ಬಡವರ ಅನ್ನ ದಂಧೆಕೋರರ ಪಾಲುಽ ಅಕ್ರಮ ಅಕ್ಕಿ ಸಾಗಾಟಕ್ಕೆ ಕರವೇ ಕಿಡಿಽಽ ಕಾನೂನು ಕ್ರಮಕೈಗೊಂಡು ಅಕ್ರಮವನ್ನು ತಡೆಗಟ್ಟಿ : ಬಿ.ಗೀರೀಶಾನಂದ
The illegal transportation of rice is a big problem for the poor, and legal action should be taken
ಬಡವರ ಅನ್ನ ದಂಧೆಕೋರರ ಪಾಲುಽ ಅಕ್ರಮ ಅಕ್ಕಿ ಸಾಗಾಟಕ್ಕೆ ಕರವೇ ಕಿಡಿಽಽ ಕಾನೂನು ಕ್ರಮಕೈಗೊಂಡು ಅಕ್ರಮವನ್ನು ತಡೆಗಟ್ಟಿ : ಬಿ.ಗೀರೀಶಾನಂದ
ಕೊಪ್ಪಳ 05 : ಸರ್ಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅನಧಿಕೃತವಾಗಿ ಸಂಗ್ರಹಿಸಿ ಬೇರೆಡೆಗೆ ಸಾಗಾಟ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಂಡು ಅಕ್ರಮವನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ಮಂಗಳವಾರದಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಸೋಮಶೇಖರ ಬಿರಾದರ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಘಟಕದಿಂದ ಮನವಿ ಪತ್ರ ಸಲ್ಲಿಸಲಾಯಿತು.
ಕರವೇ ಜಿಲ್ಲಾಧ್ಯಕ್ಷ ಬಿ.ಗೀರೀಶಾನಂದ ಜ್ಞಾನಸುಂದರ ಅವರು ಮನವಿ ಪತ್ರ ಸಲ್ಲಿಸಿ ಮಾತನಾಡಿದರು ಸರ್ಕಾರವು ಬಡವರಿಗೆ ಅನೂಕೂಲವಾಗಲಿ ಎಂದು ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಪಡಿತರವನ್ನು ವಿತರಿಸುತ್ತಿರುವುದು ಶ್ಲಾಘನೀಯವಾಗಿದೆ. ಆದರೆ ಈ ಯೋಜನೆಯ ಅಕ್ಕಿಯನ್ನು ಬಡವರಿಂದ ಕಸಿದುಕೊಂಡು ಬೇರೆಡೆಗೆ ಸಾಗಾಟ ಮಾಡುವ ಜಾಲವು ಜಿಲ್ಲೆಯಲ್ಲಿ ಸಕ್ರೀಯವಾಗಿದ್ದು, ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನೇ ಕೆಲವರು ದಂಧೆಯನ್ನಾಗಿ ಮಾಡಿಕೊಂಡಿರುವುದನ್ನು ಬಲವಾಗಿ ಖಂಡಿಸಿದ ಅವರು ಈ ದಂಧೆಕೋರರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅನಧೀಕೃತವಾಗಿ ಅಕ್ಕಿ ಸಂಗ್ರಹಿಸುವ ಏಜೆಂಟರನ್ನು ನೇಮಕಮಾಡಿಕೊಂಡು ಅವರಿಂದ ಸರಬರಾಜು ಆಗಿರುವ ಅಕ್ಕಿಯನ್ನು ಒಂದಡೆ ಸಂಗ್ರಹಿಸಿ ಬೇರೆಡೆಗೆ ಹೆಚ್ಚಿನ ಬೆಲೆಗೆ ಲೋಡ್‌ಗಟ್ಟಲೆ ಕಳುಹಿಸುತ್ತಿದ್ದಾರೆ.
