ಸೌಂದರ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯವಾದುದು: ಸಿ. ಬಿ. ಬಾಳಿ

ಸೌಂದರ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯವಾದುದು: ಸಿ. ಬಿ. ಬಾಳಿ The service of civic workers in maintaining beauty is unique: C. B. Bali

ಸೌಂದರ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯವಾದುದು: ಸಿ. ಬಿ. ಬಾಳಿ 

ಯರಗಟ್ಟಿ, 24 : ಸಮೀಪದ ಮುನವಳ್ಳಿ ಪಟ್ಟಣದ ಸೌಂದರ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯವಾದುದು, ಮಳೆ, ಬಿಸಿಲು, ಚಳಿ ಎನ್ನದೆ ತಮ್ಮ ದಿನ ನಿತ್ಯದ ಸ್ವಚ್ಛತಾ ಸೇವೆಯಲ್ಲಿ ತೊಡಗಿಕೊಂಡಿರುತ್ತಾರೆ. ಪೌರ ಕಾರ್ಮಿಕರು ವ್ಯಸನಗಳಿಗೆ ಅಂಟಿಕೊಳ್ಳದೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಪೌರಕಾರ್ಮಿಕರಿಗೆ ರಿಗೆ ಎಷ್ಟು ಗೌರವಿಸಿದರೂ ಕಡಿಮೆ, ಸಾರ್ವಜನಿಕರು ಅವರಿಗೆ ಸಹಕಾರ ನೀಡಬೇಕು. ಪೌರಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣದ ಕಡೆಗೆ ವಿಶೇಷ ಗಮನ ನೀಡಬೇಕೆಂದು ಪುರಸಭೆ ಅಧ್ಯಕ್ಷ ಸಿ. ಬಿ. ಬಾಳಿ ಹೇಳಿದರು.  

ಅವರು ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.  

ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ ಮಾತನಾಡಿ ಸರಕಾರವು ಪೌರ ಕಾರ್ಮಿಕ ಕಾರ್ಯವನ್ನು ಗುರುತಿಸಿ, ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಉದ್ದೇಶದಿಂದ ಕಳೆದ 14 ವರ್ಷಗಳಿಂದ ಪೌರಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ. ಖಾಯಂಗೊಂಡ ನೌಕರರಿಗೆ ವಿಶೇಷ ಭತ್ಯೆ ನೀಡುವುದು, ಮನರಂಜನೆಯ ಆಟಗಳನ್ನು ಆಡಿಸಿ ಬಹುಮಾನ ವಿತರಿಸುವುದು ಇಂಥ ಹಲವಾರು ಕಾರ್ಯಕ್ರಮಗಳನ್ನು ಇಂದು ಆಯೋಜಿಸಲಾಗಿದೆ ಎಂದರು. 

ಪುರಸಭೆಯ ಉಪಾಧ್ಯಕ್ಷೆ ಕೆ.ಎಚ್‌.ಹಿರೇಮೇತ್ರಿ, ಕಂದಾಯ ಅಧಿಕಾರಿ ಅನಿಲಕುಮಾರ ಗಿಡ್ನಂದಿ, ಪುರಸಭೆಯ ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರು ಇದ್ದರು.  

ಉತ್ತಮ ಕೆಲಸ ನಿರ್ವಹಿಸಿದ ಪೌರಕಾರ್ಮಿಕರಿಗೆ ಸನ್ಮಾನ, ಮನರಂಜನಾ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಧುಮತಿ ಕೌಜಲಗಿ ನಿರೂಪಿಸಿದರು. ಪೂಜಾ ದೊಡಮನಿ ಸ್ವಾಗತಿಸಿದರು. ಸರಸ್ವತಿ ದಳವಾಯಿ ವಂದಿಸಿದರು.