ಅನ್ನಭಾಗ್ಯ ಅಕ್ಕಿಗಾಗಿ ಸಾರ್ವಜನಿಕರ ಪರದಾಟ

ಲೋಕದರ್ಶನ ವರದಿ 

ಯರಗಟ್ಟಿ 30: ಸರವರ್ ಬೀಜಿ ಇರುವುದರಿಂದ ಪಡಿತರ ಧಾನ್ಯ ವಿತರಿಸಲು ವಿಳಂಬವಾಗಿದ್ದು ಸುಮಾರು ಎಂಟು ದಿನಗಳಿಂದ ಅನ್ನಬಾಗ್ಯ ದಾನ್ಯಾಗಳ ವಿತರಣಾ ಕೇಂದ್ರಗಳ ಮುಂದೆ ಗ್ರಾಮಸ್ಥರು ರಾತ್ರಿ ಹಗಲು ಎನ್ನದೇ ನಿದ್ದೆಗೆಟ್ಟು ಕೂಲಿ ನಾಲಿ ಬಿಟ್ಟು ಮತ್ತು ಮಕ್ಕಳು ಶಾಲೆ ಬಿಟ್ಟು ಅನ್ನಬಾಗ್ಯ ಅಕ್ಕಿಗಾಗಿ ಕಾದು ಕುಳಿತು ಸುಸ್ತಾದರು.

ಪ್ರತಿ ದಿನ ನಾವು ಕೂಲಿ ಮಾಡಿದಾಗ ಮಾತ್ರ ನಮ್ಮ ಮನೆತನ ನಡೆಸಲು ಸಾಧ್ಯ, ಸುಮಾರು ಎಂಟು ದಿನಗಳಿಂದ ಕೂಲಿ ಕೆಲಸಕ್ಕೆ ಹೋಗದೆ ಪಡಿತರ ಅಕ್ಕಿಗಾಗಿ ಕಾದು ಕುಳಿತು ಮನೆಯಲ್ಲಿ ಮಕ್ಕಳಿಗೆ ಅಡುಗೆ ಮಾಡಿ ಉಣಿಸಲು ಸಾಧ್ಯವಾಗದೇ ಮಕ್ಕಳನ್ನು ಶಾಲೆ ಬಿಡಿಸಿ ತಮ್ಮ ಜೊತೆನೇ ಕರೆದು ಕೊಂಡು ಬಂದಿರುವುದಾಗಿ ಗ್ರಾಮದ ಮಹಿಳೆಯರು ತಮ್ಮ ಅಳಲು ತೋಡಿಕೊಂಡರು.

ಸಹನೆ ಕಳೆದುಕೊಂಡ ಗ್ರಾಮಸ್ತರು ಜ.29 ರಂದು ಸಂಭಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪಕರ್ಿಸಿ ತರಾಟೆಗೆ ತೆಗೆದುಕೊಂಡು ಇವತ್ತು ಪಡಿತರ ಅಕ್ಕಿ ವಿತರಿಸದಿದ್ದರೆ ರಸ್ತೆಗಿಳಿದು ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿ ರಸ್ತೆಗಿಳಿಯಲು ಮುಂದಾದರು.

ತಕ್ಷಣ ಎಚೆತ್ತುಕೊಂಡ ಅಧಿಕಾರಿಗಳು ಕಂಪ್ಯೂಟರ್ ಮೂಲಕ ವಿತರಿಸುವುದನ್ನು ಬಿಟ್ಟು ಕೈ ಬರಹದ ಮೂಲಕ ಮ್ಯಾನ್ವೆಲ್ ಮೂಲಕ ಅಕ್ಕಿ ವಿತರಿಸಲು ಅನ್ನಬಾಗ್ಯ ಧಾನ್ಯಗಳ ವಿತರಣಾ ಕೇಂದ್ರಗಳ ಸಿಬ್ಬಂದಿಗಳಿಗೆ ಸೂಚಿಸಿ ಮಾರ್ಗದರ್ಶನ ನೀಡಿದರು. ಗ್ರಾಮಸ್ಥರು ಅಂತೂ ಎಂಟು ದಿನ ಕಾದು ಕುಳಿತು ಸುಸ್ತಾಗಿದ್ದರಿಂದ ಸಿಬ್ಬಂದಿಗಳು ಅಕ್ಕಿ ವಿತರಿಸಲು ಪ್ರಾರಂಭಿಸಿದಾಗ ಅಂತೂ ಕೊನೆಗೂ ಅಕ್ಕಿ ಸಿಕ್ಕಿತು ಎಂದು ನಿಟ್ಟುಸಿರು ಬಿಟ್ಟರು.

****