ಕಾರವಾರ 14: ಕಾಲಿಲ್ಲದ ನಾನು ಬಾನಂಗಳಕ್ಕೆ ಹಾರುತ್ತೇನೆ... ಮತ ಚಲಾಯಿಸಲು ನೀವು ಮತಗಟ್ಟೆಗೆ ಬನ್ನಿ.. ಇದು ಕಾರವಾರ ತಾಲೂಕಿನ ಕಟ್ಟಿನಕೊಣದ ಉದಯ್ ತಾಳೇಕರ್ ಅವರ ಗಾಂಧೀಗಿರಿ.
ಉತ್ತರ ಕನ್ನಡ ಜಿಲ್ಲಾಡಳಿತ ಜಿಲ್ಲಾ ಸ್ವೀಪ್ ವತಿಯಿಂದ ಭಾನುವಾರ ಕಾರವಾರದಲ್ಲಿ ದಿವ್ಯಾಂಗ ಮತದಾರರಿಗಾಗಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿಗಾಗಿ ದಿವ್ಯಾಂಗರ ಪ್ಯಾರಾ ಮೋಟಾರ್ ಗ್ಲೈಡಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರವಾರ ತಾಲೂಕು ಕಟ್ಟಿನಕೊಣದ ಉದಯ್ ತಾಳೇಕರ್ ಹೀಗೇ ಹೇಳಿದರು.
ಕಾಲಿಲ್ಲದ ನಾನು ಬಾನಂಗಳಕ್ಕೆ ಹಾರುವ ಖುಷಿಯಿದೆ. ಪ್ರಜಾಪ್ರಭುತ್ವದ ಗೆಲುವಿಗಾಗಿ ಎಲ್ಲರೂ ಏಪ್ರಿಲ್ 23ರಂದು ತಪ್ಪದೆ ಮತ ಚಲಾಯಿಸಬೇಕು ಎಂದು ಕರೆ ನೀಡಿದರು. ಮತದಾರರ ಜಾಗೃತಿಗಾಗಿ ಈಗಾಗಲೇ ಎಲ್ಲ ವಿಕಲಚೇತನರೊಂದಿಗೆ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದೆವು. ಇಂದು ಪ್ಯಾರಾ ಗ್ಲೈಡಿಂಗ್ ಮಾಡಿ ಆಕಾಶಕ್ಕೆ ಹಾರಿದ್ದು ಖುಚಿ ತಂದಿದೆ. ಕಾಲಿಲ್ಲದ ನನಗೆ ಮತ್ತಷ್ಟು ಆತ್ಮ ವಿಶ್ವಾಸ ಮೂಡಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಎಲ್ಲರೂ ತಪ್ಪದೆ ಮತ ಚಲಾಯಿಸಬೇಕು ಎಂಬುದು ನಮ್ಮ ಸಂದೇಶ ಎಂದರು.
ಕಿನ್ನರದ ಮಲ್ಲೇಶ ಕೊಟಾರ್ಕರ್, ಶಿರವಾಡದ ಸಂದೀಪ್ ಮೊಗಳೇಕರ್, ಆಸ್ನೋಟಿಯ ಪ್ರಸಾದ್ ಸಳುಂಕೆ, ಹೊಟೇಗಾಳಿಯ ಸುಹಾಸ್ ತಾಳೇಕರ್ ಸೇರಿದಂತೆ ವಿವಿಧ ವಿಕಲ ಚೇತನ ಮತದಾರರು ಹಾರಾಟ ಮಾಡಿದರು. ಜಿಲ್ಲಾಧಿಕಾರಿ ಡಾ.ಹರೀಶ್ಕುಮಾರ್ ಕೆ. ಅವರು ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಲೋಕಸಭಾ ಚುನವಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ವಿಶೇಷವಗಿ ವಿಕಲ ಚೇತನ ಮತದಾರರಿಗಾಗಿ ಮತಗಟ್ಟೆಗಳಲ್ಲಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಇಂದು ವಿಕಲಚೇತನರಿಗಾಗಿ ಪ್ಯಾರಾ ಮೋಟಾರ್ ಗ್ಲೈಡಿಂಗ್ ಮಾಡಿಸಲಾಗುತ್ತಿದೆ. ಇದರಿಂದ ವಿಕಲ ಚೇತನರಲ್ಲಿ ಹಾಗೂ ಎಲ್ಲ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಅಗಿರುವ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಎಂ.ರೋಷನ್ ಅವರು, ಕಾಲಿಲ್ಲದ ವಿಕಲ ಚೇತನರೇ ಮತದಾನ ಮಾಡುವ ವಿಶ್ವಾಸ ತೋರಿ ಬಾನಂಗಳಕ್ಕೆ ಹಾರುತ್ತಾರೆ ಎಲ್ಲ ಸರಿಯಿರುವ ನಾವುಗಳು ಮತಗಟ್ಟೆಗೆ ತೆರಳಿ ಯಾಕೆ ಮತ ಚಲಾಯಿಸಬಾರದು. ಈ ಸಂದೇಶವನ್ನು ಇಂದು ವಿಕಲ ಚೇತನ ಮತದಾರರು ಪ್ಯಾರಾ ಗ್ಲೈಡಿಂಗ್ ಮಾಡುವ ಮೂಲಕ ಸಂದೇಶ ನೀಡಿದ್ದಾರೆ ಎಂದರು.
ಈಗಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಚುನಾವಣೆಗಾಗಿ ಎಲ್ಲ ಸಿದ್ಧತೆಗಳನ್ನು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಮಾಡಲಾಗಿದೆ. ಮತಗಟ್ಟೆಯಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿಕಲಚೇತನ ಮತದಾರರಿಗೆ ಗಾಲಿಕುಚರ್ಿ, ವಾಹನ ಸೌಲಭ್ಯ, ಮತಗಟ್ಟೆಯಲ್ಲಿ ಭೂತಗನ್ನಡಿ, ಬ್ರೈಲ್ಲಿಪಿ ಹೀಗೆ ನಾನಾ ಅನುಕೂಲಗಳನ್ನು ಕಲ್ಪಿಸಲಾಗಿದ್ದು ಈ ಬಾರಿಯ ಮತದಾನ ಪ್ರಮಾಣದಲ್ಲಿ ಸುಧಾರಣೆಯನ್ನು ನಿರೀಕ್ಷಿಸಲಾಗಿದೆ ಎಂದರು. ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿ ಅಜ್ಜಪ್ಪ ಸೊಗಲದ, ಜಿಲ್ಲಾ ವಾತರ್ಾಧಿಕಾರಿ ಹಿಮಂತರಾಜು ಜಿ. ಉಪಸ್ಥಿತರಿದ್ದರು.