ಸಮಾಜದ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರ ಬಹುಮುಖ್ಯ : ಶಾರದಾ ಫಾನಘಂಟಿ
The role of journalists is very important in the development of society: Sharada Phanaghanti
ಸಮಾಜದ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರ ಬಹುಮುಖ್ಯ : ಶಾರದಾ ಫಾನಘಂಟಿ
ಕೊಪ್ಪಳ- ಆಗಸ್ಟ್ 06 ಸಮಾಜದ ಅಂಕು ಡೊಂಕುಗಳು ತಿದ್ದುವ ಮೂಲಕ ಸಮಾಜದ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರ ಮತ್ತು ಜನರ ನಡುವೆ ಪತ್ರಿಕೆ ಹಾಗೂ ಪತ್ರಕರ್ತರು ಸೇತುವೆಯಾಗಿ ಕೆಲಸ ಮಾಡುತ್ತಿದ್ದು ಸಮಾಜದ ಸಮಗ್ರ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರ ಬಹುಮುಖ್ಯವಾಗಿದೆ ಎಂದು ಫಾನಘಂಟಿ ಫೌಂಡೇಶನ್ ನ ಅಧ್ಯಕ್ಷರಾದ ಶಾರದಾ ಫಾನಘಂಟಿ ಅಭಿಪ್ರಾಯ ಪಟ್ಟರುಅವರು ನಗರದ ಸಮೀಪದ ಭಾಗ್ಯನರದ ವಿದ್ಯಾವಿಕಾಸ್ ಶಾಲೆಯ ಸಭಾಭವನದಲ್ಲಿ ಫಾನಘಂಟಿ ಫೌಂಡೇಶನ್ ಮತ್ತು ವಾಸವಿ ಕ್ಲಬ್ ವತಿಯಿಂದ ಏರಿ್ಡಸಿದ ಪತ್ರಿಕಾ ದಿನಾಚರಣೆ ಮತ್ತು ಹಿರಿಯ ಪತ್ರಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರುಮುಂದುವರೆದು ಮಾತನಾಡಿ ಪತ್ರಕರ್ತರು ಪ್ರತಿಭೆಗಳಿಗೆ ವೇದಿಕೆ ಯನ್ನು ಒದಗಿಸುವದರ ಜೊತೆಗೆ ಪ್ರೋತ್ಸಾಹ ನೀಡುತ್ತಾರೆ ಸಮಾಜದ ಸಮಗ್ರ ಅಭಿವೃದ್ಧಿ ಯಲ್ಲಿ ಪತ್ರಕರ್ತರ ಪಾತ್ರ ಮಹತ್ವ ದಾಗಿದೆ ಎಂದು ಫಾನಘಂಟಿ ಫೌಂಡೇಶನ ನ ಅಧ್ಯಕ್ಷರಾದ ಶಾರದಾ ಫಾನಘಂಟಿ ಹೇಳಿದರುಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಹಿರಿಯ ಪತ್ರಕರ್ತರೆಲ್ಲರೂ ಉದ್ಘಾಟಿಸಿದರು. ಇದೇ ವೇಳೆ ಮಾತಾನಾಡಿದ ಪತ್ರಕರ್ತರಾದ ಸಾಧಿಕ್ ಅಲಿ ಅವರು ಪತ್ರಕರ್ತರು ವಿಷಯವನ್ನು ಬರೀ ಸುದ್ದಿಯನ್ನಾಗಿ ನೋಡದೆ ಸಮಾಜದ ಅಭಿವೃದ್ಧಿ ಬಗ್ಗೆಯೂ ಚಿಂತಿಸಬೇಕಾಗುತ್ತದೆ. ಪತ್ರಕರ್ತರು ನಿರ್ಣಾಯಕರಲ್ಲ,ಓದುಗರೇ ನಿರ್ಣಾಯಕರು. ವಿದ್ಯಾರ್ಥಿಗಳು ಕೂಡ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಪತ್ರಿಕೆಯನ್ನು ಓದುವ ಹವ್ಯಾಸ ರೂಪಿಸಿಕೊಳ್ಳಿ ಎಂದರು.ಪತ್ರಕರ್ತರಾದ ಸೋಮರಡ್ಡಿ ಅಳವಂಡಿ ಮಾತನಾಡಿ ಸಮಾಜದ ಅಭಿವೃದ್ಧಿಯ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಪ್ರತಿಯೊಬ್ಬರು ಪತ್ರಕರ್ತರೆ,ಸೋಶಿಯಲ್ ಮೀಡಿಯಾದಲ್ಲಿ ಬೇಗನೆ ಸುದ್ದಿ ವಿನಿಮಯವಾದರೂ ಅದರ ಬಗ್ಗೆ ನಂಬಿಕೆ ಕಡಿಮೆ.ಯಾವಾಗಲೂ ಸತ್ಯ ಮಾತ್ರ ಸುದ್ದಿಯಾಗಬೇಕೆಂದರು.ಹಿರಿಯ ಪತ್ರಕರ್ತರಾದ ಶರಣಪ್ಪ ಬಾಚಲಾಪುರ,ರವೀಂದ್ರ ಅವರು ಕೂಡ ಅನಿಸಿಕೆ ಹಂಚಿಕೊಂಡರು.ಪತ್ರಿಕಾ ದಿನಾಚರಣೆಯ ನಿಮಿತ್ತವಾಗಿ ಶಾಲಾ ಆವರಣದಲ್ಲಿ ಹಿರಿಯ ಪತ್ರಕರ್ತರೆಲ್ಲಾ ಸೇರಿ ಸಸಿನೆಡಲಾಯಿತು.ಪತ್ರಕರ್ತರಾದ ಸಾಧಿಕ್ ಅಲಿ,ಸೋಮರಡ್ಡಿ ಅಳವಂಡಿ,ಜಿ.ಎಸ್.ಗೋನಾಳ,ಶರಣಪ್ಪ ಬಾಚಲಾಪುರ,ರವೀಂದ್ರ ವಿ.ಕೆ , ದತ್ತು ಕಮ್ಮಾರ, ಶ್ರೀಕಾಂತ ಅಕ್ಕಿ, ಅನಿಲ್ ಬಾಚನಹಳ್ಳಿ, ಬಿ.ಎನ್.ಹೊರಪೇಟಿ, ಸಿದ್ದು ಹಿರೇಮಠ, ಎಂ.ಎನ್.ಕುಂದಗೋಳ, ಜಾವೀದ್ ಅತ್ತಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ವಾದಿರಾಜ್ ದೇಸಾಯು , ಪ್ರಿಯದರ್ಶಿನಿ ಮುಂಡರಗಿಮಠ, ಹೇಮಾ ಪಾನಘಂಟಿ, ಗಿರಿಜಾ, ವೈಷ್ಣವಿ, ಸಂದೇಶ್ ಹಾಗೂ ಫೌಂಡೇಶನ್ ಪದಾಧಿಕಾರಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು. ಶಿಕ್ಷಕ ಮೋಹನ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 