ಶ್ರೀ ಗುರು ಸಾರ್ವಭೌಮರ ಮಧ್ಯಾರಾಧನೆ, ಹರಿದು ಬಂದ ಭಕ್ತ ಸಾಗರ
The ocean of devotees poured in to worship Sri Guru Sarvabhauma
ಶ್ರೀ ಗುರು ಸಾರ್ವಭೌಮರ ಮಧ್ಯಾರಾಧನೆ, ಹರಿದು ಬಂದ ಭಕ್ತ ಸಾಗರ
ಬಳ್ಳಾರಿ: ನಗರದ ಕೌಲ್ ಬಜಾರ ಪ್ರದೇಶದ, ವ್ಯಾಸರಾಜ ಮೂಲ ಗೋಪಾಲಕೃಷ್ಣ ಮತ್ತು ಆಂಜನೇಯ ಸಹಿತ, ಜಯತೀರ್ಥರು, ಪಾದರಾಜರು, ಶ್ರೀ ವ್ಯಾಸರಾಜರ, ಶ್ರೀ ವಾದಿರಾಜರ ಹಾಗೂ ಗುರು ಸಾರ್ವಭೌಮರ ಸನ್ನಿಧಾನದಲ್ಲಿ ಮಂಗಳವಾರ ಗುರುಸಾರ್ವಭೌಮರ ಮಧ್ಯಾರಾಧನೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆ ರಾಘವೇಂದ್ರ ಸ್ವಾಮಿ ಅಷ್ಟೋತ್ತರ ಪಾರಾಯಣ, ಶ್ರಿಹರಿವಾಯುಸ್ತುತಿ ಮಂತ್ರ ಪಠಣೆ, ಹೊಸಪೇಟೆಯ ಪಂ. ಶ್ರೀ ವಿಶ್ವನಾಥ ಆಚಾರ್ಯರು ಸೇರಿದಂತೆ ವಿವಿಧ ಪಂಡಿತರಿಂದ ವಿಶೇಷ ಉಪನ್ಯಾಸ, ವಿಶೇಷ ಅಲಂಕಾರ, ಪಂಚಾಮೃತಾಭಿಷೇಕ, ಹಸ್ತೊದಕ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನೆರವೇರಿದವು. ನಗರ ಸೇರಿದಂತೆ ನಾನಾ ಕಡೆಯಿಂದ ನೂರಾರು ಭಕ್ತರು ದೇಗುಲಕ್ಕೆ ಆಗಮಿಸಿ, ವಿಶೇಷ ಪೂಜೆ, ಅರ್ಚನೆ ಸಲ್ಲಿಸಿ ಗುರುರಾಯರ ದರ್ಶನ ಪಡೆದು ಭಕ್ತಿ ಸಮರ್ಿಸಿದರು. ಶ್ರೀ ವ್ಯಾಸರಾಜ ಶ್ರೀಮಠದ ಪ್ರಧಾನ ಅರ್ಚಕರಾದ ಶ್ರೀ ಪಾಂಡುರಂಗ ಆಚಾರ್ಯ ಅವರ ನೇತೃತ್ವದಲ್ಲಿ ಎಲ್ಲ ಪೂಜೆಗಳು ವಿಜೃಂಭಣೆಯಿಂದ ನಡೆದವು. ಇದಕ್ಕೂ ಮುನ್ನ ವಿವಿಧ ಭಜನಾ ಮಂಡಳಿ ಸದಸ್ಯರಿಂದ ಸಾಮೂಹಿಕ ಭಜನೆ, ನಡೆಯಿತು. ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಸಂಜೆ ಶ್ರೀಮಠದಲ್ಲಿ ಮುದ್ದು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ನಡೆದವು. ಶ್ರೀಮಠದ ಎಲ್ಲ ಪದಾಧಿಕಾರಿಗಳು, ವಿವಿಧ ಗಣ್ಯರು, ಭಕ್ತರು ಭಾಗವಹಿಸಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 