ಲೋಕದರ್ಶನ ವರದಿ
ದಾಂಡೇಲಿ 13: ಸ್ವಾಮಿ ವಿವೇಕಾನಂದ ಹಾಗೂ ರಾಜಮಾತಾ ಜೀಜಾಬಾಯಿ ಜನ್ಮದಿನ ಪ್ರಯುಕ್ತ ನಗರದ ಸೋಮಾನಿ ವೃತ್ತದಲ್ಲಿ ಅಶ್ವಾರೂಢ ಛತ್ರಪತಿ ಶಿವಾಜಿ ಮಹಾರಾಜರ ವಿಗ್ರಹ ಪ್ರತಿಷ್ಟಾಪನೆ ಮಹೋತ್ಸವವು ಸಕಲ ಜಯಘೋಷಗಳೊಂದಿಗೆ ಸಡಗರ ಸಂಬ್ರಮದಿಂದ ಜರುಗಿತು
ಶನಿವಾರ ಮಧ್ಹಾನ ಸಂಜೆ 4 ಘಂಟೆಗೆ ಮರಾಠಾ ಮಂಗಲ ಕಾಯರ್ಾಲಯದಿಂದ ಶಿವಾಜಿ ಮಹಾರಾಜರ ವಿಗ್ರಹದ ಮೆರವಣಿಗೆಗೆ ಮರಾಠಾ ಅಮಾಜದ ಅಧ್ಯಕ್ಷ ಡಾ, ಮೋಹನ ಪಾಟೀಲ ಖಢ್ಗದಾರಿಯಾಗಿ ಚಾಲನೆ ನೀಡಿದರು. ಅಧ್ಧೂರಿಯ ಮೆರೆವಣಿಗೆ ಆರಂಬದಲ್ಲಿ ವಾಧ್ಯಗಳ ಮುಖಾಂತರ ಮೆರಗು ತುಂಬುತ್ತಿದ್ದಂತೆ "ಡಿಜೆ" ಅಬ್ಬರದ ಸಂಗೀತವು ನೆರದಿದ್ದ ನೂರಾರು ಜನರಲ್ಲಿ ವಿಗ್ರಹ ಪ್ರತಿಷ್ಠಾಪನ ಕಿಚ್ಚು ಇಮ್ಮಡಿಗೊಳಿಸಿತು.
ವಿಗ್ರಹ ಮೆರವಣಿಗೆಯು ಮುಖ್ಯ ರಸ್ತೆಗೆ ಬರುತ್ತಿದ್ದಂತೆ ನೆರದಿದ್ದ ಜನಸ್ತೋಮ ಸಂಗೀತಕ್ಕೆ ತಕ್ಕಂತೆ ನೃತ್ತಕ್ಕೆ ತಲ್ಲೀನರಾಗಿ ಕೇಸರಿ ಪೇಟಾದೊಂದಿಗೆ ದಾರಿಯುದ್ದಕ್ಕೂ ವಿಜೃಂಭಿಸಿದರು. ಸಮಯ ಕಳೆದಂತೆ ಮಹೀಳಾ ವಾದ್ಯ ವೃಂದದೊಂದಿಗೆ ಯುವತಿಯರು ಸಹ ಸಾಮೂಹಿಕ ನೃತ್ತದಲ್ಲಿ ಶಿವಾಜಿ ಮಹಾರಾಜರ ವಿಗ್ರಹ ಮೆರವಣಿಗೆಗೆ ರಂಗು ತುಂಬಿದರು. ಸಂಜೆಯಾಗುತ್ತಿದ್ದಂತೆ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಯುವಕ ಯುವತಿಯರು ಮಾರ್ಗದುದ್ದಕ್ಕೂ "ಜೈ ಶವಾಜಿ ಜೈ ಭವಾನಿ" ಘೋಷವಾಕ್ಯವನ್ನು ಕೂಗತೊಡಗಿದರು ಅಷ್ಟರಲ್ಲಾಗಲೇ ಮುಖ್ಯ ರಸ್ತೆಯು ಸಂಪೂರ್ಣವಾಗಿ ಕೇಸರಿಕರಣವಾದಂತೆ ಕಂಡಿತು. ಮಾರ್ಗದ ಮದ್ಯ ಮದ್ಯದಲ್ಲಿ ಸಿಡಿ ಮದ್ದುಗಳನ್ನು ಸಿಡಿಸಿ ಸಂಭ್ರಮಿಸಲಾಯಿತು. ದಣಿವರಿಯದೆ ಸುಮಾರು 7 ಘಂಟೆಗಳ ಕಾಲ ನಗರದ ಪ್ರಮುಖ ಮಾರ್ಗದ ಮೆರವಣಿಗೆಯಲ್ಲಿ ಬಾಗಿಯಾದ ಶಿವಾಜಿ ಮಹಾರಾಜರ ಅಭಿಮಾನಿಗಳು ಅದ್ದೂರಿಯ ಶೋಭಾಯಾತ್ರೆಗೆ ಸಾಕ್ಷಿಯಾದರು.
