ಗಮನಸೆಳೆದ ಸಾರಿಗೆ ಸಂಸ್ಥೆಯ ತಂಡದ ಪಥಸಂಚಲನ
The parade of the transport company team drew attention
ಬೆಳಗಾವಿ: ಬೆಳಗಾವಿಯಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಭದ್ರತಾ ಸಿಬ್ಬಂದಿ ತಂಡವು ಆಕರ್ಷಕವಾಗಿ ಪಥಸಂಚಲನ ನಡೆಸಿ ಗಮನಸೆಳೆಯಿತು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ್ ಎಂ., ಅಧ್ಯಕ್ಷ ರಾಜು ಕಾಗೆ ಮತ್ತು ಉಪಾಧ್ಯಕ್ಷ ಸುನೀಲ ಹನಮಣ್ಣವರ ಅವರ ಪ್ರೋತ್ಸಾಹ, ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಗಣೇಶ ರಾಠೋಡ ಮಾರ್ಗದರ್ಶನದಲ್ಲಿ ಈ ತಂಡ ಪಥಸಂಚಲನ ನಡೆಸಿತು.
ಈ ತಂಡದಲ್ಲಿ 31 ಮಂದಿ ಸದಸ್ಯರಿದ್ದರು. ಈ ಪೈಕಿ 9 ಮಂದಿ ಮಹಿಳೆಯರೇ ಇದ್ದಿದ್ದು ವಿಶೇಷ. ಇದರೊಂದಿಗೆ 10 ಸಿಬ್ಬಂದಿ ಒಳಗೊಂಡ ವಾದ್ಯವೃಂದ ತಂಡವೂ ಪರೇಡ್‌ನಲ್ಲಿ ಭಾಗಿಯಾಗಿ, ಪಥಸಂಚಲನದ ಮೆರುಗು ಹೆಚ್ಚಿಸಿತು.
ಇಷ್ಟುದಿನ ಪೊಲೀಸ್ ಬ್ಯಾಂಡ್ ಮಾತ್ರ ಪರೇಡ್‌ನಲ್ಲಿ ಈ ವಾದ್ಯಗಳನ್ನು ನುಡಿಸುತ್ತಿತ್ತು. ಇದೇ ಮೊದಲ ಸಲ ಸಾರಿಗೆ ಸಂಸ್ಥೆಯ ಭದ್ರತಾ ಸಿಬ್ಬಂದಿ ಒಳಗೊಂಡ ತಂಡವೂ ವಾದ್ಯಗಳನ್ನು ನುಡಿಸಿದ್ದು ವಿಶೇಷವಾಗಿತ್ತು.
ಈ ಹಿಂದೆ ಸಾರಿಗೆ ಸಂಸ್ಥೆಯ ತಂಡವು ಗದಗ ಹಾಗೂ ಧಾರವಾಡ ಜಿಲ್ಲಾಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿತ್ತು. ಈ ಬಾರಿ ಬೆಳಗಾವಿಯಲ್ಲೂ ಪ್ರತಿಭೆ ಮೆರೆಯಿತು.
ಬೇರೆ ಬೇರೆ ರಾಜ್ಯಗಳಿಂದ ಬ್ಯಾಗ್ ಪೈಪರ್, ಕ್ಲಾರಿಯೋನೆಟ್, ಟ್ರಾಂಪ್ರೆಟ್ ವಾದ್ಯಗಳನ್ನು ಖರೀದಿಸಿ ತರಲಾಗಿತ್ತು. ನಾನಪ್ಪ ಲಮಾಣಿ ನೇತೃತ್ವದಲ್ಲಿ ಪಥಸಂಚಲನ ನಡೆಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸಂಸ್ಥೆಯ ನೌಕರರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 