ಹಾವೇರಿ12: ಕನಕ ಜಯಂತಿಯ ಆಚರಣೆಯಲ್ಲಿ ಡಿಜೆಗಳನ್ನು ಬಳಸದೆ ನಮ್ಮ ಜನಪದ ವಾಧ್ಯಗಳೊಂದಿಗೆ ಹಾಗೂ ಕನಕರ ತತ್ವಾರ್ಥಕಗಳ ಘೋಷಣೆಯೊಂದಿಗೆ ಇದೇ 26 ರಂದು ನಡೆಯುವ ಕನಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಕಾಗಿನೆಲೆ ಜಗದ್ಗುರು ನಿರಂಜನಾನಂದ ಪುರಿ ಮಹಾಸ್ವಾಮಿಗಳು ಕರೆ ನೀಡಿದರು.
ಕಾಗಿನೆಲೆಯ ಶ್ರೀಕನಕ ಗುರು ಪೀಠದಲ್ಲಿ ಕನಕ ಜಯಂತಿ ಆಚರಣೆ ಕುರಿತು ಜಿಲ್ಲಾ ಕುರುಬರ ಸಂಘವು ಕರೆದಿದ್ದಾ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದ ಜಗದ್ಗುರುಗಳು ಪ್ರಸ್ತುತ ದಿನದಲ್ಲಿ ಮಹಾನ ಪುರುಷರ ವ್ಯಕ್ತಿಗಳ ಜಯಂತ್ಸೋವಕ್ಕೆ ಜಾತಿ ವ್ಯವಸ್ಥೆ ಬೇಡ ಎಂದು ಹೇಳುತ್ತೆವೆ, ಆದರೆ ಜಯಂತ್ಯೋತ್ಸವದಲ್ಲಿ ಸಮುದಾಯ-ಸಮುದಾಯವನ್ನು ಕೇರಳುಸುವಂತಾ ಘೋಷಣೆಗಳನ್ನು ಶ್ಲೋಗನ್ಗಳನ್ನು ಕೂಗುತ್ತಾ, ಜಾತಿಯ ವೈಶಮ್ಯ ಬೆಳೆಸುತ್ತೆವೆ. ಕನಕ ಜಯಂತಿಯಲ್ಲಿ ಇಂತಹ ಘಟನೆಗಳು ನಡೆಯಬಾರದು. ಕನಕ ಜಯಂತಿಯು ಮಾದರಿಯಾಗಲು ಕನಕರ ತತ್ವ ಪದಗಳೊಂದಿಗೆ ಮತ್ತು ಅವರ ಆದರ್ಶವನ್ನು ಭಿತ್ತುವಂತಹ ಘೋಷಣೆಗಳು ಕೇಳಿ ಬರಬೇಕೆಂದರು.
ಜಯಂತ್ಸೋವದಲ್ಲಿ ಅನಗತ್ಯ ಇತರೆ ಚಟುವಟಿಕೆಗಳಿಗೆ ಹಣ ದುಂದುವೆಚ್ಚ ಮಾಡುವುದಕ್ಕಿಂತ ಕನಕ ಹೆಸರಿನಲ್ಲಿ ಸಿಹಿ ಹಂಚಿ ಅನ್ನ ಸಂತರ್ಪಣೆ ಮಾಡಿ, ಅಂದಾಗ ಜಯಂತ್ಸೋವ ಆಚರಣೆ ಸಾರ್ಥಕವಾಗುತ್ತದೆ ಎಂದರು.
ಜಯಂತ್ಸೋವಗಳು ಸಮಾಜವನ್ನು ದಿಕ್ಕು ತಪ್ಪಿಸುವಂತೆ ಆಗಬಾರದು ಸಮುದಾಯಕ್ಕೆ ಸಂಸ್ಕಾರ ನೀಡುವಂತೆ ಧರ್ಮ ಜಾಗೃತಿ ಮೂಡಿಸುವಂತೆ ಹಾಗೂ ಕನಕ ಜಯಂತ್ಸೋವ ಇತರೆ ಸಮುದಾಯವನ್ನು ಸೇರಿಸಿಕೊಂಡು ಆಚರಣೆ ಮಾಡುವಂತೆ ಸಮುದಾಯದ ಜನತೆಗೆ ಕರೆ ನೀಡಿದರು.
ಕಾಗಿನೆಲಯ ಕನಕ ಗುರು ಪೀಠದಲ್ಲಿ 26 ರಂದು ಕನಕ ಜಯಂತಿ ಹಾಗೂ ಕನಕ ರಥೋತ್ಸವವು ನಡೆಯಲಿದೆ. 25 ರಂದು ಮಠದಲ್ಲಿ ಶ್ರೀಕನಕ ಧ್ವಜಾರೋಹಣ ಬೆಳಿಗ್ಗೆ ಹಾಗೂ ಮಠದಲ್ಲಿ ಅಭಿಷೇಕ ಕಾರ್ಯಕ್ರಮಗು ನಡೆಯಲಿವೆ. ಇನ್ನು 2 ರಂದು 3 ಗಂಟೆಗೆ ಧರ್ಮಸಭೆ 4.30ಕ್ಕೆ ಶ್ರೀ ಕನಕ ರಥೋತ್ಸವವು ನಡೆಯಲಿದೆ ಶ್ರೀಗಳು ಕಾರ್ಯಕ್ರಮದ ಪೂರ್ಣ ಮಾಹಿತಿ ವಿವರಿಸಿದರು.
ಸಭೆಯಲ್ಲಿ ಪ್ರಾಸ್ತವಿಕವಾಗಿ ಶ್ರೀ ಮಠದ ಆಡಳಿತಾಧಿಕಾರಿ ಎಸ್.ಎಪ್.ಎನ್.ಗಾಜಿಗೌಡ್ರ ಮಾತನಾಡಿದರು. ಸಭೆಯ ಸಮ್ಮುಖವನ್ನು ಶ್ರೀಮಠದ ಕಿರಿಯ ಸ್ವಾಮೀಜಿ ಅಮೋಘನಾಂದ ಸ್ವಾಮಿಜಿಗಳು ವಹಿಸಿದರು.
ಸಭೆಯಲ್ಲಿ ಜಿಲ್ಲಾ ಕರುಬರ ಸಂಘದ ಅಧ್ಯಕ್ಷ ಮಾರುತಿ ಹರಿಹರ, ಸಮಾಜದ ಮುಖಂಡರಾದ ರಾಜೇಂದ್ರ ಹಾವೇರಿಣ್ಣನವರ, ಶಂಕ್ರಣ್ಣ ಮಾತನವರ, ಮಾಲತೇಶ ಬಣಕಾರ, ಹನುಮಂರಗೌಡ ಗಾಜಿಗೌಡ್ರ, ಸದಾನಂದಗೌಡ ಪಾಟೀಲ, ರಾಜು ಮೌರ್ಯ ಸೇರಿದಂತೆ ಜಿಲ್ಲಾ ಕುರುಬರ ಪದಾಧಿಕಾರಿಗಳು ಹಾಗೂ ಮುಖಂಡರು ಪಾಲ್ಗೊಂಡದ್ದರು.