ಮುಂದಿನ ಹತ್ತು ವರ್ಷಗಳಲ್ಲಿ ಜಿಲ್ಲೆಯಲ್ಲಿ 5 ಕೋಟಿ ಗಿಡ ನೆಡುವ ಗುರಿ -ಸಚಿವ ಡಾ. ಎಂ.ಬಿ.ಪಾಟೀಲ

ಮುಂದಿನ ಹತ್ತು ವರ್ಷಗಳಲ್ಲಿ ಜಿಲ್ಲೆಯಲ್ಲಿ 5 ಕೋಟಿ ಗಿಡ ನೆಡುವ ಗುರಿ   -ಸಚಿವ ಡಾ. ಎಂ.ಬಿ.ಪಾಟೀಲ The goal is to plant 5 crore trees in the district in the next ten years - Minister Dr. M.B. Patil

ವಿಜಯಪುರ 07 :ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವೃಕ್ಷ ಅಭಿಯಾನ ಪ್ರತಿಷ್ಠಾನ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ  ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗೆ ಆಯೋಜಿಸಿದ ವೃಕ್ಷಥಾನ್ ಪಾರಂಪರಿಕ ಓಟ-2025 ಭಾನುವಾರ ಯಶಸ್ವಿಯಾಗಿ ಜರುಗಿತು. ಇಂದು ನಡೆದ  21 ಕಿ.ಮೀ, 10 ಕಿ.ಮೀ ಹಾಗೂ 5 ಕಿ.ಮೀ ವಿಭಾಗಗಳಲ್ಲಿ ನಡೆದ ವೃಕ್ಷಥಾನ್ ಪಾರಂಪರಿಕ ಓಟ ಕಾರ್ಯಕ್ರಮದಲ್ಲಿ ಹಲವು ಖ್ಯಾತನಾಮರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಮ್ಯಾರಥಾನ್‌ಗೆ ಚಾಲನೆ ನೀಡಿದ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು 5 ಕಿ.ಮೀ. ಓಡಿ ಯುವಕರನ್ನು ಹುರಿದುಂಬಿಸಿದರು. 

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಅವುಗಳ ಮಹತ್ವ  ಸಾರುವ ನಿಟ್ಟಿನಲ್ಲಿ  ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ರವಿವಾರ ಹಮ್ಮಿಕೊಂಡ ವೃಕ್ಷಥಾನ ಪಾರಂಪರಿಕ ಓಟದ ಬಹುಮಾನ ವಿತರಣೆ ಸಮಾರಂಭದಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಮಾತನಾಡಿ, ಭವಿಷ್ಯದಲ್ಲಿ ಪರಿಸರ ಹಾಗೂ ಭವ್ಯ ಸ್ಮಾರಕಗಳ ಸಂರಕ್ಷಣೆಯ ಆಶಯಗಳನ್ನೊಳಗೊಂಡ ಈ ಕಾರ್ಯಕ್ರಮದ ಉದ್ಧೇಶವಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಸ್ವಚ್ಚ ಸುಂದರ ಪರಿಸರ ಒದಗಿಸಿಕೊಡುವುದು ಹೊಣೆ ನಮ್ಮದಾಗಿದೆ. ಈ ಮೂಲಕ ಪರಿಸರ ಹಾಗೂ ಪಾರಂಪರಿಕ ಸ್ಮಾರಕಗಳ ರಕ್ಷಣೆಯ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ. ಪರಿಸರದ ಮಹತ್ವ ತಿಳಿಸಿಕೊಡುವುದು ಇಂದಿನ ಅಗತ್ಯವೂ ಆಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರಿಸರ ಕಾಳಜಿ ಹೊಂದಬೇಕು. ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಮಾರಕಗಳ ರಕ್ಷಣೆ, ಗಿಡ-ಮರಗಳನ್ನು ಬೆಳೆಸಿ ಸ್ವಚ್ಛ ಸುಂದರ ಪರಿಸರ ನಿರ್ಮಾಣ ಮಾಡುವ ಪ್ರತಿಯೊಬ್ಬರು ಕೈ ಜೋಡಿಸುವಂತೆ ಅವರು ಕರೆ ನೀಡಿದರು. 

ಜಿಲ್ಲೆಯಲ್ಲಿ ಹಲವಾರು ಐತಿಹಾಸಿಕ ಸ್ಮಾರಕಗಳಿವೆೆ. ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಣೆ ಮಾಡಿ, ಅಭಿವೃದ್ಧಿಪಡಿಸಿ ಸ್ಮಾರಕಗಳ ಬಗ್ಗೆ ವ್ಯಾಪಕ ತಿಳುವಳಿಕೆ ಮೂಡಿಸಬೇಕು. ವೃಕ್ಷಥಾನ ಪಾರಂಪರಿಕ ಓಟ ಇತಿಹಾಸ ನಿರ್ಮಾಣ ಮಾಡಿದೆ. ಜಲಸಂಪನ್ಮೂಲ ಸಚಿವನಾಗಿದ್ದ ಸಂದರ್ಭದಲ್ಲಿ  2016-17ರ ಅವಧಿಯಲ್ಲಿ ಕೋಟಿ ವೃಕ್ಷ ಅಭಿಯಾನ ಆರಂಭಿಸುವ ಮೂಲಕ ಜಿಲ್ಲೆಯ ಅರಣ್ಯೀಕರಣವನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಕೋಟಿ ವೃಕ್ಷ ಅಭಿಯಾನ ಪ್ರಾರಂಭ ಮಾಡಿ, ಜಿಲ್ಲೆಯಲ್ಲಿ 1.5 ಕೋಟಿ ಗಿಡಗಳನ್ನು ನೆಟ್ಟು ಪೋಷಿಸಲಾಗಿದೆ ಎಂದು ಅವರು ಹೇಳಿದರು. 

 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ, ವಿವಿಧ ಇಲಾಖೆ,ವೃಕ್ಷ ಅಭಿಯಾನ ಪ್ರತಿಷ್ಠಾನ ಸೇರಿದಂತೆ ಸಾರ್ವಜನಿಕರು ಸಂಘ-ಸಂಸ್ಥೆಗಳು, ಪಕ್ಷಾತೀತವಾಗಿ ಯುವಕರು ಕೈ ಜೋಡಿಸಿರುವುದರಿಂದ ಜನರಲ್ಲಿ ಜಾಗೃತಿ ಮೂಡಿಸಿ, ಜಿಲ್ಲೆಯ ಅರಣ್ಯ ಪ್ರದೇಶ ವಿಸ್ತೀರ್ಣ ಶೇ.0.17 ರಿಂದ ಶೇ.2 ಕ್ಕೆ ತಲುಪಲು ಸಾಧ್ಯವಾಗಿದೆ. 2035ರ ಹೊತ್ತಿಗೆ ಮುಂದಿನ ಹತ್ತು ವರ್ಷಗಳಲ್ಲಿ ಜಿಲ್ಲೆಯಲ್ಲಿ 5 ಕೋಟಿ ಗಿಡ ನೆಡುವ ಗುರಿ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಅರಣ್ಯೀಕರಣದ ಮಹತ್ವದ ಬಗ್ಗೆ ಜಾಗೃತಿ ಅಗತ್ಯವಾಗಿದೆ. ಪರಿಸರ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಸಿಗಳ ನೆಡುವ ಹಾಗೂ ಅರಣ್ಯೀಕರಣದ ಮೂಲಕ ಪರಿಸರ ಉಳಿಸಿ ಬೆಳೆಸಬೇಕು. ಸ್ಮಾರಕಗಳ ರಕ್ಷಣೆ  ವೃಕ್ಷಥಾನ ಆಯೋಜನೆಯ ಸಂದೇಶ ಸಾಕಾರಗೊಳ್ಳಲಿ, ಓಟದಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯವಾಗಿದೆ ಎಂದು ಅವರು ಹೇಳಿದರು.  

ಐತಿಹಾಸಿಕ ಸ್ಮಾರಕಗಳ ರಕ್ಷಣೆಯೊಂದಿಗೆ ಪರಿಸರ ಜಾಗೃತಿ ಮೂಡಿಸುವ ಅಂಗವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪರಿಸರ ರಕ್ಷಣೆ, ಪರಿಸರ ಪ್ರೇಮಿ ಹಾಗೂ ಪರಿಸರ ಕುರಿತು ಅಪಾರ ಕಾಳಜಿ ಹೊಂದಿದ್ದ ಜ್ಞಾನಯೋಗಾಶ್ರಮದ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಶ್ರೀಗಳ ಆಶಯದಂತೆ ಸ್ವಚ್ಛ ಸುಂದರ ಹಾಗೂ ಆರೋಗ್ಯಕರ ಜಿಲ್ಲೆಯಾಗಬೇಕೆಂಬ ಆಶಯದೊಂದಿಗೆ  ಈ ವೃಕ್ಷಥಾನ ಅತ್ಯಂತ ಮೆರಗಿನಿಂದ ಅಭಿಯಾನ ಹಮ್ಮಿಕೊಂಡು ಅವರ ಆಶಯದಂತೆ ಮುನ್ನಡೆಯಲಾಗುತ್ತಿದ್ದು, ಎಲ್ಲರ ಸಹಕಾರದಿಂದ ಯಶಸ್ವಿಯಾಗಿದೆ. ಈ ಕಾರ್ಯಕ್ಕೆ ಅಭೂತಪೂರ್ವ ಸಹಕಾರ ಹಾಗೂ ಪ್ರೋತ್ಸಾಹ ದೊರೆತು ಇತಿಹಾಸ ನಿರ್ಮಾಣವಾಗಿದೆ ಎಂದು ಅವರು ಹೇಳಿದರು. 

 ಜಿಲ್ಲೆಯ ಹಸರೀಕರಣ ಹಾಗೂ ಐತಿಹಾಸಿಕ ಸ್ಮಾರಕಗಳ ಮಹತ್ವ ಸಾರುವ ಈ ವಿಶೇಷವಾದ ಕಾರ್ಯಕ್ರಮಕ್ಕೆ  ಈ ಅಭೂತಪೂರ್ವ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಹಾಗೂ ಮ್ಯಾರಾಥಾನ್‌ನಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದ ಅವರು, ಪುರುಷರಿಗಿಂತ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಗಿರುವುದರಿಂದ ಇದೊಂದು ಅಭೂತಪೂರ್ವ ಯಶಸ್ವಿಗೆ ಕಾರಣವಾಗಿದೆ. ಎಲ್ಲರ ಸಹಭಾಗಿತ್ವದಲ್ಲಿ ಸುಂದರ ಪರಿಸರವನ್ನು ಕಾಪಾಡಿಕೊಂಡು ನಮ್ಮ ಮುಂದಿನ ಪೀಳಿಗೆಗೆ ನೀಡುವ ಬಹು ದೊಡ್ಡ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಅವರು ಹೇಳಿದರು.   

ಈ ಸಂದರ್ಭದಲ್ಲಿ  ಇಂಡಿ ತಾಲೂಕಿನ ಹಳಗುಣಕಿ ಗ್ರಾಮದ ಪೊಲೀಸ್ ಇಲಾಖೆಯ ಭೀಮಾಶಂಕರ ಮಾಡಗ್ಯಾಳ,ನ್ಯೂ ಮುಂಬೈನ ಅಥ್ಲಿಟ್ ಶ್ರೇಯಸ್ ಯಶವಂತ ರಾವ್,ಕೆಂಗಲಗುತ್ತಿ ಶಾಲಾ ಮುಖ್ಯೋಪಾಧ್ಯಾಯ ಹಣಮಂತ ಕಾತರಕಿ ಹಾಗೂ ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ಸಿಬ್ಬಂದಿ ಮೌಲಾಸಾಬ ಮೈನುದ್ದೀನಸಾಬ ಅವರನ್ನು ಸನ್ಮಾನಿಸಲಾಯಿತು. ವಿವಿಧ ವಿಭಾಗದ ಓಟಗಳಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ, ಪಾಲಿಕೆ ಮೇಯರ ಎಂ ಎಸ್‌. ಕರಡಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕನಾನ್ ಮುಶ್ರೀಪ್, ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಂಜುನಾಥ ಆರ್ ಚವ್ಹಾಣ, ಜಿಲ್ಲಾಧಿಕಾರಿ ಡಾ,ಆನಂದ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ನರೇಂದ್ರ, ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಪಿಕೆಎಂ ಪ್ರಶಾಂತ, ವೃಕ್ಷ ಅಭಿಯಾನ ಪ್ರತಿಷ್ಠಾನದ ಮಹಾಂತೇಶ ಬಿರಾದಾರ, ಸಂಚಾಲಕರಾದ ಮುರುಗೇಶ ಪಟ್ಟಣಶೆಟ್ಟಿ ಸೇರಿದಂತೆ ಹಿರಿಯ ಅಧಿಕಾರಿಗಳು, ಜಿಲ್ಲಾ ಮಟ್ಟದ ತಾಲೂಕ ಮಟ್ಟದ ಅಧಿಕಾರಿಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ವಿಜೇತರಿಗೆ ಬಹುಮಾನ ವಿತರಣೆ : ಇಂದು ನಡೆದ ವೃಕ್ಷಥಾನ್ ಓಟದಲ್ಲಿ ವಿವಿಧ 26 ವಿಭಾಗಗಳಲ್ಲಿ ಭಾಗವಹಿಸಿ ವಿಜೇತರಾದ ಓಟಗಾರರಿಗೆ ಬಹುಮಾನ ವಿತರಣೆ ಮಾಡಲಾಯಿತು.  ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ವೃಕ್ಷಥಾನ್‌:ಐತಿಹಾಸಿಕ ಸ್ಮಾರಕಗಳ ರಕ್ಷಣೆ, ಸಂರಕ್ಷಣೆ ಹಾಗೂ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಜಯಪುರ ನಗರದಲ್ಲಿ ಹಮ್ಮಿಕೊಂಡ ವೃಕ್ಷತ್ಥಾನ್ ಹೆರಿಟೇಜ್ ರನ್ ಕಾರ್ಯಕ್ರಮ ಅಭೂತಪೂರ್ವ ಯಶಸ್ವಿಯಾಗಿ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.  

ಈ ಓಟದಲ್ಲಿ ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ಸಚಿವರಾದ ಡಾ.ಎಂ.ಬಿ.ಪಾಟೀಲ,ಶಾಸಕರಾದ ವಿಠ್ಠಲ ಕಟಕಧೋಂಡ, ಪರಿಷತ್ತಿನ ಶಾಸಕರಾದ ಸುನೀಲಗೌಡ ಪಾಟೀಲ್, ಜಿಲ್ಲಾಧಿಕಾರಿ ಡಾ.ಆನಂದ ಕೆ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಎಸ್‌.ಪಿ.ಲಕ್ಷ್ಮಣ ನಿಂಬರಗಿ, ಅಮೃತಾನಂದ ಸ್ವಾಮೀಜಿ, ಶಿವಯೋಗೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಅತಿ ಉತ್ಸಾಹದಿಂದ ಓಟದಲ್ಲಿ ಪಾಲ್ಗೊಂಡು ಓಟಗಾರರಿಗೆ ಪ್ರೇರಣೆ ನೀಡಿ ಪ್ರೊತ್ಸಾಹಿಸಿದರು.  

ವಿವಿಧ ವಿಭಾಗದ ಓಟಗಳಿಗೆ ಚಾಲನೆ:ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ, ನಾಗಠಾಣ ಶಾಸಕರಾದ ವಿಠ್ಠಲ ಕಟಕಧೋಂಡ, ಪರಿಷತ್ತಿನ ಶಾಸಕರಾದ ಸುನೀಲಗೌಡ ಪಾಟೀಲ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಎಸ್‌.ಪಿ ಲಕ್ಷ್ಮಣ ನಿಂಬರಗಿ ಅವರು ವಿವಿಧ ವಿಭಾಗದ ಓಟಗಳಿಗೆ ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.  

ಮಹಿಳೆಯರು ಮತ್ತು ಪುರುಷರ ಎರಡು ಪ್ರತ್ಯೇಕ ವಿಭಾಗಗಳಲ್ಲಿ ಹಾಗೂ ನಾನಾ ವಯೋಮಾನದ ಕೆಟೆಗರಿಗಳಲ್ಲಿ ವಿಜೇತರ ವಿವರ 

21 ಕಿ. ಮೀ ಪುರುಷರ ವಿಭಾಗ  

18 ರಿಂದ 34 ವರ್ಷ- ಶಿವಾನಂದ ಚಿಗರಿ (ಪ್ರಥಮ), ಪ್ರವೀಣ ಕಾಂಬಳೆ (ದ್ವಿತೀಯ), ಪ್ರಜ್ವಲ ಎಸ್‌. ವೈ.- (ತೃತೀಯ) 35 ರಿಂದ 44 ವರ್ಷ- ನಂಜುಂಡಪ್ಪ ಎನ್‌. (ಪ್ರಥಮ), ರಾಮನಾಥ ಬೊಂಬಿಲವಾರ (ದ್ವಿತೀಯ), ವೀರಣ್ಣ ಬಂಡಿ- (ತೃತೀಯ) 45 ರಿಂದ 59 ವರ್ಷ- ಮಂಜೀತ ಸಿಂಗ್ (ಪ್ರಥಮ), ಸಾಲ್ವೆರಾಮ ಶಿಂಧೆ (ದ್ವಿತೀಯ), ಸೈಫುದ್ದೀನ್ ಎ. ಕೆ.- (ತೃತೀಯ) 60 ವರ್ಷ ಮೇಲ್ಪಟ್ಟವರು- ಪಾಂಡುರಂಗ ಚೌಗುಲೆ (ಪ್ರಥಮ), ಕೇಶವ ಮೋತೆ (ದ್ವಿತೀಯ), ಬಸವರಾಜ ಹುಂಬೆರಿ ತೃತೀಯ, 

21 ಕಿ. ಮೀ. ಮಹಿಳೆಯರ ವಿಭಾಗ 

18 ರಿಂದ 34 ವರ್ಷ- ಸುಶ್ಮಿತಾ ವಿ. ಎಂ. (ಪ್ರಥಮ), ಸುಧಾರಾಣಿ ಪೂಜಾರಿ (ದ್ವಿತೀಯ), ಅನುಪಮ ಪೂಜಾರಿ (ತೃತೀಯ) 35 ರಿಂದ 44 ವರ್ಷ- ದೀಪಿಕಾ ಪ್ರಕಾಶ (ಪ್ರಥಮ), ತಾನ್ಯ ಅಬ್ರಹಾಂ ಗಂಗೂಲಿ (ದ್ವಿತೀಯ), ನಾಗರತ್ನ ಯಲಗೊಂಡೆ (ತೃತೀಯ) 45 ರಿಂದ 59 ವರ್ಷ- ಸವಿತಾ ಕಲ್ಲೂರ (ಪ್ರಥಮ) 60 ವರ್ಷ ಮೇಲ್ಪಟ್ಟವರು- ಸುಲತಾ ಕಾಮತ (ಪ್ರಥಮ) 

10 ಕಿ. ಮೀ. ಪುರುಷರ ವಿಭಾಗ 

18 ರಿಂದ 34 ವರ್ಷ- ಸುಮಂತ ರಾಜಭರ (ಪ್ರಥಮ), ಅನಿಕೇತ ದೇಶಮುಖ (ದ್ವಿತೀಯ), ಭೈರು ಭೈರು (ತೃತೀಯ), 35 ರಿಂದ 44 ವರ್ಷ- ಪರಶುರಾಮ ಭೊಯಿ (ಪ್ರಥಮ), ಸಂಜಯ ನೇಗಿ (ದ್ವಿತೀಯ), ಪ್ರಶಾಂತ ಶಿರಹಟ್ಟಿ (ತೃತೀಯ),  45 ರಿಂದ 59 ವರ್ಷ- ಪರಶುರಾಮ ಗುಣಗಿ (ಪ್ರಥಮ), ದವ್ಯ ಸಂಚೀಸ್ (ದ್ವಿತೀಯ), ರಂಜಿತ ಕಣಬರಕರ (ತೃತೀಯ), 60 ವರ್ಷ ಮೇಲ್ಪಟ್ಟವರು- ವಿರುಪಾಕ್ಷಿ ಬಲಕುಂದಿ (ಪ್ರಥಮ), ಶಶಿಕಾಂತ ಬೆದ್ರೆ (ದ್ವಿತೀಯ), ಬಸವರಾಜ ಬಿಜ್ಜರಗಿ (ತೃತಿಯ) 

10 ಕಿ. ಮೀ. ಮಹಿಳೆಯರ ವಿಭಾಗ 

18 ರಿಂದ 34 ವರ್ಷ- ಶಹೀನ ಎಸ್‌. ಡಿ. (ಪ್ರಥಮ), ಪ್ರಿಯಾ ಪಾಟೀಲ (ದ್ವಿತೀಯ), ವಿನಿತಾ ಪಾಲ (ತೃತೀಯ), 35 ರಿಂದ 44 ವರ್ಷ- ಚಂದನ ಕಲಿತಾ (ಪ್ರಥಮ) ಹುಸೇನಿಬಾಷಾ ಸೈಯ್ಯದ ದ್ವಿತೀಯ, ಸ್ಮೀತಾ ಬಿರಾದಾರ (ತೃತೀಯ), 45 ರಿಂದ 59 ವರ್ಷ- ಮೇಘನಾ ಬಾಳಿಕಾಯಿ ಪ್ರಥಮ, ಶೈಲಜಾ ಪಾಟೀಲ ದ್ವಿತೀಯ, ಶಕುಂತಲಾ ಎಸ್‌. ತೃತೀಯ, 60 ವರ್ಷ ಮೇಲ್ಪಟ್ಟವರು- ಪಾರ್ವತಿ ಬಿ. ಸಿ. ಪ್ರಥಮ 

5 ಕಿ. ಮೀ. ಪುರುಷರ ವಿಭಾಗ 

12 ರಿಂದ 17 ವರ್ಷ- ಅಬೂಬಕರ ಕಡಬಿ ಪ್ರಥಮ, ಪ್ರೇಮ ಡಾಂಗೆ ದ್ವಿತೀಯ, ಪುಷ್ಪೇಂದ್ರ ತೃತೀಯ,  18 ರಿಂದ 34 ವರ್ಷ- ಶ್ರೀಕಂಠ ಪ್ರಥಮ, ವಿಜಯ ಸಂಜಯ ದ್ವಿತೀಯ, ಈರ​‍್ಪ ಬ್ಯಾಡಗಿ ತೃತೀಯ, 35 ರಿಂದ 44 ವರ್ಷ- ರಾಜು ಪಿರಗಣ್ಣನವರ ಪ್ರಥಮ, ಸುರೇಶ ಎಂ. ದ್ವಿತೀಯ, ಸುರೇಶ ಐ. ಬಿರಾದಾರ ತೃತೀಯ, 45 ರಿಂದ 59 ವರ್ಷ- ತುಳಜಪ್ಪ ದಾಸರ ಪ್ರಥಮ, ಅತುಲ ಬಂಡಿವಡ್ಡರ ದ್ವಿತೀಯ, ಡಾ. ಜಿ. ಡಿ. ಅಕಮಂಚಿ ತೃತೀಯ, 60 ವರ್ಷ ಮೇಲ್ಪಟ್ಟವರು- ಸಂಜಯ ಆನಂದ ಪಾಟೀಲ ಪ್ರಥಮ, ಉದಯ ಮಹಾಜನ ದ್ವಿತೀಯ, ಕದೀರಅಹ್ಮದ್ ಮಣಿಯಾರ ತೃತೀಯ  

5 ಕಿ. ಮೀ. ಮಹಿಳೆಯರ ವಿಭಾಗ 

12 ರಿಂದ 17 ವರ್ಷ- ಆರೋಹಿ ಪಟಮಾಸ ಪ್ರಥಮ, ಅಂಕಿತಾ ಯಾದವ ದ್ವಿತೀಯ, ಸ್ವರಾಂಜಲಿ ಭಾಂಡಗೆ ತೃತೀಯ, 18 ರಿಂದ 34 ವರ್ಷ- ನೂರಜಹಾನ ಮುಜಾವರ ಪ್ರಥಮ, ವಿಜಯಲಕ್ಣ್ಮಿ ಕರಲಿಂಗಣ್ಣನವರ ದ್ವಿತೀಯ, ನಕುಶಾ ಮಾನೆ ತೃತೀಯ, 35 ರಿಂದ 44 ವರ್ಷ- ಉಮಾ ಎಸ್‌. ಎಂ.,ಪ್ರಥಮ, ವೈಶಾಲಿ ಕೇಶವ ಗುಂಟುಕ ದ್ವಿತೀಯ, ಎಸ್‌. ಬಿ. ಕರಿಕಬ್ಬಿ ತೃತೀಯ, 45 ರಿಂದ 59 ವರ್ಷ- ವಿದ್ಯಾ ಬಿ. ಎಚ್‌. ಪ್ರಥಮ, ಆರ್‌. ವಿ. ಸೂರ್ಯವಂಶಿ ದ್ವಿತೀಯ, ಶೈಲಜಾ ಇಂಗಳೇಶ್ವರ ತೃತೀಯ, 60 ವರ್ಷ ಮೇಲ್ಪಟ್ಟವರು- ಗ್ಲ್ಯಾಡಿಸ್ ಪೈಸ್ ಪ್ರಥಮ, ಗಂಗವ್ವ ಬೆಳಗಾವಿ ದ್ವಿತೀಯ, ನೂರಜಹಾನ ಹುಲ್ಲೂರ ತೃತೀಯ ಸ್ಥಾನ ಪಡೆದಿದ್ದಾರೆ.