ಕನ್ನಡದ ಹಣತೆ ಎದೆಯ ದೀಪವಾಗಬೇಕಾಗಿದೆ
The richness of Kannada should be a lamp in the heart
ಹೂವಿನಹಡಗಲಿ 3: ಕನ್ನಡದ ಹಣತೆ ಎದೆಯ ದೀಪವಾಗಬೇಕಾಗಿದೆ. ಎದೆಗೆ ಬಿದ್ದ ಅಕ್ಷರವಾಗಬೇಕಾಗಿದೆ. ಸಹಿಷ್ಣುತೆಯ ಬೆಳಕು ಬೀರಬೇಕಿದೆ ಎಂಬ ಕವನವಾಚಿಸುವುದರ ಮೂಲಕ ಕವಿ,ರಂಗ ನಿರ್ದೇಶಕ ಅಜಯ್ .ಚ ಹುಗಲೂರು ರಾಜ್ಯೋತ್ಸವ ಕವಿಗೋಷ್ಠಿಗೆ ಚಾಲನೆ ನೀಡಿದರು. ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಆಯೋಜಿಸಿದ್ದ ’ರಾಜ್ಯೋತ್ಸವ’ ಕವಿಗೋಷ್ಠಿಯಲ್ಲಿ ಕವನ ವಾಚಿಸುವುದರ ಮೂಲಕ ವರ್ತಮಾನದ ಕನ್ನಡದ ಮನಸ್ಸುಗಳು ಸಾಗಬೇಕಿರುವ ಮಾರ್ಗವನ್ನು ಸೂಚಿಸಿದರು. ಕವಿಗೋಷ್ಠಿಯಲ್ಲಿ ಟಿ.ಎಂ.ನಾಗಭೂಷಣ ’ಅವ್ವ’, ಎಂ.ಎಂ.ಗೌರಮ್ಮ ’ತಾಯಿ ಭುವನೇಶ್ವರಿ’, ಸಹದೇವಪ್ಪ ನಿಗದಿ ’ಕಟ್ಟೋಣ ಸಾಮರಸ್ಯದ ನಾಡು’,ನಾಗರಾಜ್ ಮಲ್ಕಿ ಒಡೆಯರ್ ’ಕನ್ನಡನಾಡು’, ಎಲ್.ಖಾದರ್ ಬಾಷಾ ’ವಿಶ್ವಪಥವಾಗಲಿ ಕನ್ನಡ’,ಡಾ.ಅನಿಲ್ ಕುಮಾರ್ ’ಸಾಮಾನ್ಯ ಕನ್ನಡಿಗ’, ಎಚ್.ಎಮ್. ಕೊಟ್ರಯ್ಯ ’ಅಭಿಮಾನವಿರಲಿ’, ಹೆಚ್.ಗಿರಿರಾಜ ’ಅಭಿಮಾನದ ಭೈರ್ಪ’, ಸಿ.ಎನ್. ಸೋಮೇಶಪ್ಪ ’ಕನ್ನಡ ಕವಿ ಪರಂಪರೆ’ ಯು.ರೇಣುಕಾ ’ಬಂಧನ’ಹಾಗೂ ಎ.ಅಶೋಕ ’ಉತ್ಸವ- ರಾಜ್ಯೋತ್ಸವ’ ಕವನಗಳನ್ನು ವಾಚಿಸಿ ಕನ್ನಡ ನಾಡು ನುಡಿ ಹಿರಿಮೆ, ಗರಿಮೆಗಳನ್ನ ಸಂಸ್ಕೃತಿ, ಪರಂಪರೆಗಳನ್ನು ಬಿಂಬಿಸಿ ಸಹೃದಯರಲ್ಲಿ ಅಭಿಮಾನದ ಭಾವ ಸ್ಪುರಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 