ವಿಗ್ರಹ ಮೆರವಣಿಗೆಯು ವಿಗ್ರಹ ಪ್ರತಿಷ್ಟಾಪನಾ ಸ್ಥಳಕ್ಕೆ ತಲುಪಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ನೆರದಿದ್ದ ಸಾವಿರಕ್ಕೂ ಹೆಚ್ಚು ಶಿವಾಜಿ ಬಕ್ತರನ್ನು ಉದ್ದೇಶಿಸಿ ಮಾತನಾಡಿದ ವಿದಾನ ಪರಿಷತ್ ಸದಸ್ಯ ಶ್ರೀಕಾಂತ ಎಲ್ ಘೋಟ್ನೇಕರ ಇಂದು ನನ್ನ ಪಾಲಿಗೆ ಅತ್ಯಂತ ಸಂತಸದ ದಿನ ಸಾಕಷ್ಟು ವಿರೋಧದ ನಡುವೆ ಕಾನೂನಿನ ಅಡಿಯಲ್ಲಿ ನ್ಯಾಯಯುತವಾಗಿ ಶಿವಾಜಿ ವಿಗ್ರಹವನ್ನು ಪ್ರತಿಷ್ಟಾಪಿಸಲು ಸಂತಸವೆನುಸುತ್ತಿದೆ. ಶಿವಾಜಿ ಮಹಾರಾಜರ ಪ್ರತಿಮೆಯನ್ನು ದಾಂಡೇಲಿ ಹಾಗೂ ಹಳಿಯಾಳದಲ್ಲಿ ತಂದಿದ್ದು ನಾನೇ ಅದಕ್ಕೆ ನನಗೆ ಹೆಮ್ಮೆ ಇದೆ ಶಿವಾಜಿ ಮಹಾರಾಜ ಭಾರತದ ಅತ್ಯಂತ ಪರಾಕ್ರಮಿ ರಾಜನಾಗಿದ್ದ ಬ್ರಿಟಿಷ್ ರಾಜರೊಬ್ಬರು ಹೇಳಿದಂತೆ ಶಿವಾಜಿ ಇಂಗ್ಲೆಂಡಿನಲ್ಲಿ ಜನಿಸಿದ್ದರೆ ನಾವು ಇಡೀ ಪ್ರಪಂಚವನ್ನೇ ಗೆಲ್ಲುತ್ತಿದ್ದೇವು ಹಾಗೆಯೇ ಮತ್ತೊಬ್ಬ ಬ್ರಿಟಿಷ್ ರಾಜನ ಹೇಳಿಕೆಯಂತೆ ಇನ್ನು ಹತ್ತು ವರ್ಷ ಶಿವಾಜಿ ಮಹಾರಾಜರು ಬದುಕಿದ್ದರೆ ಬ್ರಿಟಿಷರು ಭಾರತಕ್ಕೆ ಕಾಲಿಡಲು ಸಾಧ್ಯವಿರಲಿಲ್ಲ. ಎಂದು ಸ್ಮರಿಸಿದರು. ದಾಂಡೇಲಿಯಲ್ಲಿ ಒಟ್ಟು ಏಳು ವಿಘ್ರಹಗಳನ್ನು ಪ್ರತಿಷ್ಠಾಪಿಸಲು ಅನುಮತಿ ಪಡೆಯಲಾಗಿದೆ ನಿಜವಾಗಿಯೂ ನಾವು ಭಾಗ್ಯಶಾಲಿಗಳು ಹಂತ ಹಂತವಾಗಿ ಎಲ್ಲಾ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು. ವಿಗ್ರಹ ಪ್ರತಿಷ್ಟಾಪನೆಯ ಮುಖ್ಯ ಉಧ್ದೇಶ ನಮ್ಮ ಈಗಿನ ಮಕ್ಕಳು ಮಹಾಪುರುಷರ ವಿಗ್ರಹಗಳನ್ನು ಕಣ್ಣಾರೆ ಕಂಡು ಇವರ ಮಹಾನ್ ಸಾಧನೆಗಳನ್ನು ಗಮನಿಸಿ ಹಾಗೂ ಅವರ ಆದರ್ಶಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೋಳ್ಳಲು ಸಹಾಯಕಾರಿಯಾಗಬಹುದೆಂದು ಘೋಟ್ನೇಕರ ಹೇಳಿದರು ಆನಂತರ ರಾತ್ರಿ 11.30 ಕ್ಕೆ ಶಿವಾಜಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.
ಬೆಳಗಾವಿಯಿಂದ ಕುಮಾರಿ ಶುಭಾಂಗಿ ಡ್ಯುಟೆ, ಕ್ಯಾಸರಲಾಕ ನಿಂದ ಶಿವಾಜಿ ಢೋಲ್ ಪಾಥಕ್ ವಿಗ್ರಹ ಪ್ರತಿಷ್ಠಾಪನೆಗೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಮೂತರ್ಿ ಪ್ರತಿಷ್ಠಾಪನಾ ಸಮಿತಿ ಪದಾದಿಕಾರಿಗಳಾದ ಅಧ್ಯಕ್ಷ ವಿಶ್ವನಾಥ ಜಾದವ, ಉಪಾಧ್ಯಕ್ಷ ರವಿ ಸುತಾರ, ಕಾರ್ಯದಶರ್ಿ ಚಂದನ ಮೋರೆ, ಸಂದೀಪ ಸಾರ್ಲಾನಿ, ವಿಠ್ಠಲ ಬೈಲೂಕರ, ರಾಮಲಿಂಗ ಜಾಧವ, ಶ್ರೀನಾಥ ಮಿರಾಶಿ, ಕೃಷ್ಣಾ ಗಾವಡೆ, ಸಂತೋಷ ತಾಮಡಾ, ಮತ್ತು ಗಾಂಧಿನಗರ ಯುವಕ ಮಂಡಳ ಕ್ಷತ್ರಿಯ ಮರಾಠ ಸಮಾಜ ದಾಂಡೇಲಿ, ಜೀಜಾಮಾತಾ ಸಮಿತಿ ದಾಂಡೇಲಿ ಮುಂತಾದವರು ಶ್ರಮಿಸಿದರು.