ಶ್ರೀಗಳು ಪ್ರವಚನ ನೀಡಿ ಭಕ್ತರಿಗೆ ಸನ್ಮಾರ್ಗದಲ್ಲಿ ಜೀವನ ಸಾಗಿಸಲು ಧರ್ಮದ ಆಚಾರ ವಿಚಾರಗಳನ್ನು ಭೋಧಿಸಿದ್ದಾರೆ : ಸುರೇಶ ಹೊರಕೇರಿ

  ಶ್ರೀಗಳು ಪ್ರವಚನ ನೀಡಿ ಭಕ್ತರಿಗೆ ಸನ್ಮಾರ್ಗದಲ್ಲಿ ಜೀವನ ಸಾಗಿಸಲು ಧರ್ಮದ ಆಚಾರ ವಿಚಾರಗಳನ್ನು ಭೋಧಿಸಿದ್ದಾರೆ :  ಸುರೇಶ ಹೊರಕೇರಿ The sage gave a sermon and taught the devotees the principles of religion to lead a righteous life:

                      ಹುಬ್ಬಳ್ಳಿ 20: ಕಾರ್ತಿಕ ಮಾಸದ ಶುಭ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಯಮಕನ ಮರಡಿಯ ಹುಣಸಿಕೊಳ್ಳಮಠ,   ಜಗದ್ದುರು ಶೂನ್ಯಸಂಪಾದನ ಪೀಠದ ಪರಮ ಪೂಜ್ಯ ಸಿದ್ಧಬಸವ ದೇವರು ಅವರನ್ನು ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ,  ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರು ಭೇಟಿ ಮಾಡಿ  ಗೌರವ ಪೂರ್ವಕವಾಗಿ ಶ್ರದ್ಧಾ ಭಕ್ತಿಯಿಂದ ನಮನಗಳನ್ನು ಸಲ್ಲಿಸಿದರು. ಭಕ್ತಿಯಿಂದ ಶ್ರೀಗಳ ದರ್ಶನ ಆಶೀರ್ವಾದ ಪಡೆದರು. ಸುಜಯ ಸುರೇಶ ಹೊರಕೇರಿ ಸೋಹನ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕರ್ಯಚದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಕೆ.ಎಸ್‌.ಇನಾಮತಿ, ಮುಂತಾದವರು ಇದ್ದರು.  

                   ಬೆಳಗಾವಿ ಜಿಲ್ಲೆಯ ಯಮಕನ ಮರಡಿಯ ಹುಣಸಿಕೊಳ್ಳಮಠ,   ಜಗದ್ದುರು ಶೂನ್ಯಸಂಪಾದನ ಪೀಠದ ಪರಮ ಪೂಜ್ಯ ಸಿದ್ಧಬಸವ ದೇವರು ಮೂಲತಃ  ಬೆಳಗಾವಿ ಜಿಲ್ಲೆ ಹುಕ್ಕೇರಿ ಬೋರಗಲ್ಲ ಗ್ರಾಮದವರು. ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಧಾರವಾಡದಲ್ಲಿ ಉನ್ನತ ಶಿಕ್ಷಣ ಪಡೆದ ನಂತರ  ಹುಕ್ಕೇರಿ ತಾಲೂಕಿನ   ಹೆಬ್ಬಾಳ ಗ್ರಾಮದ ಬಸವಭವನದಲ್ಲಿ   ನಾಲ್ಕು ವರ್ಷ ಧರ್ಮೋಪದೇಶ ಮಾಡಿ   ಹನ್ನೇರಡು ಸಾವಿರಕ್ಕೂ ಹೆಚ್ಚು  ಲಿಂಗ ದೀಕ್ಷೆ   ಹಾಗೂ  ಇಪ್ಪತೈದು ಸಾವಿರಕ್ಕೂ ಹೆಚ್ಚು  ರುದ್ರಾಕ್ಷಿ ದೀಕ್ಷೆ ಭಕ್ತರಿಗೆ ನೀಡಿ ಧರ್ಮ ಸಂಚಲನ ಮೂಡಿಸಿದ್ದಾರೆ. ಪ್ರವಚನ ದಯಪಾಲಿಸಿದ ಸಂದರ್ಭದಲ್ಲಿ ಭಕ್ತರು ನೀಡಿದ ದೇಣಿಗೆಯನ್ನು 50 ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ದಾಸೋಹ ಮಾಡಿದ್ದಾರೆ. ಶ್ರೀಗಳು ಪ್ರವಚನದಿಂದ ಬಂದ ದೇಣಿಗೆಯನ್ನು ತಮ್ಮ ಸಹಪಾಠಿಗಳ ವಿದ್ಯಾಭ್ಯಾಸದ ಸಲುವಾಗಿ ಉಪಯೋಗಿಸಿದ್ದಾರೆ.

               ಈಗಾಗಲೇ 250ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರವಚನ ನೀಡಿ ಭಕ್ತರಿಗೆ ಸನ್ಮಾರ್ಗದಲ್ಲಿ ಜೀವನ ಸಾಗಿಸಲು ಧರ್ಮದ ಆಚಾರ ವಿಚಾರಗಳನ್ನು ಭೋದಿಸಿದ್ದಾರೆ. 23 ಅನಾಥ ಹಾಗೂ ಬಡ ಮಕ್ಕಳಿಗೆ ಆಶ್ರಯ ನೀಡಿ ಅನ್ನ ಅಕ್ಷರ ದಾಸೋಹ  ನೀಡುವಲ್ಲಿ ನಿರತರಾಗಿದ್ದಾರೆ.  ಗಟ್ಟಿ ಧ್ವನಿ ನೇರ ಮಾತು  ವೈಚಾರಿಕ ನೆಲೆಗಟ್ಟು ನೀಳವಾದಶರೀರ,ಆಳವಾದ ಅಧ್ಯಯನ,  ಮಠಕ್ಕಾದರೂ  ಮಠದಲ್ಲಿ  ಇರಲಾರದಷ್ಟು ಕಾರ್ಯಕ್ರಮಗಳು. ಇವರ ಕಾರ್ಯಧ್ಯಕ್ಷತೆ   ಕಂಡ ಭಕ್ತರು  ಯಮಕ್ಕನಮರಡಿ    ಜಗದ್ಗುರು ಶೂನ್ಯ ಸಂಪಾದನ ಹುಣಸಿಕೊಳ್ಳಮಠಕ್ಕೆ  ಸಮರ್ಥ ಯತಿಗಳೆಂದು  ಮನಗಂಡು   ಮಠದ 21ನೆಯ   ಜಗದ್ಗುರುಗಳಾಗಿ  ಪೀಠ ಅರಸಿ ಬಂದದ್ದು  ಹೆಮ್ಮೆಯ ವಿಷಯ.