ಲೋಕದರ್ಶನ ವರದಿ
ಗದಗ 03: ದೇಶದ ವಿವಿಧ ರೈಲು ನಿಲ್ದಾಣಗಳಿಗೆ ಮಹಾನ್ ಸಾಧಕರ ಹೆಸರನ್ನು ನಾಮಕರಣಗೊಳಿಸಿದಂತೆ ಐತಿಹಾಸಿಕ ಸ್ಥಳವಾದ ಗದಗ ರೈಲು ನಿಲ್ದಾಣಕ್ಕೆ ವಿಶ್ವ ಸಂತ ಶ್ರೇಷ್ಠರಾದ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ಹೆಸರನ್ನು ನಾಮಕರಣಗೊಳಿಸಲು ಒತ್ತಾಯಿಸಿ ಶನಿವಾರ ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಗದಗ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇಡೀ ವಿಶ್ವಕ್ಕೆ ಸಂಗೀತ ದಿಗ್ಗಜರನ್ನು ಕೊಡಮಾಡಿದ, ಅಂಧ ಅನಾಥರ ಪಾಲನೆ ಮಾಡಿ ಅವರನ್ನು ಸಂಗೀತ ಲೋಕದ ತಾರೆಗಳನ್ನಾಗಿಸಿದ ಕೀತರ್ಿ ಗದಗ ವೀರೇಶ್ವರ ಪುಣ್ಯಾಶ್ರಮದ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರದು. ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರು ರೈಲು ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರನ್ನು ನಾಮಕರಣ ಮಾಡಿದಂತೆ ಗದಗ ರೈಲು ನಿಲ್ದಾಣಕ್ಕೆ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಹೆಸರನ್ನು ನಾಮಕರಣಗೊಳಿಸಿ ಪೂಜ್ಯರ 105ನೇ ಜಯಂತ್ಯುತ್ಸವದ ಕೊಡುಗೆಯಾಗಿ ನೀಡಬೇಕು ಎಂಬುದು ಉತ್ತರ ಕರ್ನಾಟಕ ಲಕ್ಷಾಂತರ ಜನರಬಯಕೆಯಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಗದಗ-ಹಾವೇರಿ ರೈಲು ಮಾರ್ಗ ನಿಮರ್ಾಣಕ್ಕೆ ಭೂಮಿ ಒದಗಿಸಿ: ಕನರ್ಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಗದಗ- ಹಾವೇರಿ ರೈಲು ಮಾರ್ಗ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಹೋರಾಟ ಮಾಡಿದ ಫಲವಾಗಿ ಕೇಂದ್ರ ಸರಕಾರದ ಮೇಲೆ ರಾಜ್ಯದ ಸಂಸದರು ಒತ್ತಡ ತಂದು ನೂತನ ಮಾರ್ಗ ಮಂಜೂರು ಮಾಡಿಸಿ ಅದಕ್ಕಾಗಿ ಈಗಾಗಲೇ 650 ಕೋಟಿ ರೂ.ಗಳನ್ನು ನೀಡಲಾಗಿದೆ. ಗದಗ- ಹಾವೇರಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಬೇಕಾದ ಅಗತ್ಯ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡು ರೈಲ್ವೆ ಇಲಾಖೆಗೆ ನೀಡಬೇಕು ಹಾಗೂ ಶೀಘ್ರವಾಗಿ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ.
ಗದಗ-ಮುಂಡರಗಿ-ಹರಪನಹಳ್ಳಿ ಹಾಗೂ ಗದಗನಿಂದ ಕಣಗಿನಹಾಳ, ಕೋಟುಮಚಗಿ, ನರೇಗಲ್, ಗಜೇಂದ್ರಗಡ, ಕುಷ್ಟಗಿ, ಲಿಂಗಸೂರ ಮೂಲಕ ವಾಡಿ ತಲುಪುವ ನೂತನ ಮಾರ್ಗವನ್ನು ಕೇಂದ್ರ ಸರಕಾರ ಈಗಾಗಲೇ ಘೋಷಿಸಿದ್ದು, ಈ ಎರಡೂ ನೂತನ ರೈಲು ಮಾರ್ಗಗಳಿಗೆ ಕೇಂದ್ರ ಸರಕಾರ ಶೀಘ್ರ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿಲಾಗಿದೆ.
ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಗದಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ನಿಸಾರಅಹ್ಮದ ಖಾಜಿ, ಪ್ರಧಾನ ಕಾರ್ಯದರ್ಶಿ ಬಸವಣ್ಣೆಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಪದಾಧಿಕಾರಿಗಳಾದ ಎಂ.ಬಿ. ದೇಸಾಯಿ, ಎಚ್.ಕೆ. ಮುಲ್ಲಾ, ಮಹೇಶ ದಾಸರ, ಸಂಗಪ್ಪ ಕೊಟ್ಟೂರಶೆಟ್ರ, ಯಮನೂರಸಾಬ ನದಾಫ್, ವಿನಾಯಕ ನಂದಿಕೋಲಮಠ ಮುಂತಾದವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.