ಈ ಅಕ್ರಮಕ್ಕೆ ಕೆಲವು ಕಾಣದ ಕೈಗಳ ಅಭಯ ಹಸ್ತ, ಜನಪ್ರತಿನಿಧಿಗಳ ಶ್ರೀರಕ್ಷೆ ಹಾಗೂ ಕೆಲವು ಅಧಿಕಾರಿಗಳ ಬೆಂಬಲವೂ ಇರುವುದು ಜಗಜ್ಜಾಯಿರಾಗಿದೆ. ಜಿಲ್ಲೆಯ ಕೊಪ್ಪಳ, ಗಂಗಾವತಿ, ಕಾರಟಗಿ, ಯಲಬುರ್ಗಾ, ಕುಷ್ಟಗಿ, ಕುಕನೂರು, ಕನಕಗಿರಿ ಹಾಗೂ ತಾವರಗೇರೆ ಪ್ರಮುಖ ಪಡಿತರ ಅಕ್ಕಿ ಸಂಗ್ರಹಣೆ ಮತ್ತು ರು್ತ ಕೇಂದ್ರಗಳಾಗಿದ್ದು, ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಪ್ರತಿನಿತ್ಯ ಕನಿಷ್ಟ 70 ರಿಂದ 80 ಟನ್ ಗೋಡೌನ್ ಒಂದರಲ್ಲಿ ಸಂಗ್ರಹಿಸುವುದು ಹಾಗೂ ಗಂಗಾವತಿ ನಗರದಲ್ಲಿ ಕಿಲ್ಲಾಏರಿಯಾ, ಶರಣಬಸವೇಶ್ವರ ಕ್ಯಾಂಪ್ ಹಾಗೂ ಇನ್ನಿತರ ಪ್ರದೇಶಗಳಿಂದ ಕನಿಷ್ಟ 50 ರಿಂದ 60 ಟನ್ ಅನಧೀಕೃತ ಪಡಿತರ ಅಕ್ಕಿ ರಫ್ತಾಗುತ್ತಿದ್ದು, ಅಂತರಾಜ್ಯಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಪ್ರಭಾವಿ ಜಾಲವು ಸಕ್ರೀಯವಾಗಿದ್ದು, ಈ ಅಕ್ರಮದ ಬಗ್ಗೆ ಕರವೇ ಜಿಲ್ಲಾ ಘಟಕವು ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರು ಅಕ್ರಮ ತಡೆಗಟ್ಟಬೇಕಾದ ಜಿಲ್ಲೆಯ ಶಿರಸ್ತೆದಾರರು ಮತ್ತು ಆಹಾರ ನೀರೀಕ್ಷಕರು ಕಂಡು ಕಾಣದಂತೆ ಕುಳಿತಿರುವುದು ಇವರ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕಾಧ್ಯಕ್ಷ ಗವಿಸಿದ್ದಪ್ಪ ಚಕ್ಕಡಿ, ನಗರ ಘಟಕ ಅಧ್ಯಕ್ಷ ಪ್ರಫುಲ್‌ಕುಮಾರ ಪಾಟೀಲ, ಭಾಗ್ಯನಗರ ಅಧ್ಯಕ್ಷ ವಿರೇಶ ಮುಂಡಾಸದ, ಕರವೇ ಮುಖಂಡರಾದ ಆನಂದ ಗೌಡರ, ಗುರು ಅಂಗಡಿ, ಮಲ್ಲೇಶಪ್ಪ ಕೊಪ್ಪಳ, ರವಿ ದದೇಗಲ್, ಬಸಣ್ಣ ದದೇಗಲ್, ನಿಂಗಪ್ಪ ಕಿಟಗೇರಿ, ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.ಬಾಕ್ಸ್:- ಬಡವರ ಹೊಟ್ಟೆಗೆ ಸೇರಬೇಕಾದ ಅನ್ನ ದಂಧೆಕೋರರ ಪಾಲಾಗುತ್ತಿದೆ. ಒಂದು ವಾರಗಳ ಕಾಲಮೀತಿಯಲ್ಲಿ ಈ ಎಲ್ಲಾ ಅಕ್ರಮ ಚಟುವಟಿಕೆಗಳ ಮೇಲೆ ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಕಾನೂನಿನಡಿಯಲ್ಲಿ ಶಿಕ್ಷೆಗೆ ಒಳಪಡಿಸಬೇಕು. ಇಲ್ಲದಿದ್ದರೆ ಕರವೇಯ ಪ್ರತಿಯೊಂದು ಗ್ರಾಮ ಶಾಖೆಯ ಕಾರ್ಯಕರ್ತರು ಈ ಅಕ್ರಮವನ್ನು ತಡೆಗಟ್ಟಲು ಬೀದಿಗಿಳಿಯಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ.-ಬಿ.ಗೀರೀಶಾನಂದ ಜ್ಞಾನಸುಂದರ ಕರವೇ ಜಿಲ್ಲಾಧ್ಯಕ್ಷರು, ಕೊಪ್ಪಳ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 