ಬನಶಂಕರಿದೇವಿಯ ಪಲ್ಲಕ್ಕಿ ಮೆರವಣಿಗೆಯು ಜೃಂಭಣೆಯಿಂದ ನಡೆಯಿತು
ರಾಣಿಬೆನ್ನೂರ 15: ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಸೋಮವಾರ ಬನದ ಹುಣ್ಣಿಮೆಯ ಪ್ರಯುಕ್ತ ಬನಶಂಕರಿದೇವಿಯ ಮೂರ್ತಿಯ ಪಲ್ಲಕ್ಕಿ ಮಹೋತ್ಸವದ ಮೆರವಣಿಗೆಯು ಜೃಂಭಣೆಯಿಂದ ನಡೆಯಿತು.
ಬೆಳಗ್ಗೆ ದೇವಿಗೆ ಕ್ಷೀರಾಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ ನಡೆಯಿತು. ಬಳಿಕ 2ಬನಶಂಕರಿದೇವಿಗೆ ಮಹಿಳೆಯರು ಹುಡಿ ತುಂಬಿಸುವುದು, ಕಂಕಣ ಕಟ್ಟುವುದು, ವಿಶೇಷವಾಗಿತ್ತು. ಗ್ರಾಮದಲ್ಲಿ ಹಬ್ಬದ ವಾತಾವರಣವಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಮೂರ್ತಿ ಮೆರವಣಿಗೆ ಬಾಜಾ ಬಜಂತ್ರಿಯೊಂದಿಗೆಸ ಸಾಗಿತು. ಎಲ್ಲರೂ ತಮ್ಮ ಮನೆಯ ಮುಂದೆ ನೀರು ಹಾಕಿ ಹಸಿರುತೋಣಗಳಿಂದ ಶೃಂಗರಿಸಿ ರಂಗೋಲಿ ಬಿಡಿಸಿದ್ದರು. ದೇವಿಗೆ ಹಣ್ಣುಕಾಯಿ ಅರ್ಿಸಿ ದೇವಿಯದರ್ಶನ ಪಡೆದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮಹೋತ್ಸವ ನಡೆಯಿತು. ನಂತರ ಭಕ್ತರಿಗೆ ಅನ್ನಸಂತರೆ್ಣ ನಡೆಯಿತು.
ಫೋಟೊ15ಆರ್ಎನ್ಆರ್05ರಾಣಿಬೆನ್ನೂರ:ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಬನದ ಹುಣ್ಣಿಮೆಯ ಪ್ರಯುಕ್ತ ಶ್ರೀ ಬನಶಂಕರಿ ದೇವಿಯ ಮೂರ್ತಿಯ ಪಲ್ಲಕ್ಕಿ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.