ಪಾರ್ಥನಹಳ್ಳಿ ಗ್ರಾಪಂ ಅಧ್ಯಕ್ಷರ ವಿರುದ್ಧ ಸಲ್ಲಿಸಿದ್ದ ಅವಿಶ್ವಾಸ ಗೊತ್ತುವಳಿ ವಿಫಲ

The no-confidence motion filed against the Parthanahalli village president failed

ಪಾರ್ಥನಹಳ್ಳಿ ಗ್ರಾಪಂ ಅಧ್ಯಕ್ಷರ ವಿರುದ್ಧ ಸಲ್ಲಿಸಿದ್ದ ಅವಿಶ್ವಾಸ ಗೊತ್ತುವಳಿ ವಿಫಲ 

ಅಥಣಿ 21: ಪಾರ್ಥನಹಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಷರೀಫ ಅಲೀಸಾಬ ಮುಲ್ಲಾ ವಿರುದ್ಧ ಸಲ್ಲಿಸಿದ್ದ ಅವಿಶ್ವಾಸ ಗೊತ್ತುವಳಿ ವಿಫಲಗೊಳ್ಳುವ ಮೂಲಕ ಅಲೀಸಾಬ ಮುಲ್ಲಾ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ ಎಂದು ವೀಕ್ಷಕರಾಗಿ ಆಗಮಿಸಿದ್ದ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಶ ಸಂಪಗಾಂವಿ ತಿಳಿಸಿದರು.  

      ಅವರು ಪಾರ್ಥನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಮಾತನಾಡುತ್ತಿದ್ದರು. 19 ಸದಸ್ಯ ಬಲದ ಗ್ರಾಮ ಪಂಚಾಯತನ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಕನಿಷ್ಠ 13 ಸದಸ್ಯರ ಹಾಜರಾತಿ ಅವಶ್ಯಕವಾಗಿತ್ತು. ಆದರೆ ಇಂದು ಯಾರೊಬ್ಬ ಸದಸ್ಯರೂ ಕೂಡ ನಿಗದಿತ ಸಮಯದಲ್ಲಿ ಹಾಜರಾಗಲಿಲ್ಲ. ಹೀಗಾಗಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯ ವಿಫಲಗೊಂಡಿದೆ ಎಂದು ತಿಳಿಸಿದ ಅವರು ಈಗಿದ್ದ ಅಧ್ಯಕ್ಷರೇ ಮುಂದುವರೆಯುತ್ತಾರೆ ಎಂದು ಹೇಳಿದರು.  

        ಪಾರ್ಥನಹಳ್ಳಿ ಗ್ರಾಮ ಪಂಚಾಯತನ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಗಾಗಿ ಸದಸ್ಯ ಚಿಕ್ಕಪ್ಪ ಬಸಪ್ಪ ಮದಣ್ಣವರ ಮತ್ತಿತರರು ಉಪ ವಿಭಾಗಾಧಿಕಾರಿ ಸುಭಾಶ ಸಂಪಗಾಂವಿ ಇವರಿಗೆ ಕೆಲ ದಿನಗಳ ಹಿಂದೆ ಮನವಿ ಸಲ್ಲಿಸಿದ್ದರು. ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸುರೇಶ ದೊಡಮನಿ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು. ಮುನ್ನೆಚ್ಚರಿಕೆಯಾಗಿ ಅಥಣಿ ಪೊಲೀಸರು ಬಂದೋಬಸ್ತ ಕೈಗೊಂಡಿದ್ದರು.