ಹೈದರಾಬಾದ್, ಏ 18 ಪ್ರಸಕ್ತ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದ್ರಾಬಾದ ವಿರುದ್ಧ ಸೋಲಿನ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರ ಪ್ರತಿಕ್ರಿಯೆ ಆಸಕ್ತದಾಯಕವಾಗಿತ್ತು ಎಂದು ತಂಡದ ಮುಖ್ಯ ತರಬೇತುದಾರ ಸ್ಟಿಫೆನ್ ಫ್ಲೇಮಿಂಗ್ ಬಹಿರಂಗಪಡಿಸಿದರು.
ಬುಧವಾರ ರಾತ್ರಿ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ಗಳಿಂದ ಸೋಲು ಅನುಭವಿಸಿತ್ತು. ಇದು ಟೂನರ್ಿ ಎರಡನೇ ಸೋಲಾಗಿತ್ತು. ಧೋನಿ ಅನುಪಸ್ಥಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಮೊದಲ ವಿಕೆಟ್ಗೆ 79 ರನ್ ದಾಖಲಾಗಿತ್ತು. ಬಳಿಕ, ನಿಗದಿತ ಓವರ್ಗಳ ಮುಕ್ತಾಯಕ್ಕೆ 132 ರನ್ ಗಳಿಗೆ ಶಕ್ತವಾಗಿತ್ತು. ಆರಂಭಿಕರಾದ ಶೇನ್ ವ್ಯಾಟ್ಸನ್ ಹಾಗೂ ಫಾಫ್ ಡುಪ್ಲೀಸಿಸ್ ಅವರು ಉತ್ತಮ ಬ್ಯಾಟಿಂಗ್ ಮಾಡಿದರು.
ಆದರೆ, ನಂತರ ಬಂದ ಆಟಗಾರರು ತಂಡದ ಮೊತ್ತ ಏರಿಕೆ ಮಾಡುವಲ್ಲಿ ವಿಫಲರಾದರು. ಕೊನೆಯ 5 ಓವರ್ಗಳಲ್ಲಿ ಚೆನ್ನೈ ಕೇವಲ 22 ರನ್ ಮಾತ್ರ ದಾಖಲಿಸಲಾಯಿತು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫ್ಲೇಮಿಂಗ್. ಸೋಲಿನ ಬಗ್ಗೆ ವಿಶ್ಲೇಷಣೆ ಮಾಡುವುದಿಲ್ಲ. ಆದರೆ, ಕಳೆದ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವತ್ತ ಗಮನಹರಿಸುತ್ತೇವೆ. ಆ ಮೂಲಕ ಮುಂದಿನ ಪಂದ್ಯದಲ್ಲಿ ಹಿಂದಿನ ತಪ್ಪುಗಳನ್ನು ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ ಎಂದರು.
ಇದುವರೆಗೂ ಆಡಿರುವ 9 ಪಂದ್ಯಗಳಲ್ಲಿ 7ರಲ್ಲಿ ಜಯ ಸಾಧಿಸಿದ್ದು, ಇನ್ನುಳಿದ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿತು. ಸೋಲಿನಿಂದಾಗಿ ತರಬೇತಿಯ ವಿಧಾನವನ್ನು ಬದಲಾಯಿಸುವುದಿಲ್ಲ ಎಂದು ಪ್ಲೇಮಿಂಗ್ ತಿಳಿಸಿದರು.