ಜನ ಕೇಳಿದಲ್ಲಿ ಕೆಲಸ ಕೊಡುತ್ತಿದ್ದ ನರೇಗಾ ಹೆಸರು ಬದಲಿದಲಿಸಿದ್ದೇ ಸಾಧನೆ : ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ ಸಚಿವ ಮಂಕಾಳ ವೈದ್ಯ
The only achievement was changing the name of NREGA, which used to provide jobs to people when they
ಕಾರವಾರ 12: ಜನ ಕೇಳಿದಲ್ಲಿ ಕೆಲಸ ಕೊಡುತ್ತಿದ್ದ ನರೇಗಾ ಹೆಸರು ಬದಲಿದಲಿಸಿದರು. ನಿಯಮ ಬದಲಿಸಿದರು. ದುಡಿವ ಜನರ ,ಬಡವರ ಕೆಲಸವನ್ನು ಕೇಂದ್ರದ ಬಿಜೆಪಿ ಕಸಿಯಿತು ಎಂದು ಸಚಿವ ಮಂಕಾಳ ಎಸ್. ವೈದ್ಯ ಆರೋಪ ಮಾಡಿದರು .ಭಟ್ಕಳದಲ್ಲಿ ಸಚಿವರ ಕಚೇರಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ನಮ್ಮ ಸರ್ಕಾರ ಇದ್ದಾಗ ಜನ ಬಯಸಿದಲ್ಲಿ ಕೆಲಸವಾಗಿತ್ತು. ದುಡಿವ ಜನರ ಮಕ್ಕಳಿಗೆ ಮಕ್ಕಳ ಪೋಷಣಾ ಮನೆ ಇತ್ತು. ಮಕ್ಕಳ ನೋಡಿಕೊಳ್ಳುವವರಿಗೆ ಸಹ ಕೂಲಿ ಸಿಗುತ್ತಿತ್ತು. 370 ರೂ. ಕೊಡುತ್ತಿದ್ದೆವು. ಪಂಚಾಯತ ಗ್ರಾಮ ಸಭೆಯಲ್ಲಿ ಕಾಮಗಾರಿ ನಿರ್ಧಾರವಾಗುತ್ತಿತ್ತು. ಈಗ ದೆಹಲಿಯಲ್ಲಿ ಕುಳಿತು ಕೆಲಸ ನಿರ್ಧರಿಸಲಾಗುತ್ತದೆ. ಅಲ್ಲದೆ ಗುತ್ತಿಗೆದಾರರ ಬಳಿ ಜೀತದಾಳುವಿನಂತೆ ಕೆಲಸ ಮಾಡಬೇಕಿದೆ.
ಕೇಂದ್ರ ಸರ್ಕಾರ ತಪ್ಪು ಮಾಡಿದೆ. ಬಡವರ ಹೊಟ್ಟೆ ಮೇಲೆ ಹೊಡೆದಿದೆ .ಮಹಾತ್ಮಾ ಗಾಂಧಿಜಿ ಹೆಸರು ತೆಗೆದರು. ವಿಜಿ ರಾಮ್ ಜಿ ಹೆಸರು ಯಾಕೆ ತಂದರು ಎಂದು ಅಚ್ಚರಿಯಾಗಿದೆ. ಕಾಂಗ್ರೆಸ್ ಪಕ್ಷ ಕೇಂದ್ರದ ನಿರ್ಧಾರವನ್ನು ಟೀಕಿಸುತ್ತೇವೆ . ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದರು.ಮಹಿಳೆಯರ ದುಡಿಯುವ ಹಕ್ಕು, ಕೂಲಿ ಕಸಿದರು.ಅಲ್ಲದೆ ಅನುದಾನದಲ್ಲಿ ಶೇ.40 ನ್ನು ರಾಜ್ಯದ ಮೇಲೆ ಹೊರೆ ಹಾಕಿದ್ದಾರೆ . ದೆಹಲಿಯಲ್ಲಿ ಕುಳಿತು ನಮ್ಮ ಗ್ರಾಮದ ಕಾಮಗಾರಿ ನಿರ್ಧಾರ ಸರಿಯಲ್ಲ. ಇದು ಸಂಪೂರ್ಣ ಜನ ವಿರೋಧಿ ಕಾಯ್ದೆ .ಅಲ್ಲದೇ ಮಹಾತ್ಮಾಗಾಂಧಿ ಮೇಲೆ ಪ್ರಹಾರ ಮಾಡಲಾಯಿತು .ಇದೇ ಕೇಂದ್ರದ ಉದ್ದೇಶ ಎಂದರು .ಪಶ್ಚಿಮ ಬಂಗಾಳದಲ್ಲಿ ನರೇಗಾ ಭ್ರಷ್ಟಾಚಾರ ನಡೆದಿದ್ದರೆ, ಅದನ್ನು ಬಯಲಿಗೆ ಎಳೆಯಲಿ .ಭಷ್ಟ್ರಚಾರ ಮಾಡಿದವರಿಗೆ ಶಿಕ್ಷೆಗೆ ಗುರಿಪಡಿಸಲಿ. ಅದು ಬಿಟ್ಟು ಇಡೀ ಯೋಜನೆಯನ್ನು ಜನರಿಂದ ಕಸಿಯುವುದಲ್ಲ ಎಂದು ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು. ಹೆಸರು ಬದಲಿಸುವುದು ಸಾಧನೆ ಅಲ್ಲ.
ಯೋಜನೆಗಳಿಗೆ ಅನುದಾನ ಸಹ ಕೊಡುತ್ತಿಲ್ಲ ಎಂದು ಸಚಿವರು ಟೀಕಿಸಿದರು. ಬಿಎಸ್ ಎನ್ ಎಲ್, ವಿಮಾನ ನಿಲ್ದಾಣ, ಬಂದರುಗಳನ್ನು ಹರಾಜು ಹಾಕಲಾಗಿದೆ. ಸ್ವಂತ ಹೇಳಿಕೊಳ್ಳುವ ಕೆಲಸ ಮಾಡಲಿಲ್ಲ. ನರೇಂದ್ರ ಮೋದಿಯವರು ಮಾಡಿದ ಸಾಧನೆಗಳ ಬಗ್ಗೆ ಒಮ್ಮೆಯೂ ಮಾತಾಡಿಲ್ಲ. ಅವರ ಬೇರೆಯದೇ ಮಾತಾಡುತ್ತಾರೆ .ಪಂಚಾಯತ ನಿರ್ಣಯವನ್ನು ಕೇಂದ್ರ ದೆಹಲಿಯಲ್ಲಿ ನಿರ್ಧರಿಸಿದರೆ, ಗುತ್ತಿಗೆದಾರ ಭಾಗವಹಿಸಿ, ಕಾರ್ಮಿಕರನ್ನು ಜೀತಕ್ಕೆ ಇಟ್ಟುಕೊಳ್ಳುತ್ತಾರೆ .ಆಹಾರ ಸೆಕ್ಯುರಿಟಿ ಕಾಯ್ದೆಯಿಂದ ಜನ ಊಟ ಮಾಡುತ್ತಾರೆ. ಈ ಕಾಯ್ದೆಯನ್ನು ಸಹ ಬಿಜೆಪಿ ಸರ್ಕಾರ ಏನು ಮಾಡುತ್ತಾರೋ ನೋಡಬೇಕು ಎಂದು ಸಚಿವ ವೈದ್ಯ ಟೀಕಿಸಿದರು. ಪಕ್ಷಪಾತವಾಗಿ ಈ ಹೋರಾಟ ಬೆಂಬಲಿಸಬೇಕು ಎಂದು ವಿನಂತಿಸುವೆ. ಅಲ್ಲದೇ ಈ ಸಂಬಂಧ ಕಾಂಗ್ರೆಸ್ ಸುಪ್ರೀಂಕೋರ್ಟ್ ಗೆ ಹೋಗುತ್ತೇವೆ ಎಂದರು. ಯುಪಿಎ ಸರ್ಕಾರದ 30 ಯೋಜನೆಗಳ ಹೆಸರು ಬದಲಿಸಿದರು. ಇದೇ ಮೋದಿಯವರ ಸೂಚನೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ , ಕೆಪಿಸಿಸಿ ಕಾರ್ಮಿಕ ಕಾರ್ಯದರ್ಶಿ ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 