ಶರಣರ ಕಾಯಕ ಮತ್ತು ದಾಸೋಹ ತತ್ವ ಪಾಲಿಸಿ
The practice of servitude and the principle of slavery
ಶರಣರ ಕಾಯಕ ಮತ್ತು ದಾಸೋಹ ತತ್ವ ಪಾಲಿಸಿ
ಹೂವಿನಹಡಗಲಿ 19: ಕಾಯಕ ಮತ್ತು ದಾಸೋಹ ಶರಣರು ನೀಡಿದ ಎರಡು ಅಮೂಲ್ಯ ತತ್ವಗಳು ದುಡಿದು ಉಣ್ಣಬೇಕು ಎನ್ನುವುದು ಶರಣರ ತತ್ವ ವನ್ನು ಪಾಲಿಸಿ ಎಂದು ಪತ್ರಕರ್ತ ಎಂ.ದಯಾನಂದ ಹೇಳಿದರು. ಪಟ್ಟಣದ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ದಲ್ಲಿ ಕಾಯಕ ಮತ್ತು ದಾಸೋಹ, ಅವಿಭಕ್ತ ಕುಟುಂಬ ಕುರಿತು ಉಪನ್ಯಾಸ ನೀಡಿದ ಅವರು ಕಾಯಕದಿಂದ ಗಳಿಸಿದ ಸಂಪತ್ತನ್ನು ದಾಸೋಹದ ಮೂಲಕ ವಿನಿಯೋಗಿಸುವುದು ಶರಣ ಸಂಸ್ಕೃತಿಯ ತಳಹದಿಯಾಗಿದ್ದು ಇವು ಶರಣ ತತ್ವದ ಉದಾತ್ತ ಮೌಲ್ಯಗಳಾಗಿದ್ದು ಜೀವನದಲ್ಲಿ ಅಳವಡಿಸಿ ಕೊಳ್ಳಿ ಎಂದರು. ದತ್ತಿದಾನಿಗಳಾದ ಉತ್ತಂಗಿಯ ಗುಡೇಕೊಟಿ ಬಸವರಾಜಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೌಂಟ್ ಕಾರ್ಮೆಲ್ ಶಾಲೆಯ ಪ್ರಾಂಶುಪಾಲ ವಂದನೆಯ ಸ್ವಾಮಿ ಫಾ. ವಿಕ್ಟರ್ ವಿಜಯ್ ಪೈಸ್, ದತ್ತಿ ದಾನಿ ಐಗೋಳ ಸುಭಾಷ್ ಇದ್ದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಸಾಪ ತಾಲೂಕು ಘಟಕದ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ ವಹಿಸಿದ್ದರು. ಎಂ.ಪಿ.ಎಂ. ವಿರುಪಾಕ್ಷಯ್ಯ ಭಜನೆ ಪದಗಳನ್ನು ಹಾಡಿ ವಿದ್ಯಾರ್ಥಿಗಳ ಮನಸೂರೆಗೊಂಡರು. ದತ್ತಿದಾನಿಗಳನ್ನು ಕಸಾಪ ವತಿಯಿಂದ ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ವಿಜಯಲಕ್ಷ್ಮಿ ಸ್ವಾಗತಿಸಿದರು.ಕಸಾಪ ಮಾಜಿ ಅಧ್ಯಕ್ಷರಾದ ಎಚ್.ಜಿ. ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಇದೇ ವೇಳೆಗುಡೇಕೋಟೆ ಕರಿಬಸಪ್ಪ ಚಂದ್ರಮ್ಮ ಸ್ಮರಣಾರ್ಥ ದತ್ತಿ, ಐಗೋಳ ಬಸವರಾಜಪ್ಪ ಸ್ಮರಣಾರ್ಥ ದತ್ತಿ, ತುರುಕಾಣಿ ಶಿವಪುತ್ರ್ಪ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮ ಜರುಗಿತು. ಕಸಾಪ ಕಾರ್ಯದರ್ಶಿ ಎ.ಎಂ. ಚನ್ನವೀರಸ್ವಾಮಿ ವಂದಿಸಿದರು. ಶಿಕ್ಷಕಿ ರತ್ನಾ ಕಾರ್ಯಕ್ರಮ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 