ಕುರಿಗಾರರ ಅನುಗ್ರಹ ಪರಿಹಾರ ರದ್ದು ಕುರಿತು ಸುತ್ತೋಲೆ ಸರಕಾರ ಹಿಂಪಡೆದುಕೊಳ್ಳಬೇಕು

ಲೋಕದರ್ಶನ ವರದಿ

ಗದಗ 18: ಇವರೆಗೆ ಆಕಸ್ಮಿಕವಾಗಿ ಸತ್ತ ಕುರಿಗಳಿಗೆ ನೀಡುತ್ತಿದ್ದ  ಅನುಗ್ರಹ ಪರಿಹಾರವನ್ನು ಸರಕಾರ ರದ್ದುಗೊಳಿಸಿ ಸುತ್ತೂಲೆ ಹೊರಡಿಸುರುವದರಿಂದ ಕುರಿಗಾರರಿಗೆ ಅನ್ಯಾಯ ಮಾಡಿದಂತಾಗಿದೆ ಸರಕಾರ ತನ್ನ ಆದೇಶವನ್ನು ಹಿಂಎಗೆದುಕೊಂಡು ಬಾಕಿ ಇರುವ ಅಜರ್ಿಗಳಿಗೆ ಸಹಾಯಧನ ನೀಡಬೇಕು ಎಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ. 

ಕುರಿಗಾರರು ಬಹಳ ಸಂಕಷ್ಟದಲ್ಲಿ ಭದ್ರತೆಯಿಲ್ಲದೇ ಮಳೆ, ಗಾಳಿ, ಬಿಸಿಲು ಎನ್ನದೇ ಅಲೆಮಾರಿಗಳಾಗಿ ಜೀವನ ನಡೆಸುತ್ತಿರುವದರಿಂದ . ಇಂತಹ ಕುರಿಗಾರರ ನೆರವಿಗೆ   10-07-2017 ರಿಂದ  ಅಂದಿನ ಸಕರ್ಾರ ಆಕಸ್ಮಿಕ, ಸಾಂಕ್ರಾಮಿಕ ರೋಗಗಳಿಂದ  ಮರಣ ಹೊಂದಿದ್ದಲ್ಲಿ ಕುರಿ/ಮೇಕೆಗೆ 5  ಸಾವಿರ ರೂಗಳನ್ನು  ಪರಿಹಾರ ನೀಡಲು ಆದೇಶ ನೀಡಲಾಗಿತ್ತು. ಆದರೆ, ಇದೇ ಏ. 15 ರಂದು ಪಶುಪಾಲನೆ  ಮತ್ತು   ಪಶುವೈದ್ಯಕೀಯ ಸೇವಾ ಇಲಾಖೆಯು   ಸುತ್ತೋಲೆಯನ್ನು  ಹೊರಡಿಸಿದ್ದು  ಪರಿಹಾರಕ್ಕಾಗಿ  ಯಾವುದೇ ಅಜರ್ಿಗಳನ್ನು  ಸ್ವೀಕರಿಸದಿರಲು  ಸೂಚಿಸಿರುತ್ತಾರೆ.  ಇದು  ತುಂಬಾ  ಅನ್ಯಾಯದ ಸುತ್ತೋಲೆಯಾಗಿದ್ದು ಸಂಕಷ್ಟದಲ್ಲಿರುವ ಕುರಿಗಾರರಿಗೆ ಗಾಯದ ಮೇಲೆ ಬರೆ ಎಳೆಯುವಂತಾಗುತ್ತಿದೆ. ಬೇಸಿಗೆ ಸಮಯದಲ್ಲಿ ಕುರಿಗಳಿಗೆ ನೀರಿನ ಸಮಸ್ಯೆ, ಕಳ್ಳಕಾಕರ ಸಮಸ್ಯೆ  ಅಭದ್ರತೆಯಿಂದ  ಜೀವನ  ನಡೆಸುತ್ತಿರುವ ಕುರಿಗಾರರಿಗೆ ಅನ್ಯಾಯವಾಗಬಾರದು. ಕಳೆದ ಒಂದು ವರ್ಷದಿಂದ ಸತ್ತ 

ಕುರಿಗಳಿಗೆ ಪರಿಹಾರಕ್ಕಾಗಿ ಸಲ್ಲಿಸಿರುವ ಅಜರ್ಿಗಳಿಗೆ ಪರಿಹಾರ ಸಿಕ್ಕಿಲ್ಲ.  ಈ ಕೂಡಲೇ ಆ ಸುತ್ತೊಲೆಯನ್ನು ರದ್ದುಗೊಳಿಸಿ, ಬಾಕಿ ಇರುವ ಅಜರ್ಿಗಳಿಗೆ ಅನುಗ್ರಹ ಪರಿಹಾರವನ್ನು ನೀಡಬೇಕು ಹಾಗೂ ಪರಿಹಾರದ ಮೊತ್ತವನ್ನು ಸಹ ಹೆಚ್ಚುಗೊಳಿಸಿ ಅಲೆಮಾರಿ  ಕುರಿಗಾರರ ಸಮಸ್ಯೆಗಳಿಗೆ ಸ್ಪಂದಿಸಿ,  ನೆರವಿಗೆ ಮಾನ್ಯ ಮುಖ್ಯಮಂತ್ರಿಗಳು ಮುಂದಾಗಬೇಕೆಂದು  ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷರಾದ ರುದ್ರಣ್ಣ ಗುಳಗುಳಿ ಅವರು ಮನವಿ ಮಾಡಿದ್ದಾರೆ.