇಂಗ್ಲಿಷ್ ಪಠ್ಯಕ್ರಮಕ್ಕೆ ಸಂಬಂಧಿಸಿದ ‘ಏಥರ್’, ‘ಸಾಲ್ಸ್ಟಿಸ್’ ಮತ್ತು ‘ಕ್ಯಾಡೆನ್ಸ್’ ಪುಸ್ತಕಗಳನ್ನು ಲೋಕಾರೆ್ಣ ಮಾಡಿ, ವಿದ್ಯಾರ್ಥಿನಿಯರ ಅಧ್ಯಯನಕ್ಕೆ ಈ ಪುಸ್ತಕಗಳು ಅತ್ಯಂತ ಉಪಯುಕ್ತವಾಗಿದ್ದು, ಅವುಗಳ ಸದ್ಬಳಕೆಯಿಂದ ಶೈಕ್ಷಣಿಕ ಗುಣಮಟ್ಟ ಹೆಚ್ಚುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಇಂಗ್ಲಿಷ್ ವಿಭಾಗದ ಸಂಯೋಜಕ, ಮುಖ್ಯ ಸಂಪಾದಕ ಡಾ.ದೀಪಕ್ ಶಿಂದೆ, ‘ಏಥರ್’ ಪುಸ್ತಕದ ಸಂಪಾದಕ ಡಾ.ಬಿ.ಎಂ. ಬಡಿಗೇರ, ‘ಸಾಲ್ಸ್ಟಿಸ್’ ಪುಸ್ತಕದ ಸಂಪಾದಕ ಪ್ರೊ. ನೀತೀಶ್ ಭೂಶೆಟ್ಟಿ, ‘ಕ್ಯಾಡೆನ್ಸ್’ ಪುಸ್ತಕದ ಸಂಪಾದಕ ಪ್ರೊ.ಎಸ್.ಸಿ.ಜಕಾತಿ, ಸಂಪಾದಕ ಸದಸ್ಯ ಡಾ.ಪಿ.ಎ.ಘಂಟಿ ಹಾಗೂ ಪ್ರಕಾಶಕ ಶ್ರೀ ಸಿದ್ದಲಿಂಗೇಶ್ವರ ಪುಸ್ತಕಾಲಯ, ಕಲಬುರ್ಗಿ ಅವರುಗಳಿಗೆ ಕುಲಪತಿಗಳು ಶುಭಾಶಯ ತಿಳಿಸಿದರು. ಪುಸ್ತಕ ಲೋಕಾರೆ್ಣ ಸಂದರ್ಭದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ ಎಲ್ಲಾ ಸಂಪಾದಕರಿಗೂ ಮತ್ತು ಪ್ರಕಾಶಕರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 