ವಿಶ್ವದಲ್ಲೇ ಭಾರತೀಯ ಸಂಸ್ಕೃತಿ-ಸಂಸ್ಕಾರ ಶ್ರೇಷ್ಠತೆ

ವಿಶ್ವದಲ್ಲೇ ಭಾರತೀಯ ಸಂಸ್ಕೃತಿ-ಸಂಸ್ಕಾರ ಶ್ರೇಷ್ಠತೆ The superiority of Indian culture and tradition in the world

ವಿಶ್ವದಲ್ಲೇ ಭಾರತೀಯ ಸಂಸ್ಕೃತಿ-ಸಂಸ್ಕಾರ ಶ್ರೇಷ್ಠತೆ

ಚಡಚಣ, 11 : ವಿಶ್ವದಲ್ಲೇ ಭಾರತೀಯ ಸಂಸ್ಕೃತಿ-ಸಂಸ್ಕಾರ ಶ್ರೇಷ್ಠತೆಯನ್ನು ಹೊಂದಿದೆ” ಎಂದು ನಾಗಠಾಣ ಶಾಸಕ ವಿಠಲ ಕಟಕದೊಂಡ ಹೇಳಿದರು.ತಾಲೂಕಿನ ಇಂಚಗೇರಿ ಮಹಾವೀರನಗರ ತಾಂಡಾ 1ರಲ್ಲಿ ವಿಠ್ಠಲ ರುಕ್ಮಿಣಿ ದ್ವಿತೀಯ ಸಪ್ತಾಹ , ಗುಡಿ ಕಟ್ಟಡದ ಭೂಮಿ ಪೂಜೆ(ಶಂಕು ಸ್ಥಾಪನೆ) ಹಾಗೂ ಧರ್ಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. 

  ದೇವಸ್ಥಾನಗಳು ಶ್ರದ್ಧಾ, ಭಕ್ತಿ, ಭಾವಗಳನ್ನು ಮೂಡಿಸಿ ಸನ್ಮಾರ್ಗದೆಡೆಗೆ ಕೊಂಡೊಯ್ಯುವ ತಾಣ ಗಳಾಗಿವೆ” ಎಂದ ಅವರು, ವಿಠ್ಠಲ ರುಕ್ಮಿಣಿ ನೂತನ ಮಂದಿರ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡುವುದಾಗಿ ಹೇಳಿದ ಅವರು, ತಿಡಗುಂಡಿ ಕನ್ನೂರ ಇಂಚಗೇರಿ ಚಡಚಣ ರಸ್ತೆ ಸುಧಾರಣೆಗೆ ರೂ .2ಕೋಟಿ ವೆಚ್ಚದಲ್ಲಿ ದುರಸ್ಥಿಗೆ ಕ್ರಮ ಕೈಗೊಳ್ಳಲಾಗುವುದು. ನಾಗಠಾಣ ಮತಕ್ಷೇತ್ರದ ಸುಮಾರು 21ಸಾವಿರ ಎಕರೆ ಪ್ರದೇಶ ನೀರಾವರಿಯಿಂದ ವಂಚಿತಾವಾಗುತ್ತಿದೆ ಅದಕ್ಕಾಗಿ ನಾನು ನಾಗಠಾಣ ಮತಕ್ಷೇತ್ರದ ಸಮಗ್ರ ನೀರಾವರಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಒಂದು ವೇಳೆ, ನೀರಾವರಿಗೆ ಸ್ಪಂದನೆ ಸಿಗದಿದ್ದರೇ, ಹೋರಾಟಕ್ಕೆ ಬೀದಿಗೆ ಇಳಿಯಲು ಹಿಂಜರಿಯುವುಲ್ಲ ಎಂದರು.     ಸಾನಿದ್ಯ ವಹಿಸಿದ್ದ ಚಿಕ್ಕರೂಗಿ ವಿರೇಶ ಶಾಸ್ತ್ರಿಜಿ ಮಾತನಾಡಿ, ”ದೇಶದಲ್ಲೇ ಅತ್ಯಂತ ಹೆಚ್ಚು ಭಕ್ತರನ್ನು ಹೊಂದಿರುವ ಶ್ರೀಮಂತ ದೇವರು ಎನಿಸಿಕೊಂಡ ತಿರುಪತಿ ತಿಮ್ಮಪ್ಪ, ನಂತರ ಎರಡನೇ ಸ್ಥಾನದಲ್ಲಿ ವಿಠಲ ರುಕ್ಮಿಣಿಯ ಪಂಢರಪುರದ ಕ್ಷೇತ್ರವಾಗಿದೆ ಎಂದವರು ದೇವಸ್ಥಾನಗಳು ಶಾಂತಿ, ಸಮಾಧಾನ ಹಾಗೂ ಸನ್ಮಾರ್ಗ ತೋರುವ ತಾಣಗಳಾಗಿವೆ. ಇಲ್ಲಿ ನಡೆಯುವ ಆಧ್ಯಾತ್ಮ ಚಿಂತನ -ಮಂಥನ ಮತ್ತುಧಾರ್ಮಿಕ ಕಾರ್ಯಕ್ರಮಗಳು ಸುಂದರ ಜೀವನ ಕಡೆ ಒಯ್ಯಲಿವೆ ಎಂದರು. 

ಕನ್ನೂರ ಸಂಗಮೇಶ್ವರ ಮಹಾರಾಜ, ಸಾನಿದ್ಯ ವಹಿಸಿದ್ದ ಮಾತನಾಡಿದರು.ಕಾರ್ಯಕ್ರಮದಲ್ಲಿ ಮಹಾದೇವ ಸಾಹುಕಾರ ಭೈರಗೊಂಡ, ಸಾಹೇಬಗೌಡ ಬಿರಾದಾರ ಸಂತೋಷ ಪಾಟೀಲ ರವಿ ಚವ್ಹಾಣ ಧರ್ಮ. ಪೂಜಾರಿ ರಾಜು ಜಾಧವ, ಚಿಕ್ಕರೂಗಿಯ ವಿರೇಶ ಶ್ರೀ, ಭಟ್ಕಳ ಪಿಎಸ್ ಐ ಸೋಮರಾಜ, ರಾಠೋಡ, ಭೀಮುಗೌಡ ಬಿರಾದಾರ, ಜಿ ಎಸ್‌.ಪವಾರ, ಎಂ ಆರ್‌. ಪಾಟೀಲ, ಡಿ ಎಲ್‌. ಚವ್ಹಾಣ, ರವಿದಾಸ ಜಾಧವ, ಬಾಬು ಚವ್ಹಾಣ, ಮಲ್ಲಣ್ಣ ಸಕ್ರಿ, ನೀಲಪ್ಪ ಗೌಡ ಬಿರಾದಾರ ಗ್ರಾ.ಪಂ ಉಪಾಧ್ಯಕ್ಷ ಮಾಳಪ್ಪ ಬಿರಾದಾರ್ ಪಿಡಿಒ ವಿಶ್ವನಾಥ ರಾಥೋಡ ಎಲ್ಲ ಸದಸ್ಯರು ಮತ್ತ ಗ್ರಾಮಸ್ಥರು ಭಾಗವಹಿಸಿದ್ದರು.