ವೇಮನ ಸಮಾಜದ ಅನುಭಾವ ಕವಿ: ಸುರೇಶ ಅಂಗಡಿ
The poet who experienced the Vemana society: Suresh Angadi
ಹೂವಿನ ಹಡಗಲಿ 19: ಜನಜೀವನದ ಅತಿ ಸಾಮಾನ್ಯ ವಿಷಯಗಳನ್ನು ಸರಳ ನುಡಿಗಟ್ಟಿನಲ್ಲಿ ಕವಿತೆ ಕಟ್ಟಿದ ಅನುಭಾವ ಕವಿ ವೇಮನ ಎಂದು ಮುಖ್ಯ ಗುರುಗಳಾದ ಸುರೇಶ ಅಂಗಡಿ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಸೋಮವಾರ ತೆಲುಗಿನ ಶ್ರೇಷ್ಠ ಕವಿ ವೇಮನ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.ಸಾಮಾಜಿಕ ಅಸಮಾನತೆ ಮತ್ತು ಅವಲಕ್ಷಣಗಳ ಮೇಲೆ ಬಂಡಾಯ ಹೂಡಿದ ವೈಚಾರಿಕತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾವಿರಾರು ಸರಳ ಕವಿತೆಗಳನ್ನು ಕಟ್ಟಿದರು. ಮೂಢನಂಬಿಕೆ ಕಂದಾಚಾರ ಅಸ್ಪ್ರಶ್ಯತೆ ಜಾತಿಪದ್ಧತಿಯನ್ನು ಪ್ರಖರವಾಗಿ ಖಂಡಿಸಿದ ಜನಕವಿ ಎಂದು ಬಣ್ಣಿಸಿದರು.ಚಿತ್ರಕಲಾ ಶಿಕ್ಷಕರಾದ ಎಸ್ ದ್ವಾರಕೀಶ್ ವೇಮನ ರವರ ವಚನಗಳನ್ನು ಓದಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಎಂದರು. ಶಿಕ್ಷಕರಾದ ಆನಂದ್ ಜಿ ಬಸಪ್ಪ ಕೆ ಸ್ವಾಮಿನಾಥ ರಾಮಸ್ವಾಮಿ ಲಂಬಾಣಿ ಗಿಡ್ಡಾನಾಯ್ಕ್ ಗೀತಾ ಪಿ ಎಂ ಪ್ರತಿಮಾ ಎನ್ ರೇಖಾ ಎಸ್ ಸಂಗಮೇಶ ಸುಂಕದ ಪ್ರಸಾದ್ ಸಂತೋಷ್ ಕುಮಾರ್ ಎಸ್ ರಾಕೇಶ್ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 