ಬೆಂಗಳೂರು 13: ಪ್ರತಿಷ್ಠಿತ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸೂಕ್ತ ಅಭ್ಯಥರ್ಿಗಳು ಸಿಗದ ಕಾರಣ ಕಾಂಗ್ರೆಸ್
ಈ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ.
ಇದರಿಂದ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ. ತೆನೆಹೊತ್ತ ಮಹಿಳೆಯಿಂದ ಮಾಜಿ ಶಾಸಕ ಹಾಗೂ
ದಿವಂಗತ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಪುತ್ರ ಮಧುಬಂಗಾರಪ್ಪ ಕಣಕ್ಕಿಳಿಯುವ ಸಾಧ್ಯತೆ ಇದೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಪಕ್ಷದ
ಪ್ರಮುಖರ ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯಥರ್ಿಯನ್ನು ಪಕ್ಷದ ವತಿಯಿಂದ ಅಭ್ಯಥರ್ಿಯನ್ನು ಕಣಕ್ಕಿಳಿಸುವ ಬಗ್ಗೆ ಚಚರ್ೆ ನಡೆಸಲಾಯಿತು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕಾಯರ್ಾಧ್ಯಕ್ಷ ಈಶ್ವರ್ ಖಂಡ್ರೆ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್,
ಸಚಿವರಾದ ಡಿ.ಕೆ.ಶಿವಕುಮಾರ್,
ಕೆ.ಜೆ.ಜಾಜರ್್ ಮತ್ತಿತರರು
ಭಾಗವಹಿಸಿದ್ದರು.
ಸಭೆಯಲ್ಲಿ ಶಿವಮೊಗ್ಗವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟರೆ ಪಕ್ಷದ ಮೇಲಾಗುವ ಪರಿಣಾಮಗಳ ಬಗ್ಗೆಯೂ ಚಚರ್ೆ ನಡೆಸಲಾಯಿತು. ಬಿಜೆಪಿ ಅಭ್ಯಥರ್ಿ ಬಿ.ವೈ.ರಾಘವೇಂದ್ರ
ವಿರುದ್ಧ ಸಚಿವರಾದ ಕಾಗೋಡು ತಿಮ್ಮಪ್ಪ , ಕಿಮ್ಮನೇ ರತ್ನಾಕರ, ಮಾಜಿ ಶಾಸಕ ಗೋಪಾಲಕೃಷ್ಣ
ಬೇಳೂರು ಸೇರಿದಂತೆ ಮತ್ತಿತರರನ್ನು ಕಣಕ್ಕಿಳಿಸುವ ಬಗ್ಗೆ ಅಭಿಪ್ರಾಯ ವ್ಯಕ್ತವಾಯಿತು.
ಆದರೆ ಯಾರೊಬ್ಬರೂ ಸ್ಪಧರ್ೆಗೆ
ಮುಂದೆ ಬಾರದ ಕಾರಣ ಅಂತಿಮವಾಗಿ
ಜೆಡಿಎಸ್ಗೆ ಕ್ಷೇತ್ರ ಬಿಟ್ಟುಕೊಡಲು ಸಭೆಯಲ್ಲಿ ಒಮ್ಮತದ ತೀಮರ್ಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಮಂಗಳವಾರ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ.ವಿದೇಶ
ಪ್ರವಾಸದಲ್ಲಿರುವ ಮಧುಬಂಗಾರಪ್ಪ ನಗರಕ್ಕೆ ಆಗಮಿಸಲಿದ್ದು, ಮಂಗಳವಾರ ಅಧಿಕೃತ ಅಭ್ಯಥರ್ಿಯಾಗಿ ನಾಮಪತ್ರ
ಸಲ್ಲಿಸಲಿದ್ದಾರೆ.