ಮೂಡಲಗಿ 01: ಅಡಿಪಾಯ ಗಟ್ಟಿಯಾಗಿದ್ದರೆ ಮಾತ್ರ ಮಜಬೂತಾದ ಮನೆ ನಿಮರ್ಾಣ, ಬೇರು ಗಟ್ಟಿಯಾಗಿದ್ದರೆ ಮಾತ್ರ ಮರದ ಅಳಿವೂ, ಉಳಿವೂ ಎನ್ನುವಂತೆ ಒಂದು ಮಗುವೂ ಪೂರ್ವ ಪ್ರಾಥಮಿಕ ಹಂತದಲ್ಲಿಯೇ ತನ್ನ ಕಲಿಕೆಯನ್ನು ಉತ್ತಮವಾಗಿ ಪೂರೈಸಿದರೆ ಮಾತ್ರ ಅದರ ಭವಿಷ್ಯ ಮುಂಬರುವ ದಿನಗಳಲ್ಲಿ ಸುಂದರವಾಗುವುದು. ಆದರೆ ಪಟ್ಟಣದಲ್ಲಿರುವ ಕೆಲವು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳ ಕೊರತೆಯಿಂದ ನಲುಗಿ ಹೋಗಿದೆ. ಅದರಲ್ಲಿಯೂ ಸುಸ್ಥಿತಿಯಿಲ್ಲದೇ ಮರದ ಕೆಳಗಡೆ ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಾ ಮಕ್ಕಳ ಮುಗ್ಧ ಮನಸ್ಸುಗಳನ್ನು ಆಕಷರ್ಿಸುವಲ್ಲಿ ವಿಫಲಗೊಂಡಿದೆ.
ಇದು ಪಟ್ಟಣದ ವಿದ್ಯಾನಗರದಲ್ಲಿರುವ 403 ಕೇಂದ್ರ ಸಂಖ್ಯೆಯ ಅಂಗನವಾಡಿ ಕೇಂದ್ರದ ಮಕ್ಕಳ ಗೋಳು. ಈ ಅಂಗನವಾಡಿ ಕೇಂದ್ರವೂ ಹಲವೂ ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಈಗ ಕಟ್ಟಡದ ಮಾಲಿಕರು ಬಾಡಿಗೆಯ ನೆಪವೊಡ್ಡಿ ತಮ್ಮ ಕಟ್ಟಡದಿಂದ ಬಿಡಿಸಿದ್ದಾರೆ. ಇದರಿಂದ ದಾರಿ ತೋಚದ ಅಂಗನವಾಡಿ ಕಾರ್ಯಕತರ್ೆ ಮಕ್ಕಳನ್ನು ಮರದ ಕೆಳಗೆ ಕುಳ್ಳಿರಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಇಲ್ಲಿ ಮಕ್ಕಳಿಗೆ ಆಟವಾಡಲು ಮತ್ತು ಕುಳಿತುಕೊಳ್ಳುವುದಕ್ಕೂ ಅನುಕೂಲಕರ ವ್ಯವಸ್ಥೆ ಇಲ್ಲವಾಗಿದ್ದು, ಹಾವು ಚೇಳುಗಳ ಭಯದಲ್ಲಿ ಮಕ್ಕಳು ಕಾಲ ಕಳೆಯುತ್ತಿರುವುದು ಪೋಷಕರ ಅಕ್ರೋಶಕ್ಕೆ ಕಾರಣವಾಗಿದೆ.
ಸಕರ್ಾರವೂ ಶಿಶು ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದರೂ ಯಾವೂದೇ ರೀತಿಯ ಪ್ರಯೋಜನವಾಗಿಲ್ಲ. ಆಟ, ಊಟದೊಂದಿಗೆ ಮಕ್ಕಳನ್ನು ಸೆಳೆಯಬೇಕಾಗಿರುವ ಅಂಗನವಾಡಿ ಕೇಂದ್ರಗಳ ದಯನೀಯ ಸ್ಥಿತಿ ಕಂಡು ಪೋಷಕರು ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲೂ ಹಿಂದೇಟು ಹಾಕುತ್ತಿದ್ದಾರೆ. ಇದುವರೆಗೂ ಸ್ವಂತ ಕಟ್ಟಡ ನಿಮರ್ಿಸಿ ಕೊಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು ಇನ್ನಾದರೂ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತ ಎಚ್ಚೆತ್ತು ಮಕ್ಕಳಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಬೇಕೆನ್ನುವುದು ಪೋಷಕರ ಹಾಗೂ ಸಾರ್ವಜನಿಕರ ಆಗ್ರಹವಾಗಿದೆ.
ಬಾಕ್ಸ್ ನ್ಯೂಸ್ 1: ಪಟ್ಟಣದ 403 ಕೇಂದ್ರ ಸಂಖ್ಯೆಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದೇನೆ. ಅಲ್ಲಿನ ಪ್ರಮುಖರೊಂದಿಗೆ ಚಚರ್ಿಸಿ ವ್ಯವಸ್ಥಿತ ಕಟ್ಟಡವನ್ನು ಬಾಡಿಗೆ ರೂಪದಲ್ಲಿ ಪಡೆದು ಮಕ್ಕಳಿಗೆ ಒದಗಿಸಲಾಗಿದೆ. ಸಂಬಂಧಪಟ್ಟವರ ಗಮನಕ್ಕೆ ತಂದು ಸ್ವಂತ ಕಟ್ಟಡವನ್ನು ಶೀಘ್ರದಲ್ಲಿಯೇ ಕಲ್ಪಿಸಲಾಗುವುದು.
ವಾಯ್.ಎಮ್. ಗುಜನಟ್ಟಿ ಸಿಡಿಪಿಒ ಅರಬಾಂವಿ
ಬಾಕ್ಸ್ ನ್ಯೂಸ್ 2: ಶಿಶು ಅಭಿವೃದ್ಧಿ ಅಧಿಕಾರಿಯವರು ಅಂಗನವಾಡಿ ಕೇಂದ್ರಗಳ ಬಗ್ಗೆ ನಮ್ಮ ಗಮನಕ್ಕೆ ತಂದರೆ ಚಚರ್ಿಸಿ ಸೂಕ್ತ ಸ್ಥಳವಕಾಶ ಕಲ್ಪಿಸಿಕೊಡಲಾಗುವುದು.
ಜಿ.ಆರ್ ಪೂಜೇರಿ. ಮುಖ್ಯಾಧಿಕಾರಿ ಪುರಸಭೆ ಮೂಡಲಗಿ.