ಮೊದಲು ತಿಳುವಳಿಕೆ - ನಂತರ ದಂಡ ಕಾರ್ಯಕ್ರಮ
ಧಾರವಾಡ 08: ಸರಕು ಸಾಗಣಿಕೆ ವಾಹನದಲ್ಲಿ ಕೂಲಿಕಾಮರ್ಿಕರನ್ನು, ಸಾರ್ವಜನಿಕರನ್ನು ಕೊಂಡುಯ್ಯುವುದು ಅಪರಾಧ. ಈ ಕುರಿತು ವಾಹನ ಚಾಲಕರಿಗೆ, ಮಾಲಿಕರಿಗೆ, ಕಾಮರ್ಿಕರಿಗೆ ಮತ್ತು ಸಾರ್ವಜನಿಕರಿಗೆ ಆರಂಭದಲ್ಲಿ ತಿಳುವಳಿಕೆ ನೀಡುವುದು ಮತ್ತು ತಿಳುವಳಿಕೆ ನೀಡಿದ ಮೇಲೂ ನಿಯಮ ಮೀರಿ ತಪ್ಪು ಮಾಡಿದರೆ.
ಅಂತಹ ವಾಹನ ಚಾಲಕರಿಗೆ ದಂಡ ವಿಧಿಸಿ, ವಾಹನ ಜಪ್ತಿ ಮಾಡುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚನೆ ನೀಡಿದ್ದರಿಂದ ಇಂದಿನಿಂದ ಧಾರವಾಡ ನಗರ ಸಂಚಾರಿ ಪೊಲೀಸ್ರು ಪ್ರಮುಖ ಸ್ಥಳಗಳಲ್ಲಿ "ಮೊದಲು ತಿಳುವಳಿಕೆ - ನಂತರ ದಂಡ" ಕಾರ್ಯಕ್ರಮ ಆರಂಭಿಸಿದ್ದಾರೆ.
ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ಹಾಗೂ ಸಹಾಯಕ ಪೊಲೀಸ್ ಆಯುಕ್ತ ಎಂ.ಎನ್.ರುಪ್ರಪ್ಪ ಅವರ ಮಾರ್ಗದರ್ಶನದಲ್ಲಿ ಬೆಳಿಗ್ಗೆ 9 ಗಂಟೆಯುಂದ ಸಿ.ಪಿ.ಐ ಮುರಗೇಶ ಚನ್ನಣ್ಣವರ ನೇತೃತ್ವದಲ್ಲಿ 7 ತಂಡಗಳಾಗಿ ಕಾರ್ಯಚರಣೆ ಕೈಗೊಂಡಿದ್ದಾರೆ.
ಪ್ರತಿ ತಂಡದಲ್ಲಿ ಒರ್ವ ಎಎಸ್ಐ ಹಾಗೂ ಇಬ್ಬರು ಸಂಚಾರಿ ಪೊಲೀಸ್ ಪೆದೆಗಳಿದ್ದಾರೆ. ಧಾರವಾಡ ನಗರಕ್ಕೆ ಬಂದು ಸೇರುವ ಮುಖ್ಯ ರಸ್ತೆಗಳಾಗಿರುವ ಸವದತ್ತಿ, ಬೆಳಗಾವಿ, ಹಳಿಯಾಳ, ಅಳ್ನಾವರ, ಕಲಘಟಗಿ ಮತ್ತು ನವಲಗುಂದ ರಸ್ತೆಗಳಲ್ಲಿ ಹಾಗೂ ಕೂಲಿಕಾಮರ್ಿಕರು ಹೆಚ್ಚಾಗಿ ಸೇರುವ ಜನಸಂದಣಿ ಪ್ರದೇಶ ಆಗಿರುವ ನಗರ ಬಸ್ ನಿಲ್ದಾಣದಲ್ಲಿ ಪ್ರತ್ಯೇಕ ತಂಡಗಳಾಗಿ ಜನ ಜಾಗೃತಿ ಮೂಡಿಸಲಾಗುತ್ತಿದೆ.
ಸರಕು ಸಾಗಾಣಿಕೆ ವಾಹನ, ಕಟ್ಟಡ ಸಾಮಾಗ್ರಿ ಸಾಗಾಣಿಕೆ ವಾಹನದಲ್ಲಿ ಯಾವುದೇ ರೀತಿಯ ಪ್ರಯಾಣಿಕರನ್ನು ಸಾಗಿಸುವುದು ಅಪರಾಧ ಮತ್ತು ಅಪಾಯಕರ ಎಂಬುದನ್ನು ಪ್ರತಿ ವಾಹನಗಳ ಚಾಲಕರಿಗೆ ಮತ್ತು ಅದರಲ್ಲಿನ ಪ್ರಯಾಣಿಕರಿಗೆ ಮುಂದಿನ ಮೂರು ದಿನಗಳ ವರೆಗೆ ತಿಳುವಳಿಕೆ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ.
ಮೋದಲ ಸಲ ಯಾವುದೇ ದಂಡವಿಧಿಸದೆ ತಿಳುವಳಿಕೆ ನೀಡಿ ವಾಹನದ ನಂಬರ ತೆಗೆದುಕೊಂಡು ಕಳಿಸಲಾಗುತ್ತಿದೆ. ನಂತರ ಅದೇ ವಾಹನ, ಚಾಲಕ ಅಂತಹ ತಪ್ಪು ಮಾಡಿದರೆ ಸೂಕ್ತ ದಂಡ ವಿಧಿಸಿ, ವಾಹನ ಜಪ್ತಿ ಮಾಡಲಾಗುತ್ತದೆ ಎಂದು ಸಿ.ಪಿ.ಐ. ಮುರಗೇಶ ಚನ್ನಣ್ಣವರ ಎಚ್ಚರಿಕೆ ನೀಡಿ ಚಾಲಕರನ್ನು ಕಳಿಸಿದರು.
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